Advertisement
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಯತ್ನಾಳ, ಪೇಜಾವರ ಶ್ರೀ ದೇಶದ ಶ್ರೇಷ್ಠ ಹಿಂದೂ ಸಂಸ್ಕೃತಿ ಗುರುಗಳು, ಧರ್ಮದ ಬಗ್ಗೆ ಚರ್ಚೆ ಮಾಡುವುದು ಸ್ವಾಮೀಗಳಿಗೆ ಬಿಟ್ಟಿದ್ದು ಎಂದರು.
ಮುಖ್ಯಮಂತ್ರಿಗಳು ಅಂದ್ರೆ ಬ್ರಹ್ಮ ಇದ್ದಂತೆ. ಅವರ ಕೆಳಗಡೆ ಎಲ್ಲ ಇಲಾಖೆಗಳು ಬರುತ್ತೇವೆ. ಸಿಎಂ ಯಡಿಯೂರಪ್ಪ ಎಲ್ಲವನ್ನೂ ನಿಭಾಯಿಸಲು ಸಮರ್ಥರಾಗಿದ್ದಾರೆ. ಅವರಿಗೆ ಯಾವ ಸಚಿವರು ಬೇಕಿಲ್ಲ ಎಂದು ಸಂಪುಟ ವಿಸ್ತರಣೆ ವಿಳಂಬವನ್ನು ಸಮರ್ಥಿಸಿದರು. ಯಾರು ರಾಜಕೀಯ ಸಿದ್ಧಾಂತ ಹೇಳುವುದು ಬೇಡ. ಎಲ್ಲವೂ ಒನ್ ಮ್ಯಾನ್ ಶೋ ಇರುತ್ತದೆ. ಸಚಿವರಾಗಲು ಯಾವ ಶಾಸಕರಿಗೂ ಆತುರ ಇಲ್ಲ ಎಂದರು.