Advertisement

ಗಡಿಜಿಲ್ಲೆಯಲ್ಲಿ ಶಾಲೆ ತೆರೆಯಲು ಪೂರಕ ಪರಿಸ್ಥಿತಿ

04:01 PM Aug 22, 2021 | Team Udayavani |

ಪ್ರತಿದಿನ 20 ಸಾವಿರ ಆಸುಪಾಸಿನಲ್ಲಿ ಕೋವಿಡ್‌ ಪ್ರಕರಣದಾಖಲಾಗುತ್ತಿರುವ ಕೇರಳ ರಾಜ್ಯ ಗಡಿಗಳಿಗೆ ಹೊಂದಿಕೊಂಡಿರುವ ಚಾಮರಾಜ ನಗರ ಜಿಲ್ಲೆ ಸುಸ್ಥಿತಿ ಕಾಯ್ದುಕೊಂಡಿದೆ. ಜಿಲ್ಲೆಯಲ್ಲಿ ಕೋವಿಡ್‌ ಸಂಖ್ಯೆ ಒಂದಂಕಿ ತಲುಪಿದ್ದು, ಕೋವಿಡ್‌ ಪಾಸಿಟಿವಿಟಿದರ ವಾರದಲೆಕ್ಕದಲ್ಲಿ ಶೇ. 1ರಷ್ಟಕ್ಕೆ ಇಳಿಕೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲೇ 1 ಪ್ರಕರಣಮಾತ್ರ ದೃಢಪಟ್ಟಿದ್ದರೆ, ಶನಿವಾರ 5 ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯಲ್ಲಿ ಒಟ್ಟು 5.11ಲಕ್ಷ ಮಂದಿಲಸಿಕೆ ಪಡೆದಿದ್ದು, ಲಸಿಕೆಯಲ್ಲೂ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. ಏತನ್ಮಧ್ಯೆ, ಇಂದಿನಿಂದ ಶಾಲೆ ಕಾಲೇಜುಗಳು ಅರಂಭವಾಗುತ್ತಿದ್ದು, ಕೋವಿಡ್‌ ವಿಷಯದಲ್ಲಿ ಜಿಲ್ಲೆ ಸಂಪೂರ್ಣ ಸುರಕ್ಷತೆ ಕಾಯ್ದುಕೊಂಡಿರುವುದರಿಂದ ಆಶಾದಾಯಕ ವಾತಾವರಣವಾಗಿದ. ಪ್ರತಿ ಶಾಲೆಯಲ್ಲೂ ಸಾಕಷ್ಟು ಮುನ್ನೆಚ್ಚರ ವಹಿಸಿರುವುದರಿಂದ ವಿದ್ಯಾರ್ಥಿಗಳು ಭಯಬಿಟ್ಟು ತರಗತಿಗೆ ಹಾಜರಾಗ ಬಹುದು. ಪೋಷಕರು ಕೂಡ ನಿರ್ಭಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬಹುದು.

Advertisement

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರದಿಂದ 9 ಮತ್ತು 10 ನೇ ತರಗತಿ ಹಾಗೂ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ. 9 ಮತ್ತು 10ನೇ ತರಗತಿಯಲ್ಲಿ 25,062ವಿದ್ಯಾರ್ಥಿವಿದ್ಯಾರ್ಥಿನಿಯರಿದ್ದಾರೆ. 1628 ಶಿಕ್ಷಕರಿದ್ದು, ಶೇ. 96 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ.

ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಯವರೆಗೆ ತರಗತಿ ನಡೆಸಲು ಸರ್ಕಾರ ಸೂಚನೆ ನೀಡಿದೆ. ಒಟ್ಟು 3 ಗಂಟೆ ತರಗತಿ ನಡೆಯಲಿದ್ದು, 40 ನಿಮಿಷಅವಧಿಯ5 ಪೀರಿಯಡ್‌ ಗಳನ್ನು ನಡೆಸಲು ಯೋಜಿಸಲಾಗಿದೆ. ಮಧ್ಯಾಹ್ನದ ನಂತರ ತರಗತಿ ಬೇಡ ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಭೌತಿಕ ತರಗತಿ, ಆನ್‌ಲೈನ್‌ ತರಗತಿ ಮತ್ತು ವಿದ್ಯಾಗಮ ವ್ಯವಸ್ಥೆಯಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಹಾಜರಾತಿ ಕಡ್ಡಾಯ ಇಲ್ಲ. ಹೀಗಾಗಿ ಭೌತಿಕ ತರಗತಿಗಳಿಗೆ ಹಾಜರಾಗಲು ಇಚ್ಛಿಸುವ ವಿದ್ಯಾರ್ಥಿಗಳು ಶಾಲೆಗೆ ಬರಬಹುದು. ತಮ್ಮ ಮನೆಯ ಬಳಿ ನಡೆಯುವ ವಿದ್ಯಾಗಮ ತರಗತಿಗೆ ಹಾಜರಾಗಬಹುದು. ಭೌತಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ಪಡೆದು ಬರಬೇಕು.
ಜಿಲ್ಲೆಯ 9 ಮತ್ತು 10ನೇ ತರಗತಿಯಲ್ಲಿ 25,062 ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದಾರೆ. ಇವರಲ್ಲಿ 12,704 ವಿದ್ಯಾರ್ಥಿಗಳು, 12,358 ವಿದ್ಯಾರ್ಥಿನಿಯರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 10,571ವಿದ್ಯಾರ್ಥಿಗಳು, ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 5579 ವಿದ್ಯಾರ್ಥಿಗಳು, ಖಾಸಗಿ ಅನುದಾನಿತ ಶಾಲೆಗಳಲ್ಲಿ 6582 ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆ ಶಾಲೆಗಳಲ್ಲಿ 1087 ವಿದ್ಯಾರ್ಥಿಗಳು,ಕೇಂದ್ರೀಯ ಟಿಬೆಟನ್‌ ಶಾಲೆಯಲ್ಲಿ 63 ವಿದ್ಯಾರ್ಥಿಗಳು, ಗಿರಿಜನ ಕಲ್ಯಾಣ ಇಲಾಖೆ ಶಾಲೆಗಳಲ್ಲಿ943, ಕೇಂದ್ರೀಯವಿದ್ಯಾಲಯದಲ್ಲಿ 75, ಜವಾಹರ ನವೋದಯ ಶಾಲೆಯ 162 ವಿದ್ಯಾರ್ಥಿಗಳಿದ್ದಾರೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ಕೊಟ್ಟ ಯಶ್ | ಕೆಜಿಎಫ್-2 ಬಿಡುಗಡೆ ದಿನಾಂಕ ಘೋಷಣೆ

Advertisement

ಒಟ್ಟು1628 ಶಿಕ್ಷಕರಿದ್ದಾರೆ. 787 ಸರ್ಕಾರಿ ಶಿಕ್ಷಕರು, 374 ಅನುದಾನಿತ, 467 ಅನುದಾನ ರಹಿತ ಶಾಲಾ ಶಿಕ್ಷಕರಿದ್ದಾರೆ. 230 ಶಾಲೆಗಳಿವೆ. ಇವುಗಳಲ್ಲಿ 161 ಗ್ರಾಮೀಣ ಪ್ರದೇಶಗಳಲ್ಲಿ,69 ಪಟ್ಟಣ ಪ್ರದೇಶಗಳಲ್ಲಿವೆ. 1628 ಶಿಕ್ಷಕರ ಪೈಕಿ ಶೇ. 96ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ.ಇನ್ನು 66 ಮಂದಿ ಲಸಿಕೆ ಪಡೆಯಬೇಕಾಗಿದೆ. ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಬುಕ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದು,2,10,121 ಪುಸ್ತಕಗಳನ್ನು ಹಿಂದಿನ ಸಾಲಿನ ವಿದ್ಯಾರ್ಥಿಗಳಿಂದ ಸಂಗ್ರಹಿಸಿ, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಪ್ರಸ್ತುತ ಶೇ. 25ರಷ್ಟು ಹೊಸ ಪಠ್ಯ ಪುಸ್ತಕಗಳು ಸರಬರಾಜಾಗಿವೆ.

