Advertisement

ನರ್ಸಿಂಗ್‌ ಸೇವೆಗೆ ಪೂರಕವಾದ ಶಿಕ್ಷಣ: ಶಶಿಧರ್‌

09:57 PM May 25, 2019 | Lakshmi GovindaRaj |

ಚನ್ನರಾಯಪಟ್ಟಣ: ಸೇವೆಗೆ ಪೂರಕವಾಗಿರುವ ನರ್ಸಿಂಗ್‌ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಮುಂದಾಗಿರುವ ಪೋಷಕರಿಗೆ ಅನಂತ ಧನ್ಯವಾದಗಳು ಎಂದು ಪುರಸಭೆ ಸದಸ್ಯ ಸಿ.ಎನ್‌.ಶಶಿಧರ್‌ ತಿಳಿಸಿದರು.

Advertisement

ಪಟ್ಟಣದಲ್ಲಿನ ವೈದ್ಯ ಸ್ಕೂಲ್‌ ಆಫ್ ನರ್ಸಿಂಗ್‌ ಕಾಲೇಜಿನ 15ನೇ ವರ್ಷದ ವಾಷಿಕೋತ್ಸವ ಸಮಾರಂಭ, ದೀಪ ಪ್ರಜ್ವಲನ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಾದರಿ ಪೋಷಕರು: ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಎಂಜಿನಿಯರ್‌ ಹಾಗೂ ವೈದ್ಯಕೀಯ ಶಿಕ್ಷಣ ಕೊಡಿಸಲು ಮುಂದಾಗುವ ಯುಗದಲ್ಲಿ ನರ್ಸಿಂಗ್‌ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸುವ ಮೂಲಕ ಹಲವು ಮಂದಿ ಪೋಷಕರು ಸಮಾಜಕ್ಕೆ ಆದರ್ಶವಾಗುತ್ತಿದ್ದಾರೆ ಎಂದರು.

ಶ್ರಮ: ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಿಂತ ಮೊದಲು ರೋಗಿಗಳ ಶುಶ್ರೂಷೆ ಮಾಡುವುದು ನರ್ಸ್‌ಗಳು, ಯಾವುದೇ ರೋಗಿ ಆಸ್ಪತ್ರೆಗೆ ಆಗಮಿಸಿದಾಗ ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ಮಾಡುವುದಲ್ಲದೇ ರೋಗಿಗಳ ಪಾಲಿಗೆ ತಂದೆ, ತಾಯಿಯಾಗಿ ಅವರನ್ನು ಸಂಪೂರ್ಣ ಗುಣಮುಖ ಮಾಡುವಲ್ಲಿ ನರ್ಸ್‌ಗಳು ಶ್ರಮಿಸುತ್ತಾರೆ. ಹಾಗಾಗಿ ಇದೊಂದು ಪವಿತ್ರ ಶಿಕ್ಷಣ ಹಾಗಾಗಿ ವಿದ್ಯಾರ್ಥಿಗಳ ಬದುಕು ನಂದಾದೀಪವಾಗಿರಲಿ ಎಂದು ಶುಭಹಾರೈಸಿದರು.

ಪರಿಸರ ಕಾಳಜಿ ಅಗತ್ಯ: ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಪರಿಸರ ಕಾಳಜಿ ಹೊಂದಬೇಕು. ಗಿಡ, ಮರ ಬೆಳೆಸುವುದಲ್ಲದೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಭೂಮಿಯನ್ನು ಹಾಳು ಮಾಡುವವರ ಸಂಖ್ಯೆ ಹೆಚ್ಚುತ್ತಿದೆ ಮಳೆ ಕಡಿಮೆಯಾಗಿ ಎಲ್ಲೆಡೆ ನೀರಿನ ಸಮಸ್ಯೆ ತಾಂಡವಾಸುತ್ತಿದೆ ಮಿತನೀರು ಬಳಕೆಗೆ ಮುಂದಾಗಬೇಕು. ಪುರಸಭೆ ವ್ಯಾಪ್ತಿಯ ವಾರ್ಡ್‌ನಲ್ಲಿ ನೀರು ಬಳಕೆ ಬಗ್ಗೆ ಜಾಗೃತಿ ಜಾಥಾ ನಡೆಸುವಂತೆ ಸಲಹೆ ನೀಡಿದರು.

Advertisement

ಬೆಳ್ಳೂರು ಕ್ರಾಸಿನಲ್ಲಿರುವ ಆದಿಚುಂಚನಗಿರಿ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಜೆ.ವಿಜಯಕುಮಾರ್‌ ಮಾತನಾಡಿ, ವೃತ್ತಿನಿರತ ಶುಶ್ರೂಷಕರು ಜಾಗರೂಕತೆಯಿಂದ ಸೇವೆ ಸಲ್ಲಿಸಬೇಕು. ವಿಜ್ಞಾನದ ಹೃದಯವಾಗಿರುವ ನರ್ಸಿಂಗ್‌ ಶಿಕ್ಷಣ ಪಡೆಯುವ ವೇಳೆ ಪುಸ್ತಕಕ್ಕೆ ಸೀಮಿತವಾಗಿದ್ದರೆ ಸಾಲದು ರೋಗಿಗಳ ಸೇವೆ ಮಾಡುವ ಮೂಲಕ ಉತ್ತನ ಶುಶ್ರೂಷಕರಾಗಿ ಹೊರಬನ್ನಿ ಎಂದು ಕಾಲೇಜಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಹಾರೈಸಿದರು.

ಶುಶ್ರೂಷಕರು ಮೊದಲು ಸ್ಥಳೀಯ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು, ಸಂವಹನ ಮುಖ್ಯವಾಗಿರುತ್ತದೆ, ರೋಗಿಯು ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ಅದರ ಅರಿವು ಮುಖ್ಯವಾಗಿರುತ್ತದೆ, ಹೊರ ರಾಜ್ಯ ಹಾಗೂ ದೇಶದಲ್ಲಿ ಸೇವೆ ಸಲ್ಲಿಸುವ ನರ್ಸ್‌ಗಳಿಗೆ ಆಂಗ್ಲಭಾಷೆ ತಿಳುವಳಿಕೆ ಅಗತ್ಯವಿದೆ ಎಂದು ಹೇಳಿದರು.

ಭಾರತದಲ್ಲಿ ಇಂದಿಗೂ ಸಾಂಕ್ರಾಮಿಕ ರೋಗ ಮುಕ್ತವಾಗಿಲ್ಲ ಆದರೆ ಹಲವು ದೇಶಗಳಲ್ಲಿ ಕ್ಷಯಾ, ಮಲೇರಿಯಾದಂತಹ ರೋಗಗಳು ಕಾಣುವುದಿಲ್ಲ ಅಲ್ಲಿನ ಜೀವನ ಶೈಲಿಯಿಂದ ಸಾಂಕ್ರಾಮಿಕ ರೋಗ ಮುಕ್ತ ದೇಶವಾಗಿದೆ ಭಾರತ ಇದರ ಕಡೆಗೆ ಹೆಜ್ಜೆ ಇಡಬೇಕಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ವೈದ್ಯ ಸ್ಕೂಲ್‌ ಆಫ್ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಅರಣಕುಮಾರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next