Advertisement

ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂ’ಬಲ’

03:47 PM Mar 29, 2022 | Team Udayavani |

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದ್ದು, ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಸೋಮವಾರ ಗ್ರಾಮೀಣ, ತಾಲೂಕು ಹಾಗೂ ನಗರಗಳಲ್ಲಿ ಸಂಘಟನೆಗಳು ಕಾರ್ಮಿಕರೊಂದಿಗೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬ್ಯಾಂಕ್‌, ವಿಮೆ, ಆದಾಯ ತೆರಿಗೆ, ಅಂಚೆ ಸೇರಿದಂತೆ ಹಲವು ಸೇವೆಗಳಲ್ಲಿ ಸೋಮವಾರ ವ್ಯತ್ಯಯವಾಗಿದ್ದು, ಮಂಗಳವಾರವೂ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಬ್ಯಾಂಕ್‌ ಸೇವೆ ಸ್ಥಗಿತಗೊಳಿಸಲಾಯಿತು. ಕೇಂದ್ರ ಸರ್ಕಾರ ಹಲವು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಸಜ್ಜಾಗಿದ್ದು, ಈ ನಿರ್ಧಾರ ಸಮರ್ಥನೀಯವಲ್ಲ. ದೇಶದ ಆರ್ಥಿಕತೆ ಮತ್ತು ಜನತೆಗೆ ಅನುಕೂಲಕರವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಸೇವಾ ವಲಯದಲ್ಲಿರುವ ಬ್ಯಾಂಕುಗಳನ್ನು ಬಲವರ್ಧನೆಗೊಳಿಸಬೇಕು. ಬ್ಯಾಂಕುಗಳ ಖಾಸಗೀಕರಣ ನಿಲ್ಲಿಸಬೇಕು. ಬ್ಯಾಂಕುಗಳ ಠೇವಣಿ ಮೇಲಿನ ಬಡ್ಡಿಯನ್ನು ಹೆಚ್ಚಿಸಬೇಕು. ಹೆಚ್ಚಿನ ಸೇವಾ ಶುಲ್ಕವನ್ನು ಗ್ರಾಹಕರ ಮೇಲೆ ವಿಧಿಸಬಾರದು. ಬ್ಯಾಂಕು ನೌಕರರಿಗೆ ಪಿಂಚಣಿ ನೀಡುವುದು, ಎನ್‌ಪಿಎಸ್‌ ನಿಲ್ಲಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಬ್ಯಾಂಕ್‌ ನೌಕರರ ಪ್ರತಿಭಟನೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಬ್ಯಾಂಕ್‌ ನೌಕರರ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಆರ್‌. ಬಸವರಾಜ್‌, ಪದಾಧಿಕಾರಿಗಳಾದ ಉಜ್ವಲ್‌ ಪಡುಬಿದ್ರೆ, ಎಸ್ಪಿ ನಂದನ್‌, ಶ್ರೀನಿವಾಸ್‌, ಕೆ.ಜಿ. ರೇವಣ್ಣ ಹಾಗೂ ಅಂಚೆ ನೌಕರರ ಪ್ರತಿಭಟನೆಯಲ್ಲಿ ಅಂಚೆ ನೌಕರರ ಜಂಟಿಕ್ರಿಯಾ ಸಮಿತಿಯ ಅಧ್ಯಕ್ಷ ಮಹೇಂದ್ರಮೌರ್ಯ, ಜೆಸಿಎ ಕಾರ್ಯದರ್ಶಿ ಎಂ. ಡಿ. ಲೋಹಿತ್‌ ಕುಮಾರ್‌, ಖಜಾಂಚಿ ಸಿ.ಬಿ.ವಿಕ್ರಮ್‌ ಇದ್ದರು.

ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾ ವಿಭಾಗದಿಂದಲೂ ಪ್ರತಿಭಟನೆ ನಡೆಯಿತು. ಸಂಘದ ಅಧ್ಯಕ್ಷ ಜೋಸೆಫ್‌ ಬರೋಟೊ, ಕಾರ್ಯದರ್ಶಿ ಅಸ್ಲಂ ಅಹ್ಮದ್‌, ಖಜಾಂಚಿ ಆರ್‌. ಮಂಜುನಾಥ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next