Advertisement

ಕೌಟುಂಬಿಕ ಹಿನ್ನೆಲೆ ಇಲ್ಲದ 60 ವರ್ಷ ಮೇಲ್ಪಟ್ಟವರ ಮನೆಗೆ ಅಗತ್ಯಗಳ ಪೂರೈಕೆ

08:20 PM Mar 29, 2020 | Sriram |

ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಗರ ಪ್ರದೇಶದಲ್ಲಿರುವ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಯಾವುದೇ ಕೌಟುಂಬಿಕ ಆಧಾರ ಇಲ್ಲದಿರುವ ವಯೋನಾಗರಿಕರಿಗೆ ಅಗತ್ಯ ವಸ್ತು ಮತ್ತು ಔಷಧಗಳನ್ನು ಮನೆ-ಮನೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

Advertisement

ಈಗಾಗಲೇ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ 144(3) ಸೆಕ್ಷನ್‌ನಂತೆ ನಾಗರಿಕ ಸಂಚಾರವನ್ನು ನಿರ್ಬಂಧಿಸಿದೆ. ಮೆಡಿಕಲ್‌ ಶಾಪ್‌ಗ್ಳನ್ನು ಹೊರತುಪಡಿಸಿ ದಿನಸಿ ಮತ್ತಿತರ ವಸ್ತುಗಳಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 11ಗಂಟೆಯವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ.

ಹೀಗಾಗಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಯಾವುದೇ ಕೌಟುಂಬಿಕ ಆಧಾರ ಇಲ್ಲದಿರುವ (ಯಾವುದೇ ರೀತಿಯ 60 ವರ್ಷಕ್ಕಿಂತ ಕೆಳಗಿನ ಸಂಬಂಧಿಕರು ಅವರೊಂದಿಗೆ ವಾಸ್ತವ್ಯವಿರದಿದ್ದಲ್ಲಿ) ಇರುವ ವಯೋನಾಗರಿಕರಿಗೆ ಅಗತ್ಯ ವಸ್ತು ಮತ್ತು ಔಷಧಗಳನ್ನು ಮಾರುಕಟ್ಟೆಗೆ ಬಂದು ಕೊಂಡುಕೊಳ್ಳುವುದು ಕಷ್ಟವಾಗಿದೆ. ಆದುದರಿಂದ ಉಡುಪಿ ನಗರಸಭೆ, ಕುಂದಾಪುರ, ಕಾಪು ಹಾಗೂ ಕಾರ್ಕಳ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಅಗತ್ಯ ವಸ್ತು ಮತ್ತು ಔಷಧವನ್ನು ಮನೆಬಾಗಿಲಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಅಂತಹ ವ್ಯಕ್ತಿಗಳು ಒಂದು ವಾರದ ಅಗತ್ಯ ದಿನಸಿ, ಹಣ್ಣು ಹಂಪಲು, ಔಷಧಗಳ ಪಟ್ಟಿ ಮಾಡಿ ಮನೆಯ ಸಂಪೂರ್ಣ ವಿಳಾಸವನ್ನು ಕೆಳಗೆ ನಮೂದಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ವಸ್ತುಗಳು ಮನೆಗೆ ತಲುಪಿದ ಬಳಿಕ ಅದಕ್ಕೆ ತಗಲುವ ವೆಚ್ಚವನ್ನು ಪಾವತಿಸುವಂತೆ ಸೂಚಿಸಿದೆ.

ಸಂಪರ್ಕ ಸಂಖ್ಯೆಗಳು
ಉಡುಪಿ ವ್ಯಾಪ್ತಿಯ ನಿವಾಸಿಗಳು: ಉಡುಪಿ ನಗರಸಭೆ ಪೌರಯುಕ್ತ ಆನಂದ ಸಿ. ಕಲ್ಲೋಳಿಕರ್‌ -9740019211, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮೋಹನರಾಜು -9342594242, ಪರಿಸರ ಎಂಜಿನಿಯರ್‌ ಸ್ನೇಹಾ -9164397765, ಕಂದಾಯ ಅಧಿಕಾರಿ ಧನಂಜಯ – 8762083841.

Advertisement

ಕುಂದಾಪುರ ವ್ಯಾಪ್ತಿಯ ನಿವಾಸಿಗಳು: ಕುಂದಾಪುರದ ಪರಿಸರ ಎಂಜಿನಿಯರ್‌ ರಾಘವೇಂದ್ರ -9448507244

ಕಾರ್ಕಳ ಪುರಸಭೆಯ ನಿವಾಸಿಗಳು: ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ -9900948873,

ಕಾಪು ಪುರಸಭೆ ವ್ಯಾಪ್ತಿಯ ನಿವಾಸಿಗಳು: ಪರಿಸರ ಎಂಜಿನಿಯರ್‌ ರವಿಪ್ರಕಾಶ್‌- 7624851225

ಸಾಲಿಗ್ರಾಮ ಪಟ್ಟಣ ಪಂಚಾಯತ್‌ ನಿವಾಸಿಗಳು: ಮುಖ್ಯಾಧಿಕಾರಿ ಅರುಣ್‌- 9449943882, ಆರೋಗ್ಯ ನಿರೀಕ್ಷಕಿ ಮಮತಾ- 9035627273 ಅವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next