ಕುರಿತ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿದೆ. ಮಾ.27ರಂದು ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿ, ಬಿಎಸ್4 ಮಾದರಿಯ ವಾಹನಗಳ ಮಾರಾಟ ಮತ್ತು ನೋಂದಣಿ ತಡೆ ಗಡುವನ್ನು ಸ್ವಲ್ಪ ಸಡಿಲಿಸಿತ್ತು. ದಿಗ್ಬಂಧನ ತೆರವಾದ ಮೇಲೆ 10 ದಿನಗಳವರೆಗೆ ಈ ಪ್ರಕ್ರಿಯೆ ನಡೆಸಬಹುದೆಂದು ತಿಳಿಸಿತ್ತು.
ಆದರೆ ದಿಗ್ಬಂಧನವಿದ್ದಾಗಲೇ ವಿಪರೀತ ಪ್ರಮಾಣದಲ್ಲಿ ವಾಹನಗಳ ನೋಂದಣಿ ಮತ್ತು ಮಾರಾಟ ನಡೆದಿತ್ತು.
Advertisement
ನ್ಯಾಯಪೀಠ ಕೇವಲ 1.05 ಲಕ್ಷ ವಾಹನಗಳ ನೋಂದಣಿಗೆ ಅವಕಾಶ ನೀಡಿದ್ದರೂ, 2.55 ಲಕ್ಷ ವಾಹನಗಳ ಮಾರಾಟ ನಡೆದಿತ್ತು. ಇದರಿಂದ ಸಿಟ್ಟಾಗಿರುವನ್ಯಾಯಪೀಠ, ಇಲ್ಲೇನೋ ಅಕ್ರಮ ನಡೆದಿದೆ. ನಿಮ್ಮ ಮೇಲೆ ನಾವು ಕ್ರಮ ಕೈಗೊಳ್ಳಬೇಕಾಗು ತ್ತದೆ. ಈ ಬಗ್ಗೆ ಪೂರ್ಣ ಮಾಹಿತಿ ಸಲ್ಲಿಸಿ ಎಂದು ಫೆಡರೇಷನ್ ಆಫ್
ಆಟೋ ಡೀಲರ್ಸ್‌ಗೆ (ಫಾಡಾ) ತಿಳಿಸಿದೆ. ಇದರಿಂದ ಈ ವಾಹನಗಳನ್ನು ಕೊಂಡವರು ನೋಂದಣಿ ಮಾಡಿಸಲು ಸಾಧ್ಯವಾಗದೇ ಅತಂತ್ರರಾಗಿದ್ದಾರೆ. ಸದ್ಯ ಭಾರತದಲ್ಲಿ ಬಿಎಸ್6ಗೆ ಅನುಗುಣವಾಗಿ ವಾಹನ ತಯಾರಿ ನಿಯಮ ಜಾರಿಯಲ್ಲಿದೆ. ಆದ್ದರಿಂದ ಬಿಎಸ್4 ಮಾದರಿಯ ವಾಹನಗಳು ಇತಿಹಾಸ ಸೇರಿಕೊಳ್ಳುತ್ತಿವೆ.