Advertisement

ಬಿಎಸ್ವೈ- ರಾಘವೇಂದ್ರಗೆ ಕೊಟ್ಟ ಪ್ರೀತಿಯನ್ನು ವಿಜಯೇಂದ್ರಗೂ ತೋರಿಸಿ: ಸಿಎಂ ಬೊಮ್ಮಾಯಿ

02:56 PM Mar 17, 2023 | keerthan |

ಶಿಕಾರಿಪುರ (ಶಿವಮೊಗ್ಗ): ಬಿಎಸ್ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರಿಗೆ ತೋರಿದ ಅಭಿಮಾನ- ಪ್ರೀತಿಯನ್ನು ಮುಂದೆ ವಿಜಯೇಂದ್ರಗೆ ತೋರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಶಿಕಾರಿಪುರದಲ್ಲಿ ಮನವಿ ಮಾಡಿದರು.

Advertisement

ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ಅಕ್ಕಮಹಾದೇವಿ ಪುತ್ಹಳಿ ಲೋಕಾರ್ಪಣೆ‌ ಕಾರ್ಯಕ್ರಮ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಶಿಕಾರಿಪುರದ ಅಲ್ಲಮಪ್ರಭುಗೆ ಅನುಭವ ಮಂಟಪದ ಅಧ್ಯಕ್ಷತೆ ಕೊಟ್ಟಿದ್ದರು. ಅಂದು ಶಿಕಾರಿಪುರದಿಂದ ಬಸವ ಕಲ್ಯಾಣದ ವರೆಗೆ ಜೋಡಿಸುವ ಕೆಲಸವಾಗಿತ್ತು. 21ನೇ ಶತಮಾನದಲ್ಲಿ ಅದೇ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಇಂದು ಕೆಲವರು ನಮ್ಮನ್ನೇ ಸಿಎಂ ಮಾಡಿ ಮಾಡಿ ಎಂದು ಹೇಳುವವರಿದ್ದಾರೆ. ಆದರೇ, ಯಾವುದೇ ಅಪೇಕ್ಷೆಯಿಲ್ಲದೇ 40 ವರ್ಷ ಹೋರಾಟ ಮಾಡಿ ಬಿಎಸ್ವೈ ಈ ಹಂತಕ್ಕೆ ಬಂದಿದ್ದಾರೆ. ಪಕ್ಷ ಸಂಘಟನೆ ಮಾಡುವಾಗ ಹಲ್ಲೆಯಾದರೂ ಧೈರ್ಯದಿಂದ ಮುಂದೆ ಬಂದಿದ್ದಾರೆ. ಹೋರಾಟದಿಂದಲೇ ಸಿಎಂ ಆಗಿ, ಶಿವಶರಣರ ನಾಡು ಶಿಕಾರಿಪುರ ಅಭಿವೃದ್ಧಿ ಮಾಡಿದ್ದಾರೆ. ಜೊತೆಗೆ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಲೂ ಯಡಿಯೂರಪ್ಪ 600 ಕೋಟಿ ಕೊಟ್ಟಿದ್ದಾರೆ. 12 ನೇ ಶತಮಾನದ ಕ್ರಾಂತಿಯನ್ನು ಇನ್ನೋಂದು ರೀತಿಯಲ್ಲಿ ಯಡಿಯೂರಪ್ಪ ಮುಂದುವರೆಸಿದ್ದಾರೆ ಎಂದರು.

ಇದನ್ನೂ ಓದಿ:ಗಂಡನ ಜೊತೆ ಇರುವ ಪ್ರಿಯತಮೆಯನ್ನು ನನ್ನ ವಶಕ್ಕೆ ಒಪ್ಪಿಸಿ…ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ…

ನನ್ನಂತ ನೂರಾರು ಜನರಿಗೆ ಸ್ಥಾನಮಾನ, ನಾಯಕತ್ವ ಕೊಟ್ಟಂತ ನಾಯಕ ಯಡಿಯೂರಪ್ಪ. ಅವರೀಗ ನಾನು ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದಾರೆ. ಜನ ಅವರನ್ನು ರಿಟೈರ್ಡ್ ಮಾಡುವುದಿಲ್ಲ. ಜನರು ಅವರ ಸೇವೆಯನ್ನು ಯಾವಾಗಲೂ ತೆಗೆದುಕೊಳ್ತಾರೆ.

Advertisement

ಮಂತ್ರಿ, ಮುಖ್ಯಮಂತ್ರಿ ಆಗೋದು ಬೇರೆ, ಜನ ನಾಯಕ ಆಗುವುದು ಬೇರೆ. ಜನರು ಮತ್ತು ಯಡಿಯೂರಪ್ಪ ನಡುವೆ ಗಾಳಿಯೂ ಬರಲು ಸಾಧ್ಯವಿಲ್ಲ. ರಾಜ್ಯಕ್ಕೆ ಯಡಿಯೂರಪ್ಪ ಅಗತ್ಯ ಹಿಂದಿಗಿಂತ ಇಂದು ಹೆಚ್ಚಾಗಿದೆ. ನಾನು ಕಷ್ಟದಲ್ಲಿದ್ದಾಗ ಕರೆದು, ಧೈರ್ಯ ಹೇಳಿ ಮಾರ್ಗದರ್ಶನ ಮಾಡಿದವರು ಯಡಿಯೂರಪ್ಪ. ತಂದೆ- ಮಗನ ಬಾಂಧವ್ಯ ರಾಜಕೀಯ ಹೊರತಾಗಿಯೂ ನಿರಂತರವಾಗಿ ಇರುತ್ತದೆ. ರಾಜ್ಯದಲ್ಲಿ ಬಡತನ ನೀಗಿ, ಎಲ್ಲರ ಅಭಿವೃದ್ಧಿಯಾಗಬೇಕು. ರಾಜ್ಯದಲ್ಲಿ ಮುಂದೆಯೂ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದರು.

ಶರಣ ಅಲ್ಲಮಪ್ರಭು ಜನ್ಮಸ್ಥಳದ ಅಭಿವೃದ್ಧಿಗೆ 5 ಕೋಟಿ ಘೋಷಿಸಿದ ಸಿಎಂ, ಅಕ್ಕಮಹಾದೇವಿ ಪಿಜಿ ಸೆಂಟರ್ ನ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ಅನುದಾನ, ಶಿವನಪಾದ ಕ್ಷೇತ್ರವನ್ನು 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತೇವೆವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next