Advertisement

ಅಲೌಕಿಕ ಸಂಪತ್ತಿನಿಂದ ಶಾಶ್ವತ ಆನಂದ: ಒಡಿಯೂರು ಶ್ರೀ

12:04 PM Mar 17, 2017 | Team Udayavani |

ವಿಟ್ಲ: ಲೌಕಿಕ ಸಂಪತ್ತು ಕ್ಷಣಿಕ ಸುಖ ನೀಡಬಹುದು. ಅಲೌಕಿಕ ಸಂಪತ್ತು ಶಾಶ್ವತ ಆನಂದ ನೀಡುತ್ತದೆ. ಅದಕ್ಕೆ ಆಧ್ಯಾತ್ಮಿಕತೆ ಇರಬೇಕು. ಧಾರ್ಮಿಕ ಕೇಂದ್ರಗಳ ನಿರ್ಮಾಣವಾಗಬೇಕು. ಮಾತೃಶಕ್ತಿ ಜಾಗೃತ ವಾದಾಗ ಮನೆ, ಕುಟುಂಬ ಮತ್ತು ಊರು ಜಾಗೃತವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

Advertisement

ಅವರು ಗುರುವಾರ ಅಳಿಕೆ ಗ್ರಾಮದ ಎರುಂಬು ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಪುನರ್‌ ನಿರ್ಮಾಣ ಸಮಿತಿ ವತಿಯಿಂದ ನಿರ್ಮಾಣವಾಗಲಿರುವ ತೀಯಾ ಸಮಾಜದ ಇತಿಹಾಸ ಪ್ರಸಿದ್ಧ 18 ಭಗವತೀ ಕ್ಷೇತ್ರದಲ್ಲಿ ಒಂದಾದ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದ ಗರ್ಭಗುಡಿ ಹಾಗೂ ಸುತ್ತು ಪೌಳಿ ನಿರ್ಮಾಣಕ್ಕೆ ಭೂಮಿಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಹೃದಯ ಶ್ರೀಮಂತಿಕೆ
ಮಾಣಿಲ ಶ್ರೀಧಾಮ ಶ್ರೀ ಮಹಾ ಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವ ಚನ ನೀಡಿ, ಹಿರಿಯರು ಸಂಪತ್ತು ಹೊಂದಿರಲಿಲ್ಲ. ಶಿಕ್ಷಣವೂ ಇರಲಿಲ್ಲ. ಅಂತಹ ಪೂರ್ವಜರಲ್ಲಿ ಹೃದಯ ಶ್ರೀಮಂತಿಕೆ ಇತ್ತು. ಅವರ ಆಚರಣೆ, ಸಂಪ್ರದಾಯ ಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗಕ್ಕಿದೆ ಎಂದರು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಹೊರಭಾಗದ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸುವುದರ ಜತೆಗೆ ಗ್ರಾಮ ದೇವ ಸ್ಥಾನ ಪುನರ್‌ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಬೇಕು. ದೇವಿಯ ಅನುಗ್ರಹವಿದ್ದಾಗ ಯಾವುದೇ ಸಂಕಷ್ಟ ದೂರವಾಗುತ್ತವೆ ಎಂದರು.

ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್‌ ಅಧ್ಯಕ್ಷ ಯು. ಗಂಗಾಧರ ಭಟ್‌, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಕಾರ್ನವರು, ಏರಿಯಕೋಟ ಶ್ರೀ ಭಗವತೀ ಕ್ಷೇತ್ರದ ಚಂದ್ರಶೇಖರ ಕಾರ್ನವರು, ಕನಿಲ ಶ್ರೀ ಭಗವತೀ ಕ್ಷೇತ್ರದ ಗೋಪಾಲದಾಸ ಯಾನೆ ಕಣ್ಣ ಕಲೇಕಾರರು, ಮುಂಬಯಿ ಉದ್ಯಮಿ, ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಪುನರ್‌ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಕೃಷ್ಣ ಎನ್‌. ಉಚ್ಚಿಲ, ಬಂಟ್ವಾಳ ತಾ. ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಭಾಗವಹಿಸಿದ್ದರು.

