Advertisement

ಮೀಸಲಾತಿಗೆ ಬದ್ಧವಾದ ಪಕ್ಷ ಬೆಂಬಲಿಸಿ

10:08 AM Sep 01, 2017 | |

ಕಲಬುರಗಿ: ರಾಜ್ಯದಲ್ಲಿ ಮತ್ತು ದೇಶದಲ್ಲಿ ಯಾವ ಪಕ್ಷ ಜನಸಂಖ್ಯಾ ಆಧಾರಿತರವಾದ ಮೀಸಲಾತಿ
ನೀಡುತ್ತದೋ, ಅಂಬೇಡ್ಕರ್‌ ಅವರ ಸಂವಿಧಾನ ಗೌರವಿಸಿ ನಡೆಯುತ್ತದೋ ಅಂತಹ ಪಕ್ಷಕ್ಕೆ
ವಾಲ್ಮೀಕಿ ನಾಯಕ ಸಮಾಜ ಬೆಂಬಲ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ವಿ.ಎಸ್‌.
ಉಗ್ರಪ್ಪ ಹೇಳಿದರು.

Advertisement

ಕನ್ನಡ ಭವನದಲ್ಲಿ ಗುರುವಾರ ಹೈದ್ರಾಬಾದ ಕರ್ನಾಟಕ ವಾಲ್ಮೀಕಿ ನಾಯಕ ಯುವ ಘಟಕ
ಸಂಘಟನೆಗೆ ಚಾಲನೆ ಮತ್ತು ವಾಲ್ಮೀಕಿ ಸಮಾಜದ ವಿಚಾರ ಸಂಕಿರಣ ಉದ್ಘಾಟಿಸಿ ಅವರು
ಮಾತನಾಡಿದರು.

ವಾಲ್ಮೀಕಿ ನಾಯಕರು ಒಗಟ್ಟಾಗಿ ಪ್ರತಿಯೊಂದು ವಿಷಯದಲ್ಲಿ ಪೂಜ್ಯ ಗುರುಗಳ ಮಾರ್ಗದರ್ಶನದಲ್ಲಿ ಸಾಗಿದರೆ, ಪ್ರತಿಯೊಂದು ರಾಜಕೀಯ ಪಕ್ಷಗಳು ನಾಯಕರ ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಒಗ್ಗಟ್ಟು ಪ್ರದರ್ಶನ ಮಾಡಬೇಕಾಗಿದೆ ಎಂದರು.

ಅತಿಥಿಯಾಗಿದ್ದ ಬೆಳಗಾವಿ ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ
ಪ್ರಾಧ್ಯಾಪಕ ಅಮರೇಶ ನಾಯಕ ಯತಗಲ್‌ ಮಾತನಾಡಿ, ಸಮಾಜದ ಇತಿಹಾಸವನ್ನು
ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ವಾಲ್ಮೀಕಿ ಮಹರ್ಷಿ ಮೂಲತ ಬೇಡ ಸಮಾಜದವರೇ
ಆಗಿದ್ದಾರೆ ಎನ್ನುವುದನ್ನು ಅನೇಕರು ತಿರುಚುವ ಕೆಲಸ ಮಾಡಿದ್ದಾರೆ. ಅಲ್ಲದೆ, ನಮ್ಮ ಸಮಾಜದ
ಐತಿಹಾಸಿಕ ಪುರುಷರನ್ನು ಹೈಜಾಕ್‌ ಮಾಡಿದ್ದಾರೆ. ವಾಲ್ಮೀಕಿಯನ್ನು ಹೈಜಾಕ್‌ ಮಾಡಿದ್ದಾರೆ.
ಇದೆಲ್ಲವನ್ನು ನಾವು ಅರ್ಥ ಮಾಡಿಕೊಂಡು ಆ ನಿಟ್ಟಿನಲ್ಲಿ ಯುವಕರು ಮುನ್ನಡೆಯಬೇಕು.
ಅದಕ್ಕಾಗಿ ಸಂಘಟನೆ ಮಾಡಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ
ಸ್ವಾಮಿಜಿ ಹಾಗೂ ಸಮಾಜದ ಮುಖಂಡ ರಾಮು ನಾಯಕ ಸುರಪುರ ಮಾತನಾಡಿದರು.
ಹೈದ್ರಾಬಾದ ಕರ್ನಾಟಕ ವಾಲ್ಮೀಕಿ ನಾಯಕ ಯುವ ಘಟಕದ ಅಧ್ಯಕ್ಷ ವಿಶ್ವನಾಥ ಜಮಾದಾರ
ವಹಿಸಿಕೊಂಡಿದ್ದರು.

Advertisement

ಬೆಂಗಳೂರಿನ ಮಾಧ್ಯಮ ಅಕಾಡೆಮಿ ಸದಸ್ಯ ಮುತ್ತು.ನಾಯ್ಕರ್‌ ಮತ್ತು ಸಮಾಜದ ಮುಖಂಡರಾದ ದೇವರಾಜ.ಕೆ, ನಂದಕುಮಾರ ಮಾಲಿಪಾಟೀಲ, ಅಯ್ಯಪ್ಪ.ವಾಲ್ಮೀಕಿ, ಶಿವರಾಜ.ನಾಯಕ, ಚನ್ನಪ್ಪ.ಸುರಪುರಕರ್‌, ರಾಜು ಸಿ.ಮಾವನೂರು, ಲಕ್ಷ್ಮೀಕಾಂತ ಬಿ.ದೊರೆ, ವಿಶ್ವನಾಥ ಕೆ.ಸುಬೇದಾರ, ರಮೇಶ ಉಡಮನಹಳ್ಳಿಕರ್‌, ನಾಗರಾಜ್‌ ಜಿನ್ಕೇರಾ, ವಿಶ್ವರಾಧ್ಯ.ಸುಭೇದಾರ, ನರಸಿಂಹ ಜಮಾದಾರ, ಅಶೋಕ ಶರಣಸಿರಸಗಿ, ಶ್ರವಣಕುಮಾರ ಡಿ.ನಾಯಕ, ಅಯ್ಯಣ್ಣ.ನಾಯಕ
ಪಾಮನಕಲ್ಲೂರು, ಶರಣು ಸುರಪೂರ್ಕರ್‌ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next