Advertisement
ತಾಲೂಕಿನ ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮರಗೂರದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಬಹುದಿನಗಳಿಂದ ನನೆಗುದಿಗೆ ಬೀಳಲು ಅನೇಕ ಕಾರಣಗಳಿರಬಹುದು. ಯಾವುದೇ ಒಂದುಕೆಲಸಗಳು ಆಗಬೇಕಾದರೆ ಭಗವಂತನ ಕರುಣೆ ಇದ್ದಾಗ ಮಾತ್ರ ಸಾಧ್ಯ. ದೇವರ ಶಕ್ತಿ ಇಲ್ಲದೆ ಹುಲ್ಲು ಕಡ್ಡಿ ಅಲಗಾಡದು. ತಾಲೂಕಿನ ಸರ್ವ ಜನಾಂಗ ನೀಡಿರುವ ರಾಜಕೀಯ ಶಕ್ತಿಯಿಂದ ಇಂತಹ ಕಾರ್ಯ ಆಗಿದೆ ಎಂದು ಹೇಳಿದರು.
ಕಳೆದ ಅವಧಿಯಲ್ಲಿ ಆಗಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅಂದಿನ ಸಹಕಾರ ಸಚಿವ ಮಹಾದೇವ ಪ್ರಸಾದ ಅವರು ಸಹಾಯ ಮಾಡಿದ್ದಾರೆ. ಅಲ್ಲದೆ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಭೀರೇಶ್ವರ ಕೋ ಆಪರೇಟಿವ್ ಬ್ಯಾಂಕ್ ಹೀಗೆ ಅನೇಕ ಕ್ಷೇತ್ರಗಳಿಂದ ಸಾಲ ಮಾಡಿ ಕಾರ್ಖಾನೆ ಸ್ಥಾಪಿಸಲಾಗಿದೆ. ಇದು ರಾಜ್ಯದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಂತೆ ಉತ್ತುಂಗ ಮಟ್ಟಕ್ಕೆ ಬೆಳೆಯಲಿ ಎಂಬ ಉದ್ದೇಶ ಹೊಂದಿದ್ದೇವೆ ಎಂದರು.
ನಾಯ್ಕೋಡಿ, ಮಲ್ಲನಗೌಡ ಪಾಟೀಲ, ಬಸಣ್ಣಾ ಕೋರೆ, ಧಾನಮ್ಮಾ ಬಿರಾದಾರ, ಲಲಿತಾ ನಡಗೇರಿ, ಸಂಬಾಜಿರಾವ ಮಿಸಾಳೆ, ಎಂ.ಡಿ. ಅಶೋಕ ಮೂರಬ, ವಿಶೇಷಾಧಿಕಾರಿ ಮಲ್ಲು, ಚಿದಾನಂದ ನಿಂಬಾಳ, ಭೀಮಾಶಂಕರ ಮುರಗುಂಡಿ, ಪ್ರಶಾಂತ ಕಾಳೆ, ಜಾವೀದ ಮೋಮಿನ, ಧನರಾಜ ಮುಜಗೊಂಡ, ಸದಾಶಿವ ಪ್ಯಾಟಿ, ಮಹೇಶ ಹೊನ್ನಬಿಂದಗಿ, ಅವಿನಾಶ ಬಗಲಿ, ಜಬ್ಬರಣ್ಣಾ ಅರಬ, ಅಜೀತ ಧನಶೆಟ್ಟಿ, ಧರ್ಮು ಸಾಲೋಟಗಿ ಇದ್ದರು.