Advertisement

ಹೆಸರು-ಉದ್ದಿಗೆ ಬೆಂಬಲ ಬೆಲೆ ಘೋಷಣೆ

04:00 PM Sep 15, 2020 | Suhan S |

ಬೀದರ: ಪ್ರಸಕ್ತ ಸಾಲಿನಲ್ಲೂ ಕನಿಷ್ಠ ಬೆಂಬಲ ಬೆಲೆಯಡಿ ಹೆಸರು ಮತ್ತು ಉದ್ದು ಬೆಳೆ ಖರೀದಿಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

Advertisement

ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೈತರು ಬೆಳೆದ ಹೆಸರು ಮತ್ತು ಉದ್ದು ಬೆಳೆಗಳನ್ನು ಕೇಂದ್ರ ಸರ್ಕಾರ ಕಳೆದ ವರ್ಷಗಳಿಂದ ಬೆಂಬಲ ಬೆಲೆಯಡಿ ಖರೀದಿಸುತ್ತಿದೆ. ಈ ವರ್ಷ ಸಹರೈತರ ಖರಿಫ್‌ ಬೆಳೆಗಳನ್ನು ಖರೀದಿಸಬೇಕೆಂಬುದುರೈತರ ಒತ್ತಾಯವಿತ್ತು. ಹಾಗಾಗಿ ರಾಜ್ಯ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಅವರನ್ನು ಇತ್ತೀಚೆಗೆ ಭೇಟಿ ಮಾಡಿ, ಶೀಘ್ರ ಕೇಂದ್ರ ಸರ್ಕಾರಕ್ಕೆಪ್ರಸ್ತಾವನೆಯನ್ನು ಕಳುಹಿಸಬೇಕೆಂದು ಮನವಿ ಮಾಡಿಕೊಂಡಿದ್ದೆ. ನಂತರ ಕೇಂದ್ರ ಸಚಿವರು ಮತ್ತು ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಈ ಪ್ರಯುಕ್ತ ಇಂದು ಸರ್ಕಾರ ಹೆಸರು ಮತ್ತು ಉದ್ದು ಖರೀದಿಗೆ ಆದೇಶ ನೀಡಿದೆ.

ಇದಕ್ಕಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ. ಈಗಾಗಲೆ ಕೃಷಿ ಮಾರುಕಟ್ಟೆ ಅಧಿ ಕಾರಿಗಳಿಗೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಅಗತ್ಯ ತಯಾರಿ ಮಾಡಿಕೊಳ್ಳಲು ಸೂಚಿಸಲಾಗಿದೆ.  ರೈತರು ಖಾಸಗಿಯವರಿಗೆ ಬೆಳೆ ಮಾರದೇ ಖರೀದಿ ಕೇಂದ್ರಗಳಲ್ಲಿಯೇ ಮಾರಾಟ ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

……………………………………………………………………………………………………………………………………………………..

ಸಚಿವ ಚವ್ಹಾಣ ಆರೋಗ್ಯ ತಪಾಸಣೆ : ಬೀದರ: ಕೋವಿಡ್ ಸೋಂಕು ಪತ್ತೆ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೋಮವಾರ ಬ್ರಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Advertisement

ಬ್ರಿಮ್ಸ್‌ ನಿರ್ದೇಶಕ ಡಾ| ಶಿವಕುಮಾರ ನೇತೃತ್ವದಲ್ಲಿ ವೈದ್ಯರ ತಂಡವು ಸಚಿವರಿಗೆ ಸಿಟಿ ಸ್ಕ್ಯಾನ್‌ ಮತ್ತು ರಕ್ತ ಪರೀಕ್ಷೆ ನಡೆಸಿದರು. ಬಳಿಕ ವೈದ್ಯರು,ಕೋವಿಡ್-19 ಮರು ಪರೀಕ್ಷೆಗಾಗಿಸಚಿವರ ಗಂಟಲು ದ್ರವದ ಮಾದರಿ ಪಡೆದುಕೊಂಡು ಲ್ಯಾಬ್‌ಗ ಕಳುಹಿಸಿದರು. ಕೋವಿಡ್ ನ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಕೋವಿಡ್‌ ಹಿನ್ನೆಲೆಯಲ್ಲಿ ನಡೆಸಿದ ಎಲ್ಲ ವೈದ್ಯಕೀಯ ಪರೀಕ್ಷೆಗಳು ನಾರ್ಮಲ್‌ ಇರುತ್ತವೆ. ತುಸು ಔಷಧಿ  ನೀಡಲಾಗಿದೆ. ಈ ಮಧ್ಯೆ ಏನಾದರೂ ಲಕ್ಷಣಗಳು ಕಾಣಿಸಿದಲ್ಲಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಡಾ| ಶಿವಕುಮಾರ ತಿಳಿಸಿದ್ದಾರೆ. 20 ದಿನಗಳ ವಿಶ್ರಾಂತಿ: ಸೋಮವಾರ ಬ್ರಿಮ್ಸ್‌ನಲ್ಲಿ ಸಚಿವರ ಗಂಟಲು ದ್ರವದ ಮಾದರಿ ಪಡೆದು ಅದನ್ನು ಮರು ಪರೀಕ್ಷೆಗಾಗಿ ಕಳುಹಿಸಿದ್ದು, ವರದಿ ಬರಬೇಕಾಗಿದೆ. ಸಚಿವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ಸಲಹೆ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸಚಿವರು 20 ದಿನಗಳ ಕಾಲವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next