Advertisement

ರೊಹಿಂಗ್ಯರ ಬಿಡುಗಡೆ ಸಾಧ್ಯವಿಲ್ಲ: ಸುಪ್ರೀಂ

09:20 PM Apr 08, 2021 | Team Udayavani |

ನವದೆಹಲಿ: ಜಮ್ಮುವಿನ ಶ್ರೀನಗರದಲ್ಲಿ ಬಂಧನ ಗೃಹದಲ್ಲಿ ಇರಿಸಲಾಗಿರುವ ಮ್ಯಾನ್ಮಾರ್‌ ಮೂಲದ ರೊಹಿಂಗ್ಯಾ ಸಮುದಾಯದವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Advertisement

ಅಲ್ಲದೆ, ಕಾನೂನು ಪ್ರಕ್ರಿಯೆಯಂತೆಯೇ ಅವರ ಸ್ವದೇಶಕ್ಕೆ ಕಳುಹಿಸಬೇಕೆಂದು ನ್ಯಾಯಪೀಠ ಸ್ಪಷ್ಟವಾಗಿ ಸೂಚಿಸಿದೆ.

ಜಮ್ಮುವಿನಲ್ಲಿರುವ ಬಂಧನ ಗೃಹದಲ್ಲಿರುವ ರೊಹಿಂಗ್ಯಾ ಸಮುದಾಯದ 150 ಜನರನ್ನು ಬಿಡುಗಡೆ ಮಾಡಬೇಕೆಂದು ಮೊಹಮ್ಮದ್‌ ಸಲೀಮುಲ್ಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ, ನ್ಯಾ. ಎ.ಎಸ್‌. ಬೋಪಣ್ಣ ಹಾಗೂ ನ್ಯಾ. ವಿ. ರಾಮಸುಬ್ರಹ್ಮಣ್ಯಂ ಅವರುಳ್ಳ ಪೀಠ, ಅರ್ಜಿಯನ್ನು ಮಾನ್ಯ ಮಾಡಲಿಲ್ಲ. ಅವರನ್ನು ಅವರ ದೇಶಕ್ಕೆ ವಾಪಸ್‌ ಕಳುಹಿಸಬೇಕೇ ವಿನಃ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next