Advertisement

Education: ಅಂತಿಮ ಪರೀಕ್ಷೆ ಕಳೆದ ಬೆನ್ನಲ್ಲೇ ಪೂರಕ ಪರೀಕ್ಷೆ

11:04 PM Sep 08, 2023 | Team Udayavani |

ಬೆಂಗಳೂರು: ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ (ಬಿಯು) ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳ ಕೆಲವೇ ದಿನಗಳಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲು ತೀರ್ಮಾ ನಿಸಿದೆ.

Advertisement

ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಬ್ಯಾಕ್‌ಲಾಗ್‌ಳನ್ನು ಬೇಗ ತೆರವುಗೊಳಿಸಲು ಅವಕಾಶ ನೀಡಿದಂತಾಗುತ್ತದೆ. ಈ ಕ್ರಮವು ಇತ್ತೀಚೆಗೆ ಎಸೆಸೆಲ್ಸಿ ಹಾಗೂ ಪಿಯು ಪರೀಕ್ಷೆಗಳಲ್ಲಿ ರಾಜ್ಯ ಸರಕಾರ ಪ್ರಾರಂಭಿಸಿದ ಸುಧಾರಣೆಗಳನ್ನು ಅನುಸರಿಸುತ್ತದೆ. ಮುಖ್ಯ ಪರೀಕ್ಷೆಯ ಬಳಿಕ ಇನ್ನೂ ಎರಡು ಪರೀಕ್ಷೆಗಳನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸುಧಾರಿಸಲು ಅನುವು ಮಾಡಿಕೊಡಲಾಗುತ್ತದೆ. ಹಲವಾರು ವಿದ್ಯಾರ್ಥಿಗಳು ಈ ಹೊಸ ಕ್ರಮದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ತಾವು ಅನುತ್ತೀರ್ಣರಾದ ಪತ್ರಿಕೆಗಳಿಗೆ ಮರು ಪರೀಕ್ಷೆ ಪಡೆಯಲು ಒಂದು ವರ್ಷಗಳೇ ಹಿಡಿಯುತ್ತವೆ. ಬೆಂಗಳೂರು ವಿವಿ ಹಾಗೂ ವಿಟಿಯು ವಿವಿ ಸೆ.20ರೊಳಗೆ ಫ‌ಲಿತಾಂಶಗಳನ್ನು ಪ್ರಕಟಿಸಲು ಮತ್ತು ಅಕ್ಟೋಬರ್‌ ವೇಳೆಗೆ ಮರು ಪರೀಕ್ಷೆಗಳನ್ನು ನಡೆಸಲು ಚಿಂತಿಸಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next