Advertisement

Supreme Court ಆದೇಶ; 1 ಕಣ್ಣು ಕಳೆದುಕೊಂಡ ವ್ಯಕ್ತಿಗೆ 100% ಪರಿಹಾರ

01:30 AM Jan 12, 2025 | Team Udayavani |

ನವದೆಹಲಿ: ಅಪಘಾತದಲ್ಲಿ ಕಣ್ಣು ಕಳೆದುಕೊಂಡ ವಜ್ರ ಕತ್ತರಿಸುವ ವ್ಯಕ್ತಿಗೆ ಶೇ.100ರಷ್ಟು ಪರಿಹಾರ ಕೊಡಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಆದೇಶಿಸಿದೆ. ವಜ್ರ ಕತ್ತರಿಸುವ ವ್ಯಕ್ತಿ 1 ಕಣ್ಣು ಕಳೆದು ಕೊಂಡರೂ ತನ್ನ ಕೆಲಸವನ್ನು ಮೊದಲಿನಂತೆ ಮಾಡ ಲಾರ, ಹೀಗಾಗಿ ಆತನಿಗೆ ಶೇ.100ರಷ್ಟು ಅಂಗವೈಕಲ್ಯ ಉಂಟಾಗಿದೆ ಎಂದು ಪರಿಗಣಿಸಿ ಪರಿಹಾರ ಕೊಡ ಬೇಕು ಎಂದು ಸೂಚಿಸಿದೆ. ಈ ಮೊದಲು ಸ್ಥಳೀಯ ನ್ಯಾಯಾಲಯ ಆತನ ಅಂಗ ವೈಕಲ್ಯವನ್ನು ಶೇ.49 ರಷ್ಟು ಎಂದು ಗುರುತಿಸಿ ಪರಿಹಾರ ಘೋಷಿಸಿತ್ತು. ಇದಾದ ಬಳಿಕ ಹೈಕೋರ್ಟ್‌ ಶೇ.65ರಷ್ಟು ಅಂಗವೈಕಲ್ಯಕ್ಕೆ ಏರಿಕೆ ಮಾಡಿತ್ತು. ಆದರೆ ಅಪಘಾತದ ಬಳಿಕ ಉದ್ಯೋಗ ಕಳೆದುಕೊಂಡಿರುವುದಾಗಿ ಅಳಲು ತೋಡಿಕೊಂಡ ವಜ್ರ ಕತ್ತರಿಸುವ ವ್ಯಕ್ತಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.