Advertisement

ಕುಷ್ಠರೋಗಿಗಳಿಗೆ ಅಭಯ

12:00 PM Sep 15, 2018 | Karthik A |

ಹೊಸದಿಲ್ಲಿ: ಕುಷ್ಠರೋಗಿಗಳನ್ನು ಸಮಾಜ ನೋಡುವ ರೀತಿಯನ್ನು ಬದಲಿಸುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರಕ್ಕೆ ಶುಕ್ರವಾರ ಕೆಲ ನಿರ್ದೇಶನಗಳನ್ನು ನೀಡಿದೆ. ಕುಷ್ಠರೋಗಿಗಳಿಗೆ ವಿಕಲಾಂಗ ಪ್ರಮಾಣಪತ್ರ ನೀಡಲೆಂದೇ ಪ್ರತ್ಯೇಕ ನಿಯಮಗಳನ್ನು ರಚಿಸುವ ಮೂಲಕ ಅವರೂ ಮೀಸಲಾತಿ ಹಾಗೂ ಇತರೆ ಸವಲತ್ತುಗಳನ್ನು ಪಡೆಯಲು ನೆರವಾಗುವಂತೆ ಸೂಚಿಸಿದೆ. ರೋಗಿಗಳಿಗೆ ಬಿಪಿಎಲ್‌ ಕಾರ್ಡ್‌ ವಿತರಣೆ, ಸಮುದಾಯ ಆಧರಿತ ಪುನರ್ವಸತಿ ಯೋಜನೆ, ಅವರನ್ನು ಏಕಾಂಗಿಯಾಗಿಸದೇ ಇರುವ ಬಗ್ಗೆ ಹಾಗೂ ತಾರತಮ್ಯ ಮಾಡದಂತೆ ಕ್ರಮ, ಜನಜಾಗೃತಿ ಮೂಡಿಸುವಂತೆಯೂ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next