Advertisement

ಸೂಪರ್‌ಮೂನ್‌ ಪರಿಣಾಮ: ಸಮುದ್ರ ಅಲೆ ಅಬ್ಬರ ಹೆಚ್ಚಳ

12:30 AM Feb 22, 2019 | |

ಮಂಗಳೂರು: ರಾಜ್ಯ ಕರಾವಳಿ ಪ್ರದೇಶದ ಸಮುದ್ರದಲ್ಲಿ ಫೆ.24ರ ವರೆಗೆ ಅಲೆಗಳ ಅಬ್ಬರ ಹೆಚ್ಚಾಗಿರಲಿದ್ದು, ಗಾಳಿ ಜತೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Advertisement

ಹವಾಮಾನ ಇಲಾಖೆ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿ, ಫೆ.19ರಂದು ವರ್ಷದ ಅತೀ ದೊಡ್ಡ ಸೂಪರ್‌ಮೂನ್‌ ಕಾಣಿಸಿಕೊಂಡಿತ್ತು. ಅಲ್ಲದೆ ಹುಣ್ಣಿಮೆಯ ಒಂದು ವಾರ ಹಿಂದೆ ಮತ್ತು ಒಂದು ವಾರ ಬಳಿಕ ಸಾಮಾನ್ಯವಾಗಿ ಸಮುದ್ರದ ಅಬ್ಬರ ಹೆಚ್ಚಾಗಿರುತ್ತದೆ. ಆದರೆಯಾವುದೇ ಅಪಾಯ ಸಂಭವಿಸುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.

ಸೂಪರ್‌ಮೂನ್‌ ಆದಾಗಿನಿಂದ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ. ಬೀಚ್‌ಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಪ್ರವಾಸಿಗರನ್ನು ನೀರಿನಲ್ಲಿ ಆಟವಾಡಲು ಬಿಡುತ್ತಿಲ್ಲ. ಮುನ್ಸೂಚನೆಯಂತೆ ಮುಂದಿನ 4-5ದಿನಗಳ ಕಾಲ ಅಲೆಗಳ ಅಬ್ಬರ ಇದೇ ರೀತಿ ಇರಲಿದೆ ಎಂದು ಪಣಂಬೂರು ಬೀಚ್‌ ಅಭಿವೃದ್ಧಿ ನಿಗಮದ ಸಿಇಒ ಯತೀಶ್‌ ಬೈಕಂಪಾಡಿ