ಹಾಸನ: ಜಿಲ್ಲೆಯಲ್ಲಿ ಈ ವರ್ಷ ನಿರೀಕ್ಷೆ ಮೀರಿ ಮೆಕ್ಕೆ ಜೋಳ ಬೆಳೆದಿದ್ದು, ಸರ್ಕಾರ ತಕ್ಷಣವೇ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯಬೇಕೆಂದು ಮಾಜಿ ಸಚಿವ ಎಚ್ .ಡಿ.ರೇವಣ್ಣ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಈವರ್ಷ ಮುಂಗಾರು ಹಂಗಾಮಿನಲ್ಲಿ1,95,000 ಎಕರೆಯಲ್ಲಿ ಮೆಕ್ಕೆ ಜೋಳ ಬೆಳೆಯಬಹುದೆಂದುಕೃಷಿ ಇಲಾಖೆ ನಿರೀಕ್ಷಿಸಿತ್ತು. ಆದರೆ, 2,39,657 ಎಕರೆಯಲ್ಲಿ ಬೆಳೆದಿದ್ದು, 6 ಲಕ್ಷ ಟನ್ ಉತ್ಪಾದನೆ ಆಗಲಿದೆ. ಹೀಗಾಗಿ ಬೆಲೆ ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗ ಮಾರುಕಟ್ಟೆಯಲ್ಲಿ ವರ್ತಕರು ಕ್ವಿಂಟಲ್ ಜೋಳವನ್ನು 1200 ರೂ.ನಲ್ಲಿ ಖರೀದಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ಕನಿಷ್ಠ 1750 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಕಡಿಮೆ ದರಕ್ಕೆ ಈಗಲೇ ಮಾರಾಟವಾಗುತ್ತಿದೆ. ಈಗ ಕೇವಲ ಶೇ.25 ಮೆಕ್ಕೆಜೋಳಕಟಾವುಆಗಿದ್ದು,ನಂತರಇನ್ನಷ್ಟುದರ ಕುಸಿಯುವ ಆತಂಕವಿದೆ. ಹಾಗಾಗಿ ರಾಜ್ಯ ಸರ್ಕಾರ 1750 ರೂ. ಬೆಂಬಲ ಬೆಲೆ ಘೋಷಿಸಿ ರೈತರಿಂದ ನೇರ ಖರೀದಿಗೆ ಕೇಂದ್ರ ತೆರೆಯಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದ ಜೊತೆಗೆ ಕೆಎಂಎಫ್ ಒಡೆತನದ 6 ಪಶು ಆಹಾರ ಘಟಕಗಳಿಗೆ ಟೆಂಡರ್ ಮೂಲಕ ವರ್ತಕರಿಂದ ಮೆಕೆ R ಜೋಳ ಖರೀದಿಸುವುದರ ಬದಲು ರೈತರಿಂದ ನೇರವಾಗಿ1750ರೂ.ದರದಲ್ಲಿಖರೀದಿಸಬೇಕು.ಗುಬ್ಬಿ,ರಾಜಾನುಕುಂಟೆ, ಶಿಕಾರಿಪುರ, ಧಾರವಾಡ ಹಾಗೂ ಹಾಸನದಲ್ಲಿ2ಪಶು ಆಹಾರ ಘಟಕಗಳನ್ನು ಕೆಎಂಎಫ್ ನಿರ್ವಹಣೆ ಮಾಡುತ್ತಿದೆ ಎಂದು ಹೇಳಿದರು. ವರ್ತಕರು ರೈತರಿಂದ 1000 ರೂ. ನಿಂದ 1200 ರೂ. ದರಲ್ಲಿ ಖರೀದಿಸಿ ಕೆಎಂಎಫ್ನ ಪಶು ಆಹಾರ ಘಟಕಗಳಿಗೆ 1750 ರೂ. ದರದಲ್ಲಿ ಪೂರೈಕೆ ಮಾಡಿ, ಕ್ವಿಂಟಲ್‌ಗೆ 500 ರೂ.ಗಿಂತಲೂ ಹೆಚ್ಚು ಲಾಭ ಮಾಡಿಕೊಳ್ಳುವರು. ಇದನ್ನು ತಡೆಯಲು ರೈತರಿಂದಲೇ ನೇರ ಮೆಕ್ಕೆಜೋಳ ಖರೀದಿಸಬೇಕು. ಪಶು ಆಹಾರ ಘಟಕಗಳಿಗೆ 2 ಲಕ್ಷ ಟನ್ ಮೆಕ್ಕೆಜೋಳ ಬೇಕಾಗುತ್ತದೆ. ಸೆ.24ರಂದು ನಡೆಯಲಿರುವ ಕೆಎಂಎಫ್ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರೇವಣ್ಣ ಆಗ್ರಹಿಸಿದರು.
ವಿಧಾನ ಮಂಡಲದ ಅಧಿವೇಶನದಲ್ಲಿಯೂ ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ನೀಡುವ ಬಗ್ಗೆಸರ್ಕಾರದಗಮನಸೆಳೆಯುವೆಎಂದರು.ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಇದ್ದರು.