Advertisement
ಇದರೊಂದಿಗೆ ಪ್ರವಾಸೋದ್ಯಮ ವಲಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯ ಕೊರತೆಗೆ ಉದ್ದೇಶಿತ ವೇದಿಕೆ ಸಾಕ್ಷಿಯಾಯಿತು. ಕರ್ನಾಟಕ, ಕೇರಳ, ಪುದುಚೆರಿ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಅಂಡಮಾನ್, ಲಕ್ಷದ್ವೀಪ ಸೇರಿದಂತೆ ಎಂಟು ರಾಜ್ಯಗಳ ಪ್ರತಿನಿಧಿಗಳು, ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದ ಸಮ್ಮೇಳನದಲ್ಲಿ “ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ)ದ ಸುಪರ್ದಿಗೆ ಬರುವ ಪಾರಂಪರಿಕ ತಾಣಗಳ ಪ್ರವೇಶಕ್ಕೂ ತಮಗೆ ಅವಕಾಶ ನೀಡುವುದಿಲ್ಲ. ಹೋಗಲಿ ನೀವು ಕೂಡ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತಿಲ್ಲ. ಇದರಿಂದ ತಾಣಗಳು ನೆನಗುದಿಗೆ ಬೀಳುತ್ತವೆ’ ಎಂದು ಅಸಮಾಧಾನ ಹೊರಹಾಕಿದರು.
Related Articles
Advertisement
ಶೀಘ್ರ ರಾಷ್ಟ್ರಮಟ್ಟದ ಸಮ್ಮೇಳನ: ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಪ್ರವಾಸೋ ದ್ಯಮ ಸಚಿವ ಜಿ. ಕಿಶನ್ ರೆಡ್ಡಿ, ಕೋವಿಡ್ ಹಾವಳಿ ನಂತರದಲ್ಲಿ ದೇಶದ ಪ್ರವಾಸೋದ್ಯಮ ಅಭಿವೃದ್ಧಿಗೆ ದೊಡ್ಡ ಪೆಟ್ಟುಬಿದ್ದಿದೆ. ಇದನ್ನು ಮತ್ತೆ ಸಹಜ ಸ್ಥಿತಿಗೆ ತರಲು ಹಲವು ರೀತಿಯ ಪ್ರಯತ್ನಗಳು ನಡೆಯು ತ್ತಿವೆ. ಈಗಾಗಲೇ ಈಶಾನ್ಯ ರಾಜ್ಯಗಳ ಪ್ರವಾಸೋ ದ್ಯಮ ಸಚಿವರುಗಳು, ಟ್ರಾವೆಲ್ ಏಜೆನ್ಸಿಗಳು, ಗೈಡ್ ಗಳು ಮತ್ತಿತರ ಸಭೆ ಕರೆದು ಚರ್ಚಿಸಲಾಗಿದೆ. ಈಗ ದಕ್ಷಿಣ ಭಾರತದ ರಾಜ್ಯಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಮುಂದುವರಿದ ಭಾಗವಾಗಿ ಇನ್ನೆರಡು ತಿಂಗಳಲ್ಲಿ ರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಸಚಿವರುಗಳ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕನ್ನಡ ನಾಪತ್ತೆ: ಸಚಿವ ಆನಂದ್ ಸಿಂಗ್ ಬೇಸರ
ಒಂದೆಡೆ ಸ್ವತಃ ರಾಜ್ಯ ಸರ್ಕಾರ “ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲೆಡೆ ಕನ್ನಡ ಅನುರಣಿಸುತ್ತಿದೆ. ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲಿದೆ. ಈ ಸಂದರ್ಭದಲ್ಲಿ ಮತ್ತೂಂದೆಡೆ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡ ಎರಡು ದಿನಗಳ ಕಾರ್ಯಕ್ರಮದಲ್ಲೇ ಕನ್ನಡ ಕಾಣೆಯಾಗಿದೆ. ಇದನ್ನು ಖುದ್ದು ಸಚಿವ ಆನಂದ್ ಸಿಂಗ್ ಬೇಸರ ವ್ಯಕ್ತಪಡಿಸಿದರು. ನಗರದ ತಾಜ್ ವೆಸ್ಟ್ ಎಂಡ್‌ನಲ್ಲಿ ಗುರುವಾರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ದಕ್ಷಿಣ ಭಾರತದ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದ ಸ್ವಾಗತ ಕಮಾನು ಮತ್ತು ಮುಖ್ಯ ವೇದಿಕೆಯಲ್ಲಿ ಹಾಕಿರುವ ಪರದೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ರಾರಾಜಿ ಸುತ್ತಿದ್ದವು.
ಆದರೆ, ಕನ್ನಡಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಇದು ಮಾಧ್ಯಮಗಳು ಮತ್ತು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ತಕ್ಷಣ ಎಚ್ಚೆತ್ತ ಸಚಿವ ಆನಂದ್ ಸಿಂಗ್, ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಮಹಾ ನಿರ್ದೇಶಕ ಗಂಜಿ ಕಮಲ ವರ್ಧನ್ ರಾವ್ ಅವರಿಗೆ ಕನ್ನಡ ಬ್ಯಾನರ್ ಹಾಕಲು ತಾಕೀತು ಮಾಡಿದರು. ಅಲ್ಲದೆ, ಕೆಲ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡರು. ಮಧ್ಯಾಹ್ನದ ಹೊತ್ತಿಗೆ ವೇದಿಕೆ ಎರಡೂ ಬದಿ ಡಿಜಿಟಲ್ ಪರದೆಯಲ್ಲಿ ಕನ್ನಡ ಕಾಣಿಸಿತು.