ನೀಡುತ್ತೇವೆ. ಆಚರಣೆ ಎಂಬುದು ಅಶಾಂತಿಗೆ ಕಾರಣವಾಗುವಂತಿದ್ದರೆ ಕಿಡಿಗೇಡಿಗಳಿಗೆ ಕಡಿವಾಣ ಹಾಕಲು ಕಾನೂನು ಕ್ರಮಕ್ಕೆ ಮುಂದಾಗಲು ಹಿಂದೆಮುಂದೆ ನೋಡುವುದಿಲ್ಲ ಎಂದು ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ ಎಚ್ಚರಿಕೆ ನೀಡಿದರು. ಗಣೇಶ ಚತುರ್ಥಿ ಹಾಗೂ ಬಕ್ರೀದ್ ಹಬ್ಬಗಳ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆ ಮೈದಾನದಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಬ್ಬಗಳಂದು ಕುಟುಂಬ ಸದಸ್ಯರಿಂದ ಬೇರ್ಪಟ್ಟು ಬಂದೋಬಸ್ತ್ ಮಾಡುವ ಜತೆಗೆ ಸ್ನೇಹಪೂರ್ವಕವಾಗಿ ಸಾರ್ವಜನಿಕರೊಂದಿಗೆ ಬರೆಯುತ್ತೇವೆ. ಪೊಲೀಸ್ ಮುಕ್ತ ಹಬ್ಬಗಳ ಆಚರಣೆಯಾದಾಗ ಮಾತ್ರ ಕೋಮು ಸೌಹಾರ್ಧತೆಗೆ ಅರ್ಥ ಬರುತ್ತದೆ ಎಂದು ಹೇಳಿದರು. ಸಾರ್ವಜನಿಕವಾಗಿ ರಸ್ತೆಗಳಲ್ಲಿ ನಿಂತು ವಾಹನಗಳನ್ನು ತಡೆದು ಹೆದರಿಸುವ ಮೂಲಕ ಚಂದಾ ವಸೂಲಿ ಮಾಡುವಂತಿಲ್ಲ. ವಿದ್ಯಾ ಬುದ್ಧಿ ಕರುಣಿಸುವ ಗಣೇಶ ಆಚರಣೆ ದಿನಗಳಲ್ಲಿ ವಿದ್ಯಾರ್ಥಿಗಳು ಶಾಲೆಗಳನ್ನು ತಪ್ಪಿಸುವುದು ತರವಲ್ಲ. ಇನ್ನೊಬ್ಬರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಆಚರಣೆಗಳಿರಬಾರದು. ವಿದ್ಯುತ್ ಅವಘಡಗಳ ಬಗ್ಗೆ ಎಚ್ಚರವಿರಲಿ. ಈಜಲು ಬಾರದವರು ಗಣೇಶ ಮೂರ್ತಿ ವಿಸರ್ಜನೆ ವೇಳೆ ನೀರಿಗಿಳಿಯಬಾರದು.
ಪಾಲಕರು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು. ಕಾನೂನು ಉಲ್ಲಂಘಿಸುವ ಕೃತ್ಯಕ್ಕೆ ಕೈಹಾಕಬಾರದು ಎಂದು ವಿವರಿಸಿದರು. ಪಿಎಸ್‌ಐ ಸಂತೋಷ ರಾಠೊಡ ಮಾತನಾಡಿ, ಗಣೇಶ ಉತ್ಸವದ ವೇಳೆ ಪಟಾಕಿ ಸಿಡಿಸುವುದು ಮತ್ತು ಗುಲಾಲು ಎರೆಚುವುದನ್ನು ನಿಷೇಧಿ ಸಲಾಗಿದೆ ಎಂದು ಹೇಳಿದರು. ಮುಖಂಡರಾದ ಬಸವರಾಜ ಪಂಚಾಳ,
ಇಂದ್ರಜೀತ ಸಿಂಗೆ, ಫಿರೋಜ್ ಖಾನ್, ವೀರಣ್ಣ ಯಾರಿ, ಸಿದ್ದಣ್ಣ ಕಲಶೆಟ್ಟಿ, ಬಾಬುಮಿಯ್ನಾ, ಮಹ್ಮದ್ ಹುಸೇನ್ ರಾವೂರ ಮಾತನಾಡಿ, ಪರಸ್ಪರ ಸಹಕಾರದಿಂದ ಹಬ್ಬಗಳನ್ನು ಆಚರಿಸುತ್ತೇವೆ ಎಂದು ಭರವಸೆ ನೀಡಿದರು. ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಮುಕುºಲ್ ಜಾನಿ, ಎಎಸ್‌ಐ ಬಾನುದಾಸ, ಉಪ ತಹಶೀಲ್ದಾರ ಮಲ್ಲಿಕಾರ್ಜುನ, ಜೆಸ್ಕಾಂ ಅಧಿಕಾರಿ ಶರಣಪ್ಪ ಎಸ್, ಪುರಸಭೆ ಸದಸ್ಯರಾದ ಶರಣು ನಾಟೀಕಾರ, ಮಹ್ಮದ್ ಗೌಸ್, ಮುಖಂಡರಾದ ರವಿ ಕಾರಬಾರಿ, ಸಿದ್ದು ಪಂಚಾಳ, ಶ್ರವಣಕುಮಾರ ಮೌಸಲಗಿ, ರವಿ ಬಡಿಗೇರ, ಹಣಮಂತ ಹೇರೂರ, ಸತೀಶ ಭಟ್ಟರ್ಕಿ, ಜಗತಸಿಂಗ ರಾಠೊಡ, ಆನಂದ ಇಂಗಳಗಿ, ಬಾಬಾ ಖಾನ್, ಬಸವರಾಜ ಕೇಶ್ವಾರ, ಸಾಯಬಣ್ಣ ಜಾಲಗಾರ, ಹಣಮಂತ ಚವ್ಹಾಣ, ನಾಗೇಂದ್ರ ಜೈಗಂಗಾ, ಪೇದೆ ದತ್ತು ಜಾನೆ, ದೊಡ್ಡಪ್ಪ, ಬಸಲಿಂಗಪ್ಪ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು.
Advertisement