Advertisement

2029ಕ್ಕೆ ಬರಲಿದೆೆ ಸೂಪರ್‌ಸಾನಿಕ್‌ ವಿಮಾನ

02:25 AM Jun 05, 2021 | Team Udayavani |

ನ್ಯೂಯಾರ್ಕ್‌: ಕಡಿಮೆ ಅವಧಿಯಲ್ಲಿ ಒಂದೆಡೆಯಿಂದ ಮತ್ತೂಂದೆಡೆ ಹೋಗುವಂಥ ತಂತ್ರಜ್ಞಾನದ ಆವಿಷ್ಕಾರಕ್ಕೆ ವಿವಿಧ ದೈತ್ಯ ಕಂಪೆನಿಗಳು ಸಿದ್ಧವಾಗಿವೆ. ಅಮೆರಿಕ ಮೂಲದ ಯುನೈಟೆಡ್‌ ಏರ್‌ಲೈನ್ಸ್‌ ವಿಮಾನ ಯಾನ ಸಂಸ್ಥೆ ಕೂಡ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು, 2029ರ ಹೊತ್ತಿಗೆ ಸೂಪರ್‌ಸಾನಿಕ್‌ (ಶಬ್ದಾತೀತ) ವೇಗದಲ್ಲಿ ಒಂದೆಡೆಯಿಂದ ಮತ್ತೂಂದು ಕಡೆಗೆ ಹೋಗುವಂಥ ವಿಮಾನ ಸೇವೆಯನ್ನು ನೀಡಲು ಚಿಂತನೆ ನಡೆಸಿದೆ.

Advertisement

ಈ ಯೋಜನೆ ಅನುಷ್ಠಾನಕ್ಕೆ ಬಂದರೆ, ನ್ಯೂಯಾರ್ಕ್‌ನಿಂದ ಲಂಡನ್‌ ನಡುವಿನ ವೈಮಾನಿಕ ಪ್ರಯಾಣಕ್ಕೆ ಈಗ ತಗಲುತ್ತಿರುವ 6:50 ಗಂಟೆಯ ಅವಧಿಯು 3:50 ಗಂಟೆಗೆ ಇಳಿಯಲಿದೆ ಎಂದು ಕಂಪೆನಿ ತಿಳಿಸಿದೆ.

ಈ ಪರಿಕಲ್ಪನೆಯ ಸಾಕಾರಕ್ಕಾಗಿ, ಬೂಮ್‌ ಸೂಪರ್‌ಸಾನಿಕ್‌ ಎಂಬ ಸ್ಟಾರ್ಟ್‌ಅಪ್‌ ಸಂಸ್ಥೆಯಿಂದ ಸುಮಾರು 15 ಸೂಪರ್‌ಸಾನಿಕ್‌ ವಿಮಾನಗಳನ್ನು ಖರೀದಿಸಲು ಯುನೈಟೆಡ್‌ ಏರ್‌ಲೈನ್ಸ್‌ ಸಿದ್ಧತೆ ನಡೆಸಿದೆ.

“ತಂತ್ರಜ್ಞಾನ, ಚಾಲನೆ ಹಾಗೂ ಸುರಕ್ಷೆಯ ದೃಷ್ಟಿಯಿಂದ ಈ ವಿಮಾನಗಳು ಸರಿಹೋಗುತ್ತವೆ ಎಂದೆನಿಸಿದರೆ ಮಾತ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ 15 ವಿಮಾನಗಳನ್ನು ಸೇವೆಗೆ ಪಡೆಯಲಿದ್ದು, ಅನಂತರ 35 ವಿಮಾನಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ’ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next