Advertisement
ನರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಹಾಗೂ ಭಾರತ ಸೇವಾ ದಳದ ಸಂಯುಕ್ತ ಆಶ್ರಯದಲ್ಲಿ ಗಾಂಧೀಜಿ ಜಯಂತಿ ಅಂಗವಾಗಿ ನಗರದ ಸರ್ವಧರ್ಮ ಪ್ರಾರ್ಥನೆ,ಸದ್ಭಾವನಾ ಗೀತ ಗಾಯನ ಹಾಗೂ ಕರ್ನಾಟಕದಲ್ಲಿ ಗಾಂಧೀಜಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆದ ದೇಶ ಭಾರತವಾಗಿದ್ದು, ಗಾಂಧೀಜಿ ಅವರ ಅಹಿಂಸಾ ತತ್ವವೇ ಇದಕ್ಕೆ ಮೂಲ ಕಾರಣವಾಗಿದೆ. ಸ್ವಾತಂತ್ರ್ಯ ಸಮಯದಲ್ಲಿ ಅವರ ಮಾತಿಗೆ ಇಡೀ ದೇಶ ಜನರು ಬೆಂಬಲ ನೀಡಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದನ್ನು ಸಚಿವರು ಸ್ಮರಿಸಿದರಲ್ಲದೇ ಲಾಲ ಬಹಾದ್ದೂರ ಶಾಸ್ತ್ರೀ, ಮಹಾತ್ಮ ಗಾಂಧೀಜಿ ಸೇರಿದಂತೆ ಮಹಾನ್ ಪುರುಷರ ಜೀವನವನ್ನು ಇಂದಿನ ಯುವ ಪೀಳಿಗೆ ಅಧ್ಯಯನ ಮಾಡುವುದರೊಂದಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಶ್ರೀಶೈಲಂ ಸಾರಂಗಮಠದ ಡಾ|ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಮಹ್ಮದ್ ಜಾವೀದ್ ಆಲಂ ಖಾಸ್ಮಿ, ಪೂಜ್ಯ ಸಂಗಾನಂದ ಭಂತೇಜಿ ಹಾಗೂ ಸೆಂಟ್ ಮೇರಿಚರ್ಚ್ ಫಾದರ್ ಸ್ಟ್ಯಾನಿ ಅವರು ಧಾರ್ಮಿಕ ಪಠಣ ಮಾಡಿದರು.
Related Articles
ಕಲಾವಿದ ಸಿದ್ರಾಮಪ್ಪ ಪೊಲೀಸ್‌ಪಾಟೀಲ, ನಿವೃತ್ತ ವಾರ್ತಾಧಿಕಾರಿ ಜಿ. ಚಂದ್ರಕಾಂತ ಹಾಗೂ ಭಾರತ ಸೇವಾದಳದಿಂದ ಸರ್ವಧರ್ಮ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ಕೊನೆಯಲ್ಲಿ ರಘುಪತಿ ರಾಘವಗಾಂಧಿ ಭಜನೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು. ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕದಲ್ಲಿ ಗಾಂಧೀಜಿ ಕುರಿತ ಅಪೂರ್ವ ಛಾಯಚಿತ್ರ ಪ್ರದರ್ಶನ ಉದ್ಘಾಟಿಸಿದರು.
Advertisement
ಮಹಾಪೌರ ಶರಣ ಕುಮಾರ ಮೋದಿ, ಆಯುಕ್ತ ಪಿ. ಸುನೀಲ ಕುಮಾರ, ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಶಶೀಲ ಜಿ.ನಮೋಶಿ, ಸಹಾಯಕ ಆಯುಕ್ತ ರಾಚಪ್ಪ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಭಾರತ ಸೇವಾದಳದ ಕಾರ್ಯದರ್ಶಿ ಶಿವಲಿಂಗಪ್ಪ ಗೌಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅನೇಕ ಗಣ್ಯರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಹಶೀಲ್ದಾರ ದಯಾನಂದ ಪಾಟೀಲ ನಿರೂಪಿಸಿದರು.