Advertisement

ಸಿಜೆಐಗೆ ಶಿಕ್ಷೆ ವಿಧಿಸಿದ ಜ.ಕರ್ಣನ್ ಗೆ ಸುಪ್ರೀಂನಿಂದ 6 ತಿಂಗಳು ಜೈಲು

11:35 AM May 09, 2017 | udayavani editorial |

ಹೊಸದಿಲ್ಲಿ : ಕೋರ್ಟ್‌ ನಿಂದನೆಯ ಅಪರಾಧಕ್ಕಾಗಿ ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ಕಲ್ಕತ್ತ ಹೈಕೋರ್ಟ್‌ ಜಸ್ಟಿಸ್‌ ಸಿ ಎಸ್‌ ಕರ್ಣನ್‌ ಅವರಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸುವ ಮೂಲಕ ದೇಶದ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯವೊಂದರ ಜಸ್ಟಿಸ್‌ಗೆ ಶಿಕ್ಷೆ ನೀಡುವ ದಾಖಲೆಯನ್ನು ಮಾಡಿದೆ. 

Advertisement

ನ್ಯಾಯಾಂಗ ನಿಂದನೆ ಮಾತ್ರವಲ್ಲದೆ ಸುಪ್ರೀಂ ಕೋರ್ಟಿನ ಅನೇಕ ನ್ಯಾಯಾಧೀಶರುಗಳ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿರುವ ಕರ್ಣನ್‌ ಅವರು ಈ ಕೂಡಲೇ ಬಂಧಿಸಬೇಕೆಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ. 

ನಿನ್ನೆ ಸೋಮವಾರವಷ್ಟೇ ಜಸ್ಟಿಸ್‌ ಕರ್ಣನ್‌ ಅವರು ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌ ಮತ್ತು ಇತರ ಏಳು ನ್ಯಾಯಾಧೀಶರುಗಳಿಗೆ ಐದು ವರ್ಷಗಳ ಕಠಿನ ಸಜೆ ವಿಧಿಸಿದ್ದರು. 

“ದಲಿತ ನ್ಯಾಯಾಧೀಶನಿಗೆ ಸಮಾನ ಉದ್ದೇಶದಿಂದ ಕಿರುಕುಳ ನೀಡುವ ಮೂಲಕ ಸುಪ್ರೀಂ ಕೋರ್ಟಿನ ಎಂಟು ನ್ಯಾಯಾಧೀಶರು ಅಪರಾಧ ಎಸಗಿದ್ದಾರೆ’ ಎಂದು ಕರ್ಣನ್‌ ತನ್ನ ಆದೇಶದಲ್ಲಿ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next