Advertisement

ಮುಂಬಯಿ ಉದ್ಯಮಿ ರೋಹಿದಾಸ ಬಂಗೇರ, ಮಂಗಳೂರು ಗುತ್ತಿಗೆದಾರ ಪ್ರಭಾಕರ ಯೆಯ್ನಾಡಿ, ಕಾಸರಗೋಡು ಉತ್ತರ ಮಲಬಾರ್‌ ಕ್ಷೇತ್ರ ಸಂರಕ್ಷಣೆ ಸಮಿತಿ ಅಧ್ಯಕ್ಷ ಸಿ. ರಾಜನ್‌ ಪೆರಿಯ, ಉದ್ಯಮಿ ಪ್ರಭಾಕರ ಶೆಟ್ಟಿ ದಂಬೆಕಾನ, ಖಂಡಿಗ ಕೈಲಾಸೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಶ್‌ ಕೆ.ಎನ್‌., ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ ಅಧ್ಯಕ್ಷ ಬಿ.ಎಂ. ಜನಾರ್ದನ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಗಣೇಶ್‌ ಕುಂಟಲ್ಪಾಡಿ, ಕನಿಲ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ದಯಾನಂದ ಎಂ., ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ವಾಮನ ಇಡ್ಯಾ, ಅಡ್ಕ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಗೋಪಾಲ ಬಂದ್ಯೋಡು, ಪಟ್ಟತ್ತೂರು ಶ್ರೀ ಪಾಂಡಂಗರ ಭಗವತೀ ಕ್ಷೇತ್ರದ ಅಧ್ಯಕ್ಷ ಶೇಖರ್‌ ಎಂ., ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಆಚಾರಪಟ್ಟವರ ಗೋಪಾಲ ಬೆಳ್ಚಾಡ, ಅಧ್ಯಕ್ಷ ಸುಕುಮಾರ್‌ ಉಪ್ಪಳ, ಕೇಪು ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಅಳಿಕೆ ಗ್ರಾ. ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಅಳಿಕೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್‌, ಕೇಪು ಗ್ರಾಮ ಪಂಚಾಯತ್‌ ಅಧ್ಯಕ್ಷ ತಾರಾನಾಥ ಆಳ್ವ ಮದಕ, ಯು.ಪಿ. ಜಯರಾಮ್‌ ಉಕ್ಕುಡ, ಪುನರ್‌ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ಕಲ್ಲಕಟ್ಟ, ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಎರುಂಬು, ಬೊಳ್ನಾಡು ಶ್ರೀ ಭಗವತೀ ತೀಯಾ ಯುವಜನ ಸಂಘದ ಅಧ್ಯಕ್ಷ ರವೀಂದ್ರಪ್ರಸಾದ್‌ ಎಂ., ಮಹಿಳಾ ಘಟಕ ಅಧ್ಯಕ್ಷೆ ಶಾಂಭವಿ ಸುಧಾಕರ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮಾನ
ಇದೇ ಸಂದರ್ಭ 1 ಲಕ್ಷ ರೂ. ನೀಡಿದ ದಾನಿಗಳನ್ನು ಗೌರವಿಸಲಾಯಿತು. ವೇ| ಮೂ| ಕುಂಟು ಕುಡೇಲು ಗುರುರಾಜ ತಂತ್ರಿ ಮಾರ್ಗದರ್ಶನದಲ್ಲಿ, ಶಿಲ್ಪಿವರ್ಯ ರಮೇಶ್‌ ಕಾರಂತ ಬೆದ್ರಕಾಡು ನೇತೃತ್ವದಲ್ಲಿ ಬಾಲಕೃಷ್ಣ ಕಾರಂತ ಅವರ ಪೌರೋ ಹಿತ್ಯದಲ್ಲಿ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದ ಗರ್ಭಗುಡಿ ಹಾಗೂ ಸುತ್ತು ಪೌಳಿಯ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಲಾಯಿತು.

ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಪುನರ್‌ ನಿರ್ಮಾಣ ಸಮಿತಿ ಅಧ್ಯಕ್ಷ ಯತೀಂದ್ರನಾಥ ಪುತ್ತೂರು ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಧರ್‌ ಅಳಿಕೆ ವಂದಿಸಿದರು. ಕಾರ್ಯದರ್ಶಿ ಸದಾಶಿವ ಅಳಿಕೆ, ಮಾಲತಿ ದಿನೇಶ್‌ ಕಾನತ್ತಡ್ಕ, ಮೋಹನದಾಸ್‌ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next