Advertisement

ಗಾಣಿಗ ಸಮುದಾಯದಿಂದ ಬೆಂಬಲ

01:01 PM May 11, 2018 | |

ಇಂಡಿ: ತಾಲೂಕಿನ ಗಾಣಿಗ ಸಮುದಾಯ ಕುಲ ಬಾಂಧವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಸಾಲೋಟಗಿ ಗ್ರಾಮದ ಹೊರಭಾಗದ ಮೈದಾನದಲ್ಲಿ ಗುರುವಾರ ನಡೆದ ಗಾಣಿಗ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಕಳೆದ 5 ವರ್ಷದಲ್ಲಿ ಇತಿಹಾಸದಲ್ಲಿಯೇ ಕಂಡರಿಯದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಿಂದಿನ 15 ವರ್ಷಗಳ ಶಾಸಕರಾಗಿದ್ದವರು ಸಾರ್ವಜನಿಕ ಕೆಲಸ ಮಾಡದೆ ಭೀಮಾಶಂಕರ ಸಕ್ಕರೆ ಕಾರ್ಖಾನೆಯನ್ನು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಲು ಹೊರಟಾಗ ನಾನು ನ್ಯಾಯಾಲಯದ ಮೂಲಕ ತಡೆ ಮಾಡಿ 16439 ರೈತರ ಆಸ್ತಿಯನ್ನಾಗಿ ಮಾಡಿರುವೆ. ಬಿದ್ದ ಗೋಡೆ, ಕಬ್ಬಿಣದ ಸಲಾಕೆ ತೆಗೆದುಕೊಂಡು ಹೋಗಿ ತಮ್ಮ ಮನೆ ಕಟ್ಟಡಕ್ಕೆ ಉಪಯೋಗಿಸಿದ ಪುಣ್ಯಾತ್ಮನಿಗೆ ಮತ ಹಾಕುತ್ತೀರೋ ಅಥವಾ ಸಾರ್ವಜನಿಕವಾಗಿ ದುಡಿದು ಅನಾರೋಗ್ಯದಿಂದ ಬಳಲಿ ಬಡಾಗಿರುವ ನನಗೆ ಮತ ಹಾಕುತ್ತೀರೊ ನಿಮಗೆ ಬಿಟ್ಟ ವಿಚಾರ ಎಂದ ಹೇಳಿದರು.

ಶಾಸಕರಾದವರಲ್ಲಿ ಮೊದಲು ನೈತಿಕತೆ ಇರಬೇಕು. ತಮ್ಮ ಜೀವನ ಶುಭ್ರವಾಗಿದ್ದಾಗ ಮಾತ್ರ ಮತ ಕೇಳಲು ಅರ್ಹರು ಎಂದು ಹೇಳಿದರು. ಕಣದಲ್ಲಿ 12 ಜನ ಅಭ್ಯರ್ಥಿಗಳಿದ್ದಾರೆ. ಜೆಡಿಎಸ್‌ -ಬಿಜೆಪಿಯಿಂದ ಸ್ಪರ್ಧಿಸಿದರು ಲೆಕ್ಕಕ್ಕಿಲ್ಲ. ಅವರು
ಹೊಸಬರು. ನನ್ನ ಎದುರಾಳಿ ಪಕ್ಷೇತರ ಅಭ್ಯರ್ಥಿ. ಆದ್ದರಿಂದ ತಾಲೂಕಿನ ಮತಬಾಂಧವರು ಜಾತಿ ಮತ ಎನ್ನದೆ ಅಭಿವೃದ್ಧಿ, ನ್ಯಾಯ ನೀತಿ, ಒಳ್ಳೆಯತನಕ್ಕಾಗಿ ತಮ್ಮ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
 
ಜಿಪಂ ಸದಸ್ಯ ಶಿವಯೋಗೆಪ್ಪ ನೇದಲಗಿ ಮಾತನಾಡಿದರು. ಜಿಪಂ ಸದಸ್ಯ ಸುಭಾಷ ಕಲ್ಲೂರ, ಹಣಮಂತರಾಯಗೌಡ ಪಾಟೀಲ, ಮಹಾದೇವ ಗಡ್ಡದ, ಭೀಮರಾಯಗೌಡ ಪಾಟೀಲ, ಜಟ್ಟೆಪ್ಪ ರವಳಿ, ಬಾಳಾಸಾಹೇಬ ಸೇಳಕೆ, ಅಶೋಕಗೌಡ ಬಿರಾದಾರ, ಶಿವಾನಂದ ಮಠ, ರವಿಗೌಡ ಪಾಟೀಲ, ಶ್ರೀಮಂತ ಗಿಣ್ಣಿ, ರುಕ್ಮುದೀನ್‌ ತದ್ದೇವಾಡಿ, ಎ.ಪಿ. ಕಾಗವಾಡಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next