Advertisement
ಪ್ರತಾಪ್ ಸಿಂಹ ಅವರಿಗೇ ಟಿಕೆಟ್ ನೀಡಬೇಕೆಂದು ಬೆಂಬಲಿಗರು ಮೈಸೂರಿನ ವಿವಿಧೆಡೆ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ . ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಹಾಗೂ ಹಿನಕಲ್ ರಿಂಗ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಾಲು ಸಾಲು ಪ್ರತಿಭಟನೆ ನಡೆಸಲಾಗುತ್ತಿದ್ದು, ಕೊಲಂಬಿಯ ಏಷಿಯಾ ಆಸ್ಪತ್ರೆ, ಹಿನಕಲ್ ಫ್ಲೈ ಓವರ್ ಬಳಿಯೂ ಪ್ರತಿಭಟನೆ ನಡೆಸಲಾಗಿದೆ. ಹುಣಸೂರು ಪಟ್ಟಣದಲ್ಲೂ ಆಕ್ರೋಶ ಹೊರ ಹಾಕಲಾಗಿದೆ.
ಪರ ವಿರೋಧದ ನಡುವೆ ಸ್ಪರ್ಧೆಗೆ ಯದುವೀರ್ ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗಿದ್ದು, ಹೈಕಮಾಂಡ್ ಮೂಲಗಳಿಂದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಿರುವುದಾಗಿ ಗೃಹ ಸಚಿವ ಆಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.
Related Articles
ಬಡವರ ಮಕ್ಕಳು ಬೆಳೆಯಬಾರದಾ? ಮೈಸೂರು ಹೈವೇ ಮಾಡಿದಕ್ಕಾಗಿ ಟಿಕೆಟ್ ಇಲ್ವಾ? ಕಾಂಗ್ರೆಸ್ಸಿಗೆ ಟಕ್ಕರ್ ಕೊಟ್ಟಿದಕ್ಕೆ ಇಲ್ವಾ? ಟಿಪ್ಪು ರೈಲಿಗೆ ಒಡೆಯರ್ ಹೆಸರು ಇಟ್ಟಿದಕ್ಕೆ ಇಲ್ವಾ? ಅಭಿವೃದ್ಧಿ ಕೆಲಸ ಮಾಡಿದಕ್ಕೆ ಇಲ್ವಾ? ಒಕ್ಕಲಿಗ ಅನ್ನೋ ಕಾರಣಕ್ಕೆ ಟಿಕೆಟ್ ಕೊಡಲ್ವಾ? ಎಂಬ ಪೋಸ್ಟರ್ ಗಳು ಕಂಡು ಬಂದಿವೆ. ದೇಶಕ್ಕಾಗಿ ಮೋದಿ, ಮೈಸೂರಿಗೆ ಪ್ರತಾಪ್ ಸಿಂಹ ಎಂದು ಘೋಷಣೆ ಮೊಳಗಿಸಲಾಗಿದೆ.
Advertisement
ಮೈಸೂರು ರಿಂಗ ರಸ್ತೆಯಲ್ಲಿ ಬೈಕ್ ರ್ಯಾಲಿಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಅಭಿಮಾನಿಗಳು ಪೊಸ್ಟರ್ ಹಿಡಿದು ಬೈಕ್ ರ‍್ಯಾಲಿ ನಡೆಸಿದ್ದಾರೆ. ಯದುವೀರ್ ಬೇಡ, ಪ್ರತಾಪ್ ಸಿಂಹ ಬೇಕು ಎಂದು ಘೋಷಣೆ ಕೂಗಿದ್ದು,ಪ್ರತಿಭಟನೆಗೆ ಶ್ರೀರಾಮಸೇನೆ ಬೆಂಬಲ ನೀಡಿದೆ. ಮಹರಾಜರು ಕೊಡಬೇಕು ಹೊರತು ಮತಕ್ಕಾಗಿ ಬೇಡುವುದು ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳು ಕಂಡು ಬಂದಿವೆ. ಮೈಸೂರು ರಾಜ ವಂಶಸ್ಥರ ಕೊಡುಗೆ ಈ ನಾಡಿಗೆ ಅಪಾರವಾಗಿದೆ, ಅದನ್ನು ಎಣಿಕೆ ಮಾಡಲಿಕ್ಕು ಸಾಧ್ಯವಿಲ್ಲ.ನಮ್ಮ ಮಹಾರಾಜರನ್ನು ಇದೇ ವೈಭೋಗದಿಂದ ನೋಡಲು ಬಯಸುತ್ತೇವೆ ಹೊರತು ರಸ್ತೆಗಳಲ್ಲಿ ಮತಕ್ಕಾಗಿ ಜನರನ್ನುಬೇಡುವ ಪರಿಸ್ಥಿತಿ ಬೇಡ. ನಮ್ಮ ರಾಜರು ನಮ್ಮ ಹೆಮ್ಮೆ ಎಂದು ಬರೆಯಲಾಗಿದೆ. ತಲೆಕೆಡಿಸಿಕೊಂಡಿಲ್ಲ! ಮೈಸೂರಿನ ಪತ್ರಕರ್ತರ ಭವನದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಸಂಸದ ಪ್ರತಾಪ್ ಸಿಂಹ ಅವರಿಗೆ ಬುಧವಾರ ಅಭಿನಂದನಾ ಸಮಾರಂಭ ನಡೆಯಿತು. ಹಿರಿಯ ಪತ್ರಿಕಾ ಸಂಪಾದಕ ಕೆ.ಬಿ. ಗಣಪತಿ ಸೇರಿದಂತೆ ಹಿರಿಯ ಸಾಹಿತಿಗಳು, ಸಮಾಜ ಸೇವಕರು, ಕನ್ನಡ ಪರ ಹೋರಾಟಗಾರರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ”ಕಳೆದೊಂದು ವಾರದಿಂದ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ.ರಾಜಕಾರಣದಲ್ಲಿ ಹಣಬಲ, ತೋಳ್ಬಲ ಉಳ್ಳವರು ಇದ್ದಾರೆ. ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.ಮೊದಲ ಬಾರಿ ಪತ್ರಕರ್ತನಾಗಿ ಬಂದು ಚುನಾವಣೆಗೆ ಸ್ಪರ್ಧಿಸಿದ ನನ್ನನ್ನು ಮೋದಿಯವರ ಮುಖ ನೋಡಿಕೊಂಡು ಮೈಸೂರು ಕೊಡಗಿನ ಜನರು ಆಯ್ಕೆ ಮಾಡಿದರು.ಈ ಬಾರಿ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ.ನಾನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ.ಮೈಸೂರು ಕೊಡಗಿನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತಂದಿದ್ದೇನೆ” ಎಂದರು.