Advertisement

SC; ಹಿಜಾಬ್‌ ಬ್ಯಾನ್‌ ಮಾಡುವ ನೀವು ತಿಲಕವನ್ನೂ ನಿಷೇಧ ಮಾಡುತ್ತೀರಾ.?: ಸುಪ್ರೀಂ ಕೋರ್ಟ್

04:15 PM Aug 09, 2024 | Team Udayavani |

ಮುಂಬೈ: ಕರ್ನಾಟಕದಿಂದ ಆರಂಭವಾಗಿ ನಂತರ ಹೆಚ್ಚು ಚರ್ಚೆಯ ವಿಷಯವಾದ ಹಿಜಾಬ್ ನಿಷೇಧವು(Hijab Ban)  ಮುಂಬೈಗೂ ತಲುಪಿದೆ. ಹಿಜಾಬ್ ನಿಷೇಧದೊಂದಿಗೆ ಮುಂದುವರಿಯಬೇಡಿ ಎಂದು ಕಾಲೇಜಿಗೆ ಸೂಚಿಸಿದ ಸುಪ್ರೀಂ ಕೋರ್ಟ್ (Supreme court), ಕಾಲೇಜು ಬಿಂದಿ (Bindi) ಅಥವಾ ತಿಲಕವನ್ನೂ ನಿಷೇಧಿಸುತ್ತದೆಯೇ ಎಂದು ಕೇಳಿದೆ.

Advertisement

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಪಿವಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ಹಿಜಾಬ್ ಮತ್ತು ಕ್ಯಾಪ್‌ ಗಳ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತು.

ಕಾಲೇಜುಗಳು ಇಂತಹ ನಿಯಮಗಳನ್ನು ಮಾಡುವುದನ್ನು ನಿಲ್ಲಿಸಬೇಕಾಗಿದೆ ಎಂದು ನ್ಯಾಯಮೂರ್ತಿ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ತಿಲಕ ಅಥವಾ ಬಿಂದಿಯನ್ನು ಧರಿಸಿರವ ವಿದ್ಯಾರ್ಥಿಗಳನ್ನು ಸಹ ಕಾಲೇಜಿನಿಂದ ನಿರ್ಬಂಧಿಸಲಾಗುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.

“ಇದು ಯಾವುದೇ ಸೂಚನೆಯ ಭಾಗವಲ್ಲ. ನೀವು ಅದನ್ನು ಹೇಳಿಲ್ಲವಲ್ಲ” ಎಂದು ಪೀಠವು ಕಾಲೇಜನ್ನು ಪ್ರತಿನಿಧಿಸುವ ವಕೀಲರಿಗೆ ಸೂಚಿಸಿತು.

Advertisement

“ಮಹಿಳೆಯರಿಗೆ ಏನು ಧರಿಸಬೇಕು ಎಂದು ಹೇಳಿ ನೀವು ಹೇಗೆ ಸಬಲೀಕರಣ ಮಾಡುತ್ತೀರಿ? ಕಡಿಮೆ ಹೇಳಿದರೆ ಉತ್ತಮ, ಮಹಿಳೆಗೆ ಆಯ್ಕೆ ಎಲ್ಲಿದೆ? ಅವರು ಅದನ್ನು ಧರಿಸುತ್ತಾರೆ ಎಂಬ ಅಂಶಕ್ಕೆ ನೀವು ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದೀರಿ. ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದ ನಂತರ ಇದನ್ನೆಲ್ಲಾ ಹೇಳುವುದು ದುರದೃಷ್ಟಕರ, ಈ ದೇಶದಲ್ಲಿ ಧರ್ಮವಿದೆ ಎಂದು ನೀವು ಹೇಳುತ್ತೀರಿ ಎಂದು ನ್ಯಾಯಮೂರ್ತಿ ಕುಮಾರ್ ಹೇಳಿದರು.

ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿಗಳು ಬುರ್ಖಾ, ಹಿಜಾಬ್ ಅಥವಾ ನಿಖಾಬ್ ಧರಿಸುವುದನ್ನು ನಿಷೇಧಿಸಿದ ಚೆಂಬೂರ್ (ಮುಂಬೈ) ಕಾಲೇಜು ವಿಧಿಸಿದ್ದ ನಿಷೇಧವನ್ನು ಎತ್ತಿಹಿಡಿಯುವ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸುವ ಅರ್ಜಿಯನ್ನು ಪೀಠವು ವಿಚಾರಣೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next