Advertisement
‘ನಾವು ಮುಷ್ಕರ ನಡೆಸಿಲ್ಲ; ಆದರೆ ಮುಷ್ಕರ ನಿರತರಿಗೆ ಬೆಂಬಲ ಸೂಚಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಸಂಘದ ರಾಜ್ಯ ಅಧ್ಯಕ್ಷೆ ಜಯಲಕ್ಷ್ಮೀ ಬಿ. ಆರ್.
ಅವರು ತಿಳಿಸಿದ್ದಾರೆ.
ಸರಕಾರವು ಕೆಲಸದ ಹೊರೆ ಹೊರಿಸುತ್ತಿದೆಯೇ ಹೊರತು ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸರಕಾರದ ಈ
ಧೋರಣೆ ಸರಿಯಲ್ಲ; ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಅವರು ಆಗ್ರಹಿಸಿದರು. ಮನವಿ ಸಲ್ಲಿಸಿದ ನಿಯೋಗದಲ್ಲಿ ಅಧ್ಯಕ್ಷೆ ಜಯಲಕ್ಷ್ಮೀ ಬಿ. ಆರ್., ಜಿಲ್ಲಾ ಸಂಘದ ಕಾರ್ಯದರ್ಶಿ ಚಂದ್ರಾವತಿ, ಉಪಾಧ್ಯಕ್ಷೆ ಕವಿತಾ ಪುತ್ತೂರು, ಗೌರವ ಸಲಹೆಗಾರರಾದ ಅರುಣಾ ಡಿ. ಪುತ್ತೂರು ಮತ್ತು ವಿವಿಧ ತಾಲೂಕು ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.
Related Articles
42ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್ ತೀರ್ಮಾನದ ಪ್ರಕಾರ ಸ್ಕೀಂ ವರ್ಕರ್‌ಗಳಿಗೆ ತಿಂಗಳಿಗೆ 18,000 ರೂ.
ವೇತನ ಹಾಗೂ 3,000 ರೂ. ಪಿಂಚಣಿ ಜಾರಿ, ಮಾತೃಪೂರ್ಣ ಯೋಜನೆಯ ಬಗ್ಗೆ ಸರಕಾರ ಸಮಗ್ರವಾಗಿ ಅಧ್ಯಯನ
ನಡೆಸಿ ಅಭಿಪ್ರಾಯ ಸಂಗ್ರಹಿಸಿ ಫಲಾನುಭವಿಗಳ ಹಿತದೃಷ್ಟಿಯಿಂದ ಈ ಮೊದಲಿನಂತೆ ಮನೆಗೆ ಆಹಾರ ವಸ್ತುಗಳನ್ನು ವಿತರಿಸುವುದು, ಮಾತೃ ವಂದನ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಧನ ನೀಡುವುದು, ಸೇವಾ ಹಿರಿತನ ಆಧಾರದಲ್ಲಿ ವೇತನ ಹೆಚ್ಚಳ ಮಾಡುವುದು, ಆಹಾರ ತಯಾರಿಸಲು ಅಗತ್ಯವಾಗಿ ಬೇಕಾಗಿರುವ ಗ್ಯಾಸ್ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
Advertisement