Advertisement

Shimoga; ಬಿ.ವೈ. ರಾಘವೇಂದ್ರಗೆ ಎರಡು ಲಕ್ಷ ಮತಗಳ ಅಂತರದ ಗೆಲುವು ಖಚಿತ: ವಿಜಯೇಂದ್ರ

09:27 AM Apr 11, 2024 | keerthan |

ಶಿರಾಳಕೊಪ್ಪ: ಎರಡು ಲಕ್ಷ ಮತಗಳ ಅಂತರದಿಂದ ಬಿ.ವೈ. ರಾಘವೇಂದ್ರ ಗೆಲ್ಲುವಲ್ಲಿ ಅನುಮಾನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ವಾಸವಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್‌ ಆನೆ ನಡೆದಿದ್ದೆ ದಾರಿ ಎನ್ನುವಂತೆ ವರ್ತಿಸುತ್ತಿದೆ. ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ.

619 ಕೋಟಿ ಪ್ರೋತ್ಸಾಹ ಧನ ಹಾಗೆ ಉಳಿಸಿದ್ದಾರೆ. 9 ರಾಜ್ಯದಲ್ಲಿ ಬರಗಾಲವಿದೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮಾತ್ರ ಪರಿಹಾರ ನೀಡದೆ ಕೇಂದ್ರದ ಕಡೆ ಬೊಟ್ಟು ಮಾಡಿ ಆರೋಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೂ ಸಂಬಳ ನೀಡದೆ ಇರುವ ದಿನಗಳು ಬರಬಹುದು ಎಂದರು.

ಒಂದು ದಿನವೂ ರಜೆ ಪಡೆಯದೇ ಸೇವೆ ಮಾಡುತ್ತಿರುವ ಏಕೈಕೈಕ ಪ್ರಧಾನಿ ಮೋದಿ. ಅವರಿಗೆ ಶಕ್ತಿ ತುಂಬಲು ನಮ್ಮ ಜನಪ್ರಿಯ ಸಂಸದರಾದ ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯ ನೋಡಿ ಮತ ನೀಡಿ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಬೈಂದೂರು, ಕೊಲ್ಲೂರು, ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಶಿರಾಳಕೊಪ್ಪಕ್ಕೆ ಶರಾವತಿಯಿಂದ 45 ಕೋಟಿ ರೂ. ವೆಚ್ಚದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಎಲ್ಲ ಸಿದ್ಧತೆ ನಡೆದಿವೆ. ಮೇಘರವಳ್ಳಿಯಿಂದ ಸೋಮೇಶ್ವರದವರೆಗೆ 12 ಕಿಮೀ ಸುರಂಗ ಮಾರ್ಗಕ್ಕೆ ಅನುಮತಿ ಸಿಕ್ಕು ಡಿಪಿಆರ್‌ ಸಬಿ¾ಟ್‌ ಮಾಡುವುದು ಬಾಕಿ ಇದೆ. ಎಲ್ಲ ಅಭಿವೃದ್ಧಿ ಕೆಲಸಗಳಿಂದ ದೇಶದ ಗೌರವ ಹೆಚ್ಚಾಗಿದೆ ಎಂದರು.

Advertisement

ಗ್ಯಾರಂಟಿ ಮೇಲೆ ಅ ಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ದೇಶದಲ್ಲಿ ಅಡ್ರಸ್‌ ಇಲ್ಲ. ಮಧು ಬಂಗಾರಪ್ಪನವರಿಗೆ ಇಷ್ಟು ಬೇಗ ಅ ಧಿಕಾರ ದರ್ಪ ಬರಬಾರದಿತ್ತು. ಅವರಿಗೆ ಕಾರ್ಯಕರ್ತರ ಶ್ರಮ ಅರ್ಥವಾದಂತಿಲ್ಲ. ಶಿಕಾರಿಪುರ ಸೊರಬ ನನ್ನ ಎರಡು ಕಣ್ಣು ಎಂದು ಹೇಳಿ ತಂಗಿ ಕೈಹಿಡಿದುಕೊಂಡು ಭಾಷಣ ಮಾಡುತ್ತಿರುವುದನ್ನು ಜನತೆ ಒಪ್ಪುತ್ತಾರಾ? ನೀವು ಓಟಿಗಾಗಿ ಹತ್ತಿದ ಮೆಟ್ಟಿಲು ಒದೆಯುವ ದ್ವೇಶದ ರಾಜಕಾರಣ

ಮಾಡುತಿದ್ದೀರಿ. ಇಂದು ಈಶ್ವರಪ್ಪನವರು ಅಪ್ಪ ಮಕ್ಕಳು ಎಂದು ಮಾತನಾಡುತಿದ್ದಾರೆ. ಇದಾವುದಕ್ಕೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್‌ಗೆ, ಈಶ್ವರಪ್ಪನವರಿಗೆ ನಿಮ್ಮ ಜಾಗ ಯಾವುದೆಂದು ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದರು.

ವಿಧಾನ ಪರಿಷತ್‌ ಸದಸ್ಯ ರುದ್ರೇಗೌಡ, ಆಶಾ ಮಂಜುನಾಥ್‌, ಟಿ.ರಾಜು ಮಾತನಾಡಿದರು. ಟೌನ್‌ ಅಧ್ಯಕ್ಷ ಚನ್ನವೀರ ಶೆಟ್ರಾ, ಬಳಿಗಾರ್‌, ಅಗಡಿ ಅಶೋಕ್‌, ಡಾ| ಮುರುಘರಾಜ್‌, ಟಿ. ರಾಜಶೇಖರಪ್ಪ, ನಿವೇದಿತಾ ರಾಜು, ಕೊಳಗಿ ರೇವಣಪ್ಪ, ಜೆಡಿಎಸ್‌ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next