Advertisement

ಸಾಮಾಜಿಕ ಜಾಲತಾಣಗಳಲ್ಲಿನ ಭಯೋತ್ಪಾದನೆ ನಿಗ್ರಹಿಸಿ

07:40 AM Oct 25, 2017 | Harsha Rao |

ಮನಿಲಾ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಮೂಲಭೂತವಾದ ಎಲ್ಲ ದೇಶಗಳಿಗೂ ಗಂಭೀರ ಸ್ವರೂಪದ ಭದ್ರತಾ ಸವಾಲು ಒಡ್ಡುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಫಿಲಿಪ್ಪೀನ್ಸ್‌ನಲ್ಲಿ ನಡೆಯುತ್ತಿರುವ 4ನೇ ಆಸಿಯಾನ್‌ ರಕ್ಷಣಾ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀ ಚಿನ ದಿನಗಳಲ್ಲಿ ಭದ್ರತೆ ಮತ್ತು ರಕ್ಷಣೆ ಸನ್ನಿವೇಶಗಳು ಸಾಕಷ್ಟು ಬದಲಾಗಿವೆ. ಭಯೋತ್ಪಾದಕರು ಜಾಲತಾಣಗಳನ್ನು ಬಳಸಿ ಜನರ ಮನಸ್ಸುಗಳನ್ನು ಅವರೆಡೆ ತಿರುಗಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಇಂಥ ಭಯೋತ್ಪಾದನೆಯನ್ನು ನಿಗ್ರಹಿಸಲು ಎಲ್ಲ ದೇಶಗಳು ಒಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದರು. ಇದೇ ವೇಳೆ, ಉತ್ತರ ಕೊರಿಯಾದ ಪರಮಾಣು ಯೋಜನೆಗಳ ಜೊತೆ ಕೈಜೋಡಿಸಿರುವ ರಾಷ್ಟ್ರಗಳ ಕುರಿತು ಭಾರತ ತನಿಖೆ ನಡೆಸಲಿದೆ. ಈ ವಿಷಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next