Advertisement

ಗುಣಮಟ್ಟದ ಹಾಲು ಪೂರೈಕೆ ಮಾಡಿ

12:08 PM Sep 26, 2017 | Team Udayavani |

ಬನ್ನೂರು: ರೈತನಿಗೆ ವ್ಯವಸಾಯದೊಂದಿಗೆ ಪಶುಪಾಲನೆ ಮುಖ್ಯವಾಗಿದ್ದು, ಉತ್ತಮÊ ರಾಸುಗಳನ್ನು ಸಾಕುವ ಮೂಲಕ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿದರೆ ಉತ್ತಮ ಆದಾಯವನ್ನೂ ಗಳಿಸಬಹುದೆಂದು ಮಾದಿಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಕುಮಾರ್‌ ತಿಳಿಸಿದರು.

Advertisement

ಪಟ್ಟಣದ ಸಮೀಪದಲ್ಲಿರುವ ಮಾದಿಗಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರೈತರು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೆಲವರು ವ್ಯವಸಾಯವನ್ನೇ ಬೇಡವೆಂದು ಅನ್ಯ ಉದ್ಯೋಗದತ್ತ ಮುಖ ಮಾಡಿದ್ದಾರೆ. ರೈತ ಅನ್ನದಾತನಾಗಿದ್ದು, ಯಾರೂ ಈ ವೃತ್ತಿಯನ್ನು ತೊರೆಯದಂತೆ ಮನವಿ ಮಾಡಿದರು.

ಮಾದಿಗಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ರಾಮಕೃಷ್ಣ, 2016-17ನೇ ಸಾಲಿನಲ್ಲಿ 68,50,867.25 ಪೈಸೆಯ ಹಾಲು ಖರೀದಿ ಮಾಡಿದ್ದು, 10,41,979.32 ಪೈಸೆ ವ್ಯಾಪಾರ ಲಾಭ ಬಂದಿದೆ. ಇದರಲ್ಲಿ ಖರ್ಚು ವೆಚ್ಚಗಳನ್ನು ಕಳೆದು 2,47,426.80 ಪೈಸೆ ನಿವ್ವಳ ಬಂದಿರುವುದಾಗಿ ತಿಳಿಸಿದರು. ಮುಖ್ಯ ಅತಿಥಿ ಎಂ.ರವೀಂದ್ರನಾಥ್‌, ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಉತ್ತಮ ಆದಾಯವ ಗಳಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾದಿಗಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದೇಗೌಡ, ರಮೇಶ್‌, ಬೊಕಳಪ್ಪ, ಎನ್‌.ಪುಟ್ಟಸ್ವಾಮಿ, ಜೆ.ಜೀವನ್‌, ಬಸವರಾಜು, ಪರಂಜ್ಯೋತಿ, ಚಂದ್ರ, ಪಾರ್ವತಮ್ಮ, ಜಯಮ್ಮ, ಎಂ.ಸಿ.ಸೋಮೇಗೌಡ, ಎಂ.ಎಸ್‌.ರಾಮಲಿಂಗು, ಶ್ರೀನಿವಾಸ್‌, ಮಾದಿಗಹಳ್ಳಿ ಗ್ರಾಮಸ್ಥರು, ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next