Advertisement

ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಿರಿ: ಜಾಧವ್‌

10:30 AM Sep 11, 2017 | Team Udayavani |

ಚಿಂಚೋಳಿ: ಸರಕಾರಿ ಆಸ್ಪತ್ರೆಗಳಲ್ಲಿಯೇ ಸಾರ್ವಜನಿಕರು ಚಿಕಿತ್ಸೆ ಪಡೆದುಕೊಳ್ಳಬೇಕು, ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹೆಚ್ಚಿನ ಹಣ ಖರ್ಚು ಮಾಡಿಕೊಳ್ಳಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್‌ ಹೇಳಿದರು.

Advertisement

ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ರವಿವಾರ 1.20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿವೆ. ಅಕ್ಟೋಬರ್‌
2 ಮಹಾತ್ಮ ಗಾಂಧಿ  ಜಯಂತಿ ದಿನದಂದು ಬಾಣಂತಿಯರಿಗೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕೊಡುವುದಕ್ಕಾಗಿ ಮಾತೃಪೂರ್ಣ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು. 

ಆಹಾರ ಪಡಿತರರು ರಾಜ್ಯದ ಯಾವದೇ ನ್ಯಾಯಬೆಲೆ ಅಂಗಡಿಯಿಂದ ಆಹಾರ ಧಾನ್ಯ ಪಡೆದುಕೊಳ್ಳುವುದಕ್ಕಾಗಿ ಸರಕಾರ ಹೊಸ ಕಾನೂನು ಜಾರಿಗೊಳಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
 
ಚಂದನಕೇರಾ ಅತಿ ಹಿಂದುಳಿದ ಪ್ರದೇಶ ಆಗಿರುವುದರಿಂದ ಅನೇಕ ಸವಲತ್ತುಗಳನ್ನು ಮಂಜೂರಿಗೊಳಿಸದ್ದೇನೆ. ಸೀರೆಗಳನ್ನು ಆಶ್ರಯವಾಗಿ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಅಲೆಮಾರಿ ಜನಾಂಗದವರಿಗೆ 40 ಮನೆಗಳನ್ನು ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿರಿ. ಶೇ. 50ರಷ್ಟು ಮಹಿಳೆಯರಿಗೆ ಮೀಸಲಾತಿ ಇರುವುದರಿಂದ
ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಚಂದನಕೇರಾ ಗ್ರಾಮದಲ್ಲಿ ಕಳೆದ 37ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ಸೇವೆ ಸಲ್ಲಿಸುತ್ತಿದೆ. ಪ್ರತಿ ತಿಂಗಳು 30-40 ಹೆರಿಗೆ ಆಗುತ್ತಿವೆ ಎಂದು ಹೇಳಿದರು.

Advertisement

ಗ್ರಾಮದ ಹಿರಿಯ ಮುಖಂಡ ಕುಪೇಂದ್ರರಾವ್‌ ಫತ್ತೆಪುರ ಮಾತನಾಡಿ, ಚಂದನಕೇರಾ ಗ್ರಾಮಕ್ಕೆ ಕಳೆದ 4ವರ್ಷಗಳಲ್ಲಿ
ಅನೇಕ ಅಭಿವೃದ್ಧಿ ಕೆಲಸಗಳನ್ನು ಶಾಸಕರು ಮಾಡಿದ್ದಾರೆ ಎಂದರು. 

ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 4ಎಕರೆ ಜಮೀನು ನೀಡಿದ ರಾಮರಾವ ಪಾಟೀಲ ಮಾತನಾಡಿ, ಆಸ್ಪತ್ರೆಗೆ ಸಿಬ್ಬಂದಿ ಮತ್ತು ಕಾಂಪೌಂಡ್‌ ಬೇಕಾಗಿದೆ ಎಂದರು.

ಪೂಜ್ಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ತಾಪಂ ಅಧ್ಯಕ್ಷೆ ರೇಣುಕಾಚವ್ಹಾಣ ಟಿಎಚ್‌ಒ ಡಾ| ಜಗದೀಶಚಂದ್ರ
ಬುಳ್ಳ, ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ, ಎಇಇ ವೀರಣ್ಣ ಕುಣಕೇರಿ, ಎಇಇ ಅಶೋಕ ತಳವಾಡೆ, ಡಾ| ದೀಪಕ ಪಾಟೀಲ, ತಾಪಂ ಸದಸ್ಯರಾದ ರಾಮರಾವ ರಾಠೊಡ, ಪ್ರೇಮಸಿಂಗ್‌ ಜಾಧವ್‌, ಜಿಪಂ ಸದಸ್ಯ ನಿಂಬೆಣ್ಣಪ್ಪ, ಸಿದ್ದು ಮಾನಕರ, ಶರಣಗೌಡ ಪಾಟೀಲ, ಭವಾನಿ ಪತ್ತೆಪುರ, ಗ್ರಾಪಂ ಅಧ್ಯಕ್ಷೆ ಅನುಸೂಯ ರಾಠೊಡ, ಉಪಾಧ್ಯಕ್ಷ ರೇವಣಸಿದ್ದಪ್ಪ, ಗ್ರೇಡ್‌ 2 ತಹಸೀಲ್ದಾರ ಮಾಣಿಕರಾವ್‌ ಇದ್ದರು. ಡಿಎಚ್‌ಒ ಡಾ| ಶಿವರಾಜ ಸಜ್ಜನಶೆಟ್ಟಿ ಸ್ವಾಗತಿಸಿದರು. ದತ್ತು ಪಾಟೀಲ ನಿರೂಪಿಸಿದರು. ಕಾಳೇಶ್ವರ ರಾಮಗೊಂಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next