Advertisement

ಸಾಕ್ಷ್ಯ ಹೇಳುವವರಿಗೆ ರಕ್ಷಣೆ ನಿಯಮಕ್ಕೆ ಸುಪ್ರೀಂ ಓ.ಕೆ.

06:00 AM Dec 06, 2018 | |

ಹೊಸದಿಲ್ಲಿ: ನ್ಯಾಯಾಲಯಗಳಲ್ಲಿ ಸಾಕ್ಷ್ಯ ನುಡಿಯುವವರಿಗೆ ರಕ್ಷಣೆ ನೀಡುವುದರ ಬಗ್ಗೆ ಇರುವ ಕರಡು ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್‌ ಬುಧವಾರ ಅಂಗೀಕಾರ ನೀಡಿದೆ. ಹೀಗಾಗಿ ಇಂಥ ಕಾನೂನುಗಳನ್ನು ಹೊಂದಿರುವ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿದಂತಾಗಲಿದೆ. ಸಂಸತ್‌ನಲ್ಲಿ ಈ ಬಗ್ಗೆ ಸೂಕ್ತ ಕಾನೂನು ರಚನೆ ಯಾಗುವ ವರೆಗೆ ಎಲ್ಲಾ ರಾಜ್ಯಗಳು ಅದನ್ನು ಜಾರಿ ಮಾಡ ಬೇಕು ಎಂದು ನ್ಯಾ.ಎ.ಕೆ.ಸಿಕ್ರಿ ಅವರ ನ್ನೊಳಗೊಂಡ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಸೂಚಿಸಿದೆ. ದೇವಮಾನವ ಅಸಾರಾಂ ಬಾಪು ವಿರುದ್ಧದ ಪ್ರಕರಣದಲ್ಲಿ ಸಾಕ್ಷಿಗಳ ವಿರುದ್ಧ ಹಲ್ಲೆ, ಬೆದರಿಕೆ ಯೊಡ್ಡುವ ಘಟನೆಗಳು ನಡೆದಿವೆ ಎಂದು ವರದಿ ಯಾಗಿದ್ದ ಹಿನ್ನೆಲೆ ಯಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಕಾನೂನು ರಚಿಸುವಂತೆ ಸೂಚಿಸಿತ್ತು. 

Advertisement

ಸಾಕ್ಷ್ಯಗಳ ರಕ್ಷಣಾ ಯೋಜನೆ 2018 ರಾಷ್ಟ್ರ ಮಟ್ಟದಲ್ಲಿ ವಿಶೇಷ ಯೋಜನೆಯಾಗಿದೆ. ತನಿಖೆ ವೇಳೆ ಸಾಕ್ಷ್ಯ ಹೇಳುವವರಿಗೆ ರಕ್ಷಣೆ ನೀಡುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಜತೆಗೆ ಆರೋಪಕ್ಕೆ ಗುರಿ ಯಾದವರು ಮತ್ತು ಸಾಕ್ಷ್ಯ ನುಡಿಯುವವರು ಮುಖಾಮುಖೀ ಯಾಗಬಾರದು ಎಂದು ಸೂಚಿಸಲಾಗಿದೆ. ಅಮೆರಿಕ, ಯು.ಕೆ., ಚೀನಾಗಳಲ್ಲಿ ಈ ಕಾನೂನು ಇದೆ. 

Advertisement

Udayavani is now on Telegram. Click here to join our channel and stay updated with the latest news.

Next