Advertisement

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

01:07 AM Apr 26, 2024 | Team Udayavani |

ಹೊಸದಿಲ್ಲಿ: ಆಸ್ತಿ ಮರು ಹಂಚಿಕೆ ಸಂಬಂಧ ಚರ್ಚೆ ನಡೆಯುತ್ತಿರುವ ಹೊ ತ್ತಿನಲ್ಲೇ ಸಮುದಾಯದ ಒಳತಿಗಾಗಿ ಖಾಸಗಿ ಆಸ್ತಿ ವಶಪಡಿಸಿಕೊಳ್ಳಬಹುದೇ ಎಂದು ಸುಪ್ರೀಂ ಕೋರ್ಟ್‌ ಕೇಳಿರುವುದು ಮಹತ್ವ ಪಡೆದುಕೊಂಡಿದೆ.
“ಒಳ್ಳೆಯ ಉದ್ದೇಶಕ್ಕಾಗಿ ವ್ಯಕ್ತಿಯ ಖಾಸಗಿ ಆಸ್ತಿಯನ್ನು ಸಮುದಾಯದ ವಸ್ತು ಸಂಪನ್ಮೂಲವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಸರಕಾರವು ಅದನ್ನು ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ ಎಂದು ಹೇಳುವುದು ಅಪಾಯಕಾರಿ” ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಮಹಾರಾಷ್ಟ್ರ ಗೃಹ ಮತ್ತು ಪ್ರದೇಶ ಅಭಿವೃದ್ಧಿ ಕಾಯ್ದೆ ತಿದ್ದುಪಡಿ ವಿರೋಧಿಸಿದ್ದ ಆಸ್ತಿ ಮಾಲಕರ ಸಂಘದ 3 ದಶಕಗಳ ಪ್ರಕರಣದ ವಿಚಾರಣೆಯನ್ನು ಸಿಜೆಐ ಡಿ.ವೈ.ಚಂದ್ರಚೂಡ ನೇತೃತ್ವದ 9 ಜಡ್ಜ್ ಗಳ ಪೀಠವು ನಡೆಸುತ್ತಿದೆ. ಸಂವಿಧಾನದ 39(ಬಿ), 31(ಸಿ) ವಿಧಿ ಅನ್ವಯ ಸರಕಾರವು ಖಾಸಗಿ ಆಸ್ತಿಯನ್ನು ಪಡೆದುಕೊಳ್ಳುವಂತಿಲ್ಲ ಎಂದು ಆಸ್ತಿ ಮಾಲಕರ ಸಂಘವು ವಾದಿಸಿತು.

ಸಾಮಾಜಿಕ ಬದಲಾವಣೆ ತರುವುದು ಸಂವಿಧಾನದ ಉದ್ದೇಶ. ಹಾಗಾಗಿ ಆಸ್ತಿಯು ಒಮ್ಮೆ ಖಾಸಗಿ ಆಸ್ತಿ ಎಂದು ಗುರುತಿಸಲ್ಪಟ್ಟರೆ, ಅದಕ್ಕೆ ಆರ್ಟಿಕಲ್‌ 39(ಬಿ) ಅನ್ವಯವಾಗದು ಎಂದು ಹೇಳಲಾಗದು ಎಂದು ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next