ಶಾಲೇ ಆರಂಭದ ನಂತರ ವಿದ್ಯಾರ್ಥಿಗಳಿಗೆ ಕೋವಿಡ್‌ ಮೂರನೇ ಅಲೆ ತಡೆಗಟ್ಟಲು ಕೈಗೊಳ್ಳ ಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಿಂದ ತಲಾ ಒಬ್ಬರು ಆಶಾ ಕಾರ್ಯಕರ್ತೆ, ಒಬ್ಬರು ಅಂಗನವಾಡಿ ಕಾರ್ಯಕರ್ತೆ, ಒಬ್ಬರು ಮಹಿಳಾ ಶಿಕ್ಷಕರನ್ನು ಒಳಗೊಂಡ ಮೆಂಟರ್‌ಗಳನ್ನು ಆಯ್ಕೆ ಮಾಡಿ, ಒಟ್ಟು 390 ಮೆಂಟರ್‌ಗಳಿಗೆ ತರಬೇತಿ ನೀಡಲಾಗಿದೆ. ಈ ಮೆಂಟರ್‌ಗಳು ಆಯಾ ಗ್ರಾಪಂ. ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೋವಿಡ್‌ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆಗಳಿಗೆ ತೆರಳಿ, ಪೋಷಕರಿಗೆ, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಕೈಗೊಂಡಿರುವ ಸುರಕ್ಷತಾಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಶಾಲೆಗಳಲ್ಲಿ ಕೋವಿಡ್‌ ಸುರಕ್ಷತಾ ಸಮಿತಿಗಳನ್ನು ರಚಿಸಿದ್ದು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕರು ಮಕ್ಕಳಿಗೆ ಪ್ರತಿ ಹಂತದಲ್ಲಿ ಎಸ್‌ಓಪಿ ಅನು ಪಾಲನೆ ಬಗ್ಗೆ ನಿಗಾವಹಿಸಲು ಸೂಚಿಸಲಾಗಿದೆ. ಪ್ರತಿ ಶಾಲೆಗಳಲ್ಲಿ ಐಸೋಲೇಷನ್‌ ಕೊಠಡಿ ಸ್ಥಾಪಿಸಲಾಗಿದೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳನ್ನು ಇಡಲಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಶಾಲೆಗಳ ನೈರ್ಮಲ್ಯ, ಸ್ಯಾನಿಟೈ ಸೇಷನ್‌ಗೆ ಸಹಕಾರ ಪಡೆಯಲಾಗುತ್ತಿದೆ. ಶಾಲೆಗಳ ಆವರಣ, ಕೊಠಡಿಗಳು, ಸಂಪುಗಳನ್ನು ಸ್ವತ್ಛಗೊಳಿಸಲಾಗುತ್ತಿದೆ. ಶಾಲಾ ಕೊಠಡಿಗಳಿಗೆ ಕೀಟನಾಶಕ ದ್ರಾವಕಗಳನ್ನು ಸಿಂಪಡಿಸಲಾಗುತ್ತಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿ: ಜಿಲ್ಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ದಾಖಲಾಗಿ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಆಗಸ್ಟ್‌ ಅಂತ್ಯಕ್ಕೆ
ದಾಖಲಾತಿ ಪ್ರಕ್ರಿಯೆ ಮುಗಿಯಲಿದೆ. ಹಾಗಾಗಿ ನಿಖರವಾಗಿ ವಿದ್ಯಾರ್ಥಿಗಳ ಸಂಖ್ಯೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಇನ್ನೂ ದೊರೆತಿಲ್ಲ. ಪ್ರಥಮ ಪಿಯು ಸಿಯಲ್ಲಿ7509 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ತೇರ್ಗಡೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ 11, 187 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದು, ಇವರಲ್ಲಿ ಪಿಯುಸಿಗೆ ದಾಖಲಾಗುವವರು ಎಷ್ಟು ಎಂದು ತಿಳಿದುಬಂದಿಲ್ಲ.

