ಬೆಂಗಳೂರು: ಪ್ರಮುಖ ಆನ್‌ಲೈನ್ ಮಾರಾಟ ತಾಣ ಫ್ಲಿಪ್ ಕಾರ್ಟ್ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಡಿಜಿಟಲ್ ಕಲಿಕಾ ಅಕಾಡೆಮಿಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.
ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ (ಎಸ್ ಸಿಒಎ) ಫ್ಲಿಪ್ ಕಾರ್ಟ್ ನ ಬಹುನಿರೀಕ್ಷಿತ ಯೋಜನೆ ಮತ್ತು ದೇಶದಲ್ಲಿ ನುರಿತ ಸಪ್ಲೈ ಚೈನ್ ಕಾರ್ಯಾಚರಣೆಯ ಪ್ರತಿಭೆಯನ್ನು ಸೃಷ್ಟಿಸಲು ಮತ್ತು ಸಂಬಂಧಿತ ಉದ್ಯಮದ ತರಬೇತಿ ಹಾಗೂ ಜ್ಞಾನವನ್ನು ಒದಗಿಸುವ ಬದ್ಧತೆಯನ್ನು ಹೊಂದಲು ಸಹಾಯ ಮಾಡುತ್ತದೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಫ್ಲಿಪ್ ಕಾರ್ಟ್ ಪೂರೈಕೆ ಜಾಲದಲ್ಲಿ 15 ದಿನಗಳ ಡಿಜಿಟಲ್ ತರಗತಿ ಹಾಗೂ 45 ದಿನಗಳ ಕಾಲ ಉದ್ಯೋಗದ ಅಪ್ರೆಂಟಿಸ್ ಶಿಪ್ ಅನ್ನು ಒಳಗೊಂಡಿರುತ್ತದೆ. ಇ-ಕಾಮರ್ಸ್ ಸಪ್ಲೈ ಚೇನ್ ನ ವಿವಿಧ ಅಂಶಗಳ ಬಗ್ಗೆ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸ ಗೊಳಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಸಪ್ಲೈ ಚೈನ್ ಪಾತ್ರಗಳು, ಸಾಫ್ಟ್ ಸ್ಕಿಲ್ಸ್, ಸುರಕ್ಷತೆ ಮತ್ತು ಅನುಸರಣೆಯ ಜ್ಞಾನ ಸೇರಿದಂತೆ ಇನ್ನಿತರ ಅಂಶಗಳು ಇವೆ.
ಈ ಕಾರ್ಯಕ್ರಮ ಆರಂಭದ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ನಲ್ಲಿ ಸಪ್ಲೈ ಚೇನ್ ನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಹೇಮಂತ್ ಬದ್ರಿ, ”ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿರುವ ಭಾರತವು ತನ್ನ ಜನಸಂಖ್ಯಾ ಲಾಭಾಂಶವನ್ನು ಪಡೆಯಲು ದೊಡ್ಡ ಪ್ರಮಾಣದ ಕೌಶಲ್ಯವನ್ನು ಮತ್ತು ಉತ್ಕೃಷ್ಠತೆಯ ಉಪಕ್ರಮಗಳ ಮೂಲಕ ತನ್ನ ಸಾಮರ್ಥ್ಯವನ್ನು ಅನ್ಲಾಕ್ ಮಾಡಬಹುದಾಗಿದೆ’ ಎಂದರು.
ಇದನ್ನೂ ಓದಿ:ಬಾಲಿವುಡ್ ನಟಿ ಅನನ್ಯ ಪಾಂಡೆ ನಿವಾಸದ ಮೇಲೆ ಎನ್ ಸಿಬಿ ದಾಳಿ, ಫೋನ್, ಲ್ಯಾಪ್ ಟಾಪ್ ವಶಕ್ಕೆ
ಈ ಕಾರ್ಯಕ್ರಮದ ಮೊದಲ ಹಂತ ಅಕ್ಟೋಬರ್ 22 ರಂದು ಆರಂಭವಾಗಲಿದ್ದು, ಇದರಲ್ಲಿ ಬಿಹಾರ, ದೆಹಲಿ, ಹರ್ಯಾಣ, ಜಾರ್ಖಂಡ್, ಪಂಜಾಬ್, ರಾಜಸ್ತಾನ ಮತ್ತು ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಅವರಿಗೆ ತರಬೇತಿ ನೀಡಿದ ನಂತರ ಆನ್-ದಿ-ಜಾಬ್ ತರಬೇತಿಯನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅವರಿಗೆ ದೇಶಾದ್ಯಂತ ಇರುವ ಪೂರ್ಣ ಪ್ರಮಾಣದ ಸಪ್ಲೈ ಚೈನ್ ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುವ ಅವಕಾಶವನ್ನು ನೀಡಲಾಗುತ್ತದೆ