Advertisement

Delhi Govt; ರಾಜಕೀಯ ಕಲಹದಿಂದ ಹೊರಬನ್ನಿ: ಸುಪ್ರೀಂ ಕೋರ್ಟ್‌

08:07 PM Jul 17, 2023 | Team Udayavani |

ನವದೆಹಲಿ: ದೆಹಲಿ ಸರ್ಕಾರದ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಮತ್ತು ಅವರ ಸೇವಾ ಚಟುವಟಿಕೆಗಳ ವಿಚಾರಕ್ಕೆ ಸಂಬಂಧಿಸಿ ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಮುಖ್ಯಮಂತ್ರಿ ಕೇಜ್ರಿವಾಲ್‌ ರಾಜಕೀಯ ಕಲಹದಿಂದ ಹೊರಬರಬೇಕು.

Advertisement

ಹೀಗೆಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾ.ಪಿ.ಎಸ್‌.ನರಸಿಂಹ, ನ್ಯಾ.ಮನೋಜ್‌ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್‌ ನ್ಯಾಯಪೀಠ ಸೋಮವಾರ ಅಭಿಪ್ರಾಯಪಟ್ಟಿದೆ. ಇದರ ಜತೆಗೆ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಆಪ್‌ ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದೆ.

ಇದೇ ಪ್ರಕರಣದ ವಿಚಾರಣೆ ವೇಳೆ ದೆಹಲಿ ವಿದ್ಯುತ್ಛಕ್ತಿ ನಿಯಂತ್ರಣ ಪ್ರಾಧಿಕಾರ (ಡಿಇಆರ್‌ಸಿ)ಕ್ಕೆ ಯಾರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಬೇಕು ಎಂಬ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಮುಖ್ಯಮಂತ್ರಿ ಮಾತುಕತೆ ನಡೆಸುವುದು ಉತ್ತಮ ಎಂದು ಸೂಚಿಸಿತು.

ಇಬ್ಬರೂ ಸಾಂವಿಧಾನಿಕ ಹುದ್ದೆಯಲ್ಲಿ ಇರುವುದರಿಂದ ರಾಜಕೀಯ ಕಲಹ ತೊರೆದು, ಮಾತುಕತೆಯನ್ನೇಕೆ ನಡೆಸಬಾರದು ಎಂದು ನ್ಯಾಯಪೀಠ ಸಲಹೆ ನೀಡಿ ಮುಂದಿನ ವಿಚಾರಣೆಯನ್ನು ಜು.20ಕ್ಕೆ ನಿಗದಿಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next