Advertisement

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಒತ್ತಾಯಕ್ಕೆ ಬೆಂಬಲ: ಡಿಸಿಎಂ ಅಶ್ವತ್ಥನಾರಾಯಣ

11:25 AM Nov 24, 2020 | keerthan |

ಬೆಳಗಾವಿ: ರಾಜ್ಯಸರ್ಕಾರವು ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿದ್ದು ಲಿಂಗಾಯತ ಅಭಿವೃದ್ಧಿ ನಿಗಮದಂತೆ ಒಕ್ಕಲಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎ೦ದು ಉಪ ಮುಖ್ಯಮ೦ತ್ರಿ ಅಶ್ವತ್ಥನಾರಾಯಣ ಹೇಳಿದರು.

Advertisement

ಬೆಳಗಾವಿ ವಿಮಾನ ನಿಲ್ಧಾಣದಲ್ಲಿ ಮ೦ಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಕ್ಕಲಿಗರ ಅಭಿವೃದ್ಧಿ ನಿಗಮ ಆಗಬೇಕು ಎನ್ನುವ ಒತ್ತಾಯ ಇದೆ, ಅದಕ್ಕೆ ನನ್ನ ಬೆಂಬಲವೂ ಇದೆ ಎ೦ದು ಹೇಳಿದರು.

ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ವಿನಯ್ ಕುಲಕರ್ಣಿ ಹಲವರಿಗೆ ಕರೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಯಾರಿಗೆ ಕರೆ ಮಾಡುತ್ತಿದಾರೆ ಗೊತ್ತಿಲ್ಲ. ಜೈಲಿನಲ್ಲಿ ಏನು ಸೌಲಭ್ಯ ಇರುತ್ತದೆ, ಅವರಿಗೆ ನ್ಯಾಯಾಂಗದಿಂದ ಏನು ಸೌಲಭ್ಯ ಕೊಟ್ಟಿದ್ದಾರೆ ಗೊತ್ತಿಲ್ಲ, ಸಿಬಿಐ ತನಿಖೆ ನಡೆಯಬೇಕಾದರೆ ನಾವು ಇದನ್ನೆಲ್ಲಾ ಕೇಳಲು ಬರುವದಿಲ್ಲ. ಕಾನೂನು ಬಾಹಿರವಾಗಿ ನಡೆದುಕೊಳ್ಳಲು ಯಾವುದೇ ಅವಕಾಶ ಇರುವುದಿಲ್ಲ ಎ೦ದರು.

ಇದನ್ನೂ ಓದಿ:ಉದಯವಾಣಿ ರಿಯಾಲಿಟಿ ಚೆಕ್‌: ಪ್ರತಿದಿನ 5% ಹಾಜರಾತಿಯೂ ಇಲ್ಲ! ಆಫ್ಲೈನ್ ಕ್ಲಾಸ್‌ಗೆ ನಿರಾಸಕ್ತಿ

ರಮೇಶ್ ಜಾರಕಿಹೊಳಿ ದೆಹಲಿ ಭೇಟಿಯ ಬಗ್ಗೆ ಮಾತನಾಡಿದ ಅವರು, ತಮ್ಮ ಜೊತೆ ಬಿಜೆಪಿಗೆ ಬಂದಿರುವವರಿಗೆ ಸಚಿವ ಸ್ಥಾನ ಕೊಡಿಸಲು ರಮೇಶ ಜಾರಕಿಹೊಳಿ ದೆಹಲಿಗೆ ಹೋಗುತ್ತಿರಬಹುದು. ಅದರಲ್ಲಿ ತಪ್ಪೇನಿಲ್ಲ. ತಮ್ಮ ಜೊತೆ ಬ೦ದವರ ಹಿತ ಕಾಯಲು ರಮೇಶ ಜಾರಕಿಹೊಳಿ ಬದ್ಧರಾಗಿದ್ದಾರೆ ಎ೦ದು ಅವರು ಹೇಳಿದರು.

Advertisement

ಯಾವುದೇ ಕಾರಣಕ್ಕೂ ಮುಖ್ಯಮ೦ತ್ರಿಗಳ ಬದಲಾವಣೆ ಇಲ್ಲ. ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ. ಇದರಲ್ಲಿ ಅನುಮಾನ ಬೇಡ ಎ೦ದರು.

ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಈ ವಿಷಯದಲ್ಲಿ ಯಾವ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next