ಜಿಲ್ಲೆಯಲ್ಲಿ 61 ಪ.ಪೂಕಾಲೇಜುಗಳಿವೆ.ಇವುಗಳಲ್ಲಿ 24 ಸರ್ಕಾರಿ,07 ಅನುದಾನಿತ,30 ಅನುದಾನ ರಹಿತ ಶಾಲೆಗಳಿವೆ. ಜಿಲ್ಲೆಯಲ್ಲಿ207 ಮಂದಿ ಸರ್ಕಾರಿ ಪ.ಪೂ ಕಾಲೇಜು ಉಪನ್ಯಾಸಕರು, ಅನುದಾನಿತ ಕಾಲೇಜುಗಳ 24 ಉಪನ್ಯಾಸಕರಿದ್ದಾರೆ. ಎಲ್ಲರೂ ಲಸಿಕೆ ಪಡೆದಿದ್ದಾರೆ ಎಂದು ಪಿ.ಯು. ಡಿಡಿ ನಾಗಮಲ್ಲೇಶ್‌ ತಿಳಿಸಿದರು. ಪಿಯುಸಿ ವಿದ್ಯಾರ್ಥಿಗಳಲ್ಲಿ ಶೇ. 50ರಷ್ಟು ವಿದ್ಯಾರ್ಥಿಗಳು ಸೋಮವಾರ, ಮಂಗಳವಾರ, ಬುಧವಾರ ತರಗತಿಗೆ ಹಾಜರಾಗಬೇಕು. ಇನ್ನುಳಿದ ಶೇ.50ರಷ್ಟು ವಿದ್ಯಾರ್ಥಿಗಳು ಗುರು, ಶುಕ್ರ, ಶನಿವಾರ ತರಗತಿಗಳಿಗೆ ಹಾಜರಾಗಬೇಕು. ಭೌತಿಕ ತರಗತಿ ಇಲ್ಲದವರಿಗೆ ಆನ್‌ಲೈನ್‌ ತರಗತಿಗಳಿರುತ್ತವೆ. ವಿದ್ಯಾರ್ಥಿಗಳು ಭೌತಿಕ ತರಗತಿಗೆ ಬರಲು ಇಚ್ಛೆಯಿಲ್ಲದಿದ್ದರೆ, ಆನ್‌ಲೈನ್‌ ತರಗತಿಗೆ ಹಾಜರಾಗಬೇಕು. ಆನ್‌ಲೈನ್‌ ಅಥವಾ ಆಫ್ಲೈನ್‌ ಯಾವುದಾದರೊಂದರಲ್ಲಿ ಹಾಜರಾತಿ ಕಡ್ಡಾಯ ಎಂದು ಪಿಯು ಡಿ.ಡಿ. ತಿಳಿಸಿದರು.

ಜಿಲ್ಲೆಯಲ್ಲಿ ಒಂದಂಕಿ ಕೋವಿಡ್‌ ಪ್ರಕರಣ
ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ವಾರದ ಲೆಕ್ಕದಲ್ಲಿ ಶೇ.1ರಷ್ಟಿದೆ.ಕಳೆದ ಒಂದು ವಾರದಿಂದ ಪ್ರತಿ ದಿನದ ಪ್ರಕರಣ ಸಂಖ್ಯೆ20 ರೊಳಗೆ ಇದೆ. ಮೂರು ದಿನಗಳಿಂದ ಒಂದಂಕಿ ಇದೆ.90 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ27 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ14 ಮಂದಿ,03 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ.ಜಿಲ್ಲೆಯಲ್ಲಿ ಒಟ್ಟು5,11,308 ಮಂದಿ ಲಸಿಕೆ ಪಡೆದಿದ್ದಾರೆ. ಇವರಲ್ಲಿ3,98,454 ಮಂದಿ ಮೊದಲ ಡೋಸ್‌ ಹಾಗೂ 1,12,854 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ಇದನ್ನೂ ಓದಿ:ತಮಿಳುನಾಡು : ಶ್ರೀಲಂಕಾ ನೌಕ ಪಡೆಯಿಂದ ಭಾರತೀಯ 60 ಮೀನುಗಾರಿಕಾ ಬೋಟ್ ಗಳ ಮೇಲೆ ಕಲ್ಲು ತೂರಾಟ

ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಕಡಿಮೆ ಇರುವುದರಿಂದ ಕೊಠಡಿಗಳ ಸಮಸ್ಯೆ ಇಲ್ಲ. ಪಟ್ಟಣ ಪ್ರದೇಶಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಭೌತಿಕ ಅಂತರ ಕಾಪಾಡಲು ಕೊಠಡಿಗಳ ಕೊರತೆಯಿದೆ. ಆನ್‌ಲೈನ್‌ ತರಗತಿಗೂ ಅವಕಾಶ
ಇರುವುದರಿಂದ ಎಲ್ಲ ವಿದ್ಯಾರ್ಥಿಗಳೂ ಭೌತಿಕ ತರಗತಿಗಳಿಗೆ ಹಾಜರಾಗುವ ಸಾಧ್ಯತೆ ಇಲ್ಲದಿರುವುದರಿಂದ ತರಗತಿ ಸಮಸ್ಯೆ ತಲೆದೋರದು.
– ಮಂಜುನಾಥ್‌,
ಪ್ರಭಾರ ಡಿಡಿಪಿಐ ಶಿಕ್ಷಣ ಇಲಾಖೆ.

20 ದಿನದಿಂದ ಪಾಸಿಟಿವಿಟಿ ಶೇ.0.27ರಷ್ಟು
ಗುಂಡ್ಲುಪೇಟೆ: ತಾಲೂಕಿನಲ್ಲಿ ಕಳೆದ ಮೂರು ದಿನ ಗಳಿಂದ ಯಾರಿಗೂ ಸೋಂಕು ತಗುಲದ ಹಿನ್ನೆಲೆ ಶೂನ್ಯಕ್ಕೆ ಇಳಿಕೆಯಾಗಿದೆ.ಇದರಿಂದ ತಾಲೂಕಿನಲ್ಲಿ ಪಾಸಿಟಿವಿಟಿ ಕಳೆದ 20 ದಿನದಿಂದ ಶೇ.0.27ರಷ್ಟು ದಾಖಲಾಗಿದೆ. ಸಕ್ರೀಯ ಪ್ರಕರಣಗಳು ಕಳೆದ ಹತ್ತು ದಿನಗಳಿಂದ 6 ಮಾತ್ರ ಇವೆ.

ತಾಲೂಕಿನಲ್ಲಿ ಕೋವಿಡ್‌ ಮೊದಲ ಲಸಿಕೆಯನ್ನು 85,638 ಮಂದಿ ಪಡೆದಿದ್ದು, ಎರಡು ಲಸಿಕೆಯನ್ನು 29,198 ಜನರು ತೆಗೆದುಕೊಂಡಿರುವ ಹಿನ್ನೆಲೆ ತಾಲೂ ಕಿನಲ್ಲಿ ಶೇ.49ರಷ್ಟು ಲಸಿಕೆ ಗುರಿ ಸಾಧನೆ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು 50 ಪ್ರೌಢಶಾಲೆಗಳಿಂದ 5468 ವಿದ್ಯಾರ್ಥಿ ಗಳು ದಾಖಲಾಗಿದ್ದು, ತಾಲೂಕಿನಲ್ಲಿ 438 ಮಂದಿ ಶಿಕ್ಷಕರಿದ್ದು, 400 ಮಂದಿಗೆ ಕೋವಿಡ್‌ ಲಸಿಕೆ ಪಡೆದಿದ್ದಾರೆ. 30 ಜನರು ಮಾತ್ರ ವಿವಿಧ ವೈಯಕ್ತಿಕ ಕಾರಣದಿಂದ ಲಸಿಕೆ ತೆಗೆದುಕೊಂಡಿಲ್ಲ ಎಂದು ಶಾಲೆಗೆ ಹಾಜರಾಗಲಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆ ವತಿಯಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ.ಶಿವಮೂರ್ತಿ ಮಾಹಿತಿ ನೀಡಿದರು. ತಾಲೂಕಿನ 34 ಪಂಚಾಯಿತಿಗಳಿಂದ ಒಬ್ಬ
ಶಿಕ್ಷಕರು, ಒಬ್ಬ ಆಶಾ ಕಾರ್ಯಕರ್ತೆಯ ಹಾಗೂ ಒಬ್ಬರು ಅಂಗನವಾಡಿ ಕಾರ್ಯ ಕರ್ತೆ ಒಳಗೊಂಡಂತೆ ಮೆಂಟರ್‌ಗಳನ್ನು ಆಯ್ಕೆ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಾಯ ದೊಂದಿಗೆ ತರಬೇತಿ ನೀಡಲಾಗಿದೆ.

ಈ ತಂಡವು ಪ್ರತಿ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಜಾಗೃತಿ ಮೂಡಿಸಲಿದೆ. ಸುರಕ್ಷತೆ ಕುರಿತು ತಾಲುಕು ಮಟ್ಟದ ಸಮಿತಿ ರಚನೆ, ಪ್ರತಿ ಶಾಲೆಗೂ ಹ್ಯಾಂಡ್‌ ಸ್ಯಾನಿಟೈಸರ್‌ ವಿತರಣೆ, ಎಲ್ಲಾ ಶಾಲೆ ಗಳಲ್ಲೂ ಐಸೋಲೇಷನ್‌ ಕೊಠಡಿ. ಮಕ್ಕಳಿಂದ ಪೋಷಕರ ಒಪ್ಪಿಗೆ ಪತ್ರ ಪಡೆದುಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಪ್ರತಿ ಕೊಠಡಿಯಲ್ಲೂ 20 ಮಕ್ಕಳು ಮೀರದಂತೆ ಕ್ರಮ ವಹಿಸಿ ತರಗತಿಗಳನ್ನು ಅರ್ಧ ದಿನ ಬೆಳಗಿನ ಅವಧಿ ಯಲ್ಲಿ ನಡೆಸಲು ಕ್ರಮವಹಿಸಲಾಗಿದೆ ಎಂದರು.

ಶಾಲೆಗೆ ಗೈರಾಗುವ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ಅವಕಾಶ
ಯಳಂದೂರು: ತಾಲೂಕಿನಲ್ಲಿ ಸೋಮವಾರದಿಂದ ಶಾಲಾ, ಕಾಲೇಜುಗಳು ಆರಂಭಗೊಳ್ಳುತ್ತಿದ್ದು ಇದಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ತಾಲೂಕಿನಲ್ಲಿ ನಡೆದಿವೆ. ತಾಲೂಕಿನಲ್ಲಿ ಒಟ್ಟು 19 ಪ್ರೌಢಶಾಲೆಗಳಿದ್ದು 3 ಪಿಯು ಕಾಲೇಜುಗಳಿವೆ. ಇದಕ್ಕೆ 9 ಹಾಗೂ 10 ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭ ಗೊಳ್ಳಲಿವೆ. ಒಟ್ಟು 2055 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 315 ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರಿದ್ದು, ಈ ಪೈಕಿ 312 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಇದರಲ್ಲಿ 287 ಶಿಕ್ಷಕರು 2ನೇ ಡೋಸ್‌
ಪಡೆದಿದ್ದಾರೆ. ಇಂದಿನಿಂದ ಬೆಳಗ್ಗೆ10ರಿಂದ ಮಧ್ಯಾಹ್ನ1.30 ರ ತನಕ ಶಾಲೆಗಳು ನಡೆಯಲಿವೆ. ಈಗಾಗಲೇ ಕೊಠಟಿಗಳನ್ನು ಸ್ಯಾನಿಟೈಸ್‌ ಮಾಡಲಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳು ಬಿಸಿನೀರು ಹಾಗೂ ಊಟವನ್ನು ಮನೆಯಿಂದಲೇ ತರಬೇಕು. ಜೊತೆಗೆ ಕಡ್ಡಾಯವಾಗಿ ಪೋಷಕರ ಒಪ್ಪಿಗೆ ಪತ್ರ ತರಬೇಕು. ಶಾಲೆಗೆ ಗೈರಾಗುವ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣನೀಡಲು ಕ್ರಮ ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿರುಮಲಾಚಾರಿ ಮಾಹಿತಿ ನೀಡಿದರು. ತಾಲೂಕಿನಲ್ಲಿ ಕೋವಿಡ್‌ 2ನೇ ಅಲೆಯಲ್ಲಿ 1,738 ಮಂದಿಸೋಂಕಿತ ರಾಗಿದ್ದು, ಇದೀಗ ಪ್ರಸ್ತುತ 5 ಸಕ್ರಿಯ ಪ್ರಕರಣಗಳು ಮಾತ್ರ ಇದ್ದು, ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಸೋಂಕಿತರು ಇರುವ ತಾಲೂಕು ಇದಾಗಿದೆ. ತಾಲೂಕಿನಲ್ಲಿ 41,347 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್‌ ಮಾಹಿತಿ ನೀಡಿದರು.

ಸತತ ಎರಡೂದಿನ ಶೂನ್ಯ ಕೋವಿಡ್‌ ಸೋಂಕು
ಕೊಳ್ಳೇಗಾಲ: ತಾಲೂಕಿನಲ್ಲಿ ತಾರಕಕ್ಕೇರಿದ ಕೋವಿಡ್‌ ಪ್ರಕರಣಗಳ ಸಂಖ್ಯೆ ಇದೀಗ ಶೂನ್ಯಕ್ಕೆ ಇಳಿದಿದೆ. ವಾರದಿಂದ 8-10 ಪ್ರಕರಣ ದಾಖಲಾಗುತ್ತಿದ್ದವು. ಶುಕ್ರವಾರ ಹಾಗೂ ಶನಿವಾರ ಸತತ ಎರಡು ದಿನವೂ ಯಾವುದೇ ಪ್ರಕರಣ ದಾಖಲಾಗದೆ ಶೂನ್ಯಕ್ಕೆ ಇಳಿಕೆಯಾಗಿದೆ. ಈ ನಡುವೆ, ನಾಳೆ ಯಿಂದ (ಸೋಮ ವಾರ) ಶಾಲೆ, ಕಾಲೇಜುಗಳು ಆರಂಭವಾಗುತ್ತಿರುವುದರಿಂದ ಪೋಷಕರು ಹಾಗೂ ಶಿಕ್ಷಕರು ತುಸು ನಿಟ್ಟುಸಿರು ಬಿಡುವಂತಾಗಿದೆ.

ತಾಲೂಕಿನಲ್ಲಿ ಎಲ್ಲಾ ಶಾಲೆಗಳಿಂದ ಸುಮಾರು 21 ಸಾವಿರ ವಿದ್ಯಾರ್ಥಿಗಳಿದ್ದು, ಸೋಮವಾರದಿಂದ ಅರ್ಧ ದಿನ ಮಾತ ತರಗತಿ ನಡೆಸ ಲಾಗುವುದು. ಮೊದಲ ದಿನ ಇಷ್ಟು ಮಕ್ಕಳು ಹಾಜರಾಗುವುದು ಅನುಮಾನವಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ353 ಶಿಕ್ಷಕರ ಪೈಕಿ ಎಲ್ಲರೂ 2 ಕೋವಿಡ್‌ ಲಸಿಕೆ ಪಡೆದಿದ್ದಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ 120 ಶಿಕ್ಷಕ ರು ಇದ್ದು, ಎಲ್ಲರಿಗೂಲಸಿಕೆ ದೊರೆತಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ 1,054 ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್‌ ತಿಳಿಸಿದ್ದಾರೆ. ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿದ್ದು, ಎಲ್ಲಾ ಶಾಲಾ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲಾ ವಿಭಾಗಗಳಿಗೆ ಸ್ಯಾನಿಟೈಸ್‌ ಮಾಡಲಾಗಿದೆ. ವಿದ್ಯಾರ್ಥಿಗಳು ನಿರ್ಭಯವಾಗಿ ಬರಬೇಕು. ಪೋಷಕರು ಯಾವುದೇ ಆತಂಕ, ಭಯ ಭೀತಿಗೆ ಒಳಗಾಗಬಾರದು ಬಿಇಬಿ ಅಭಯ ನೀಡಿದ್ದಾರೆ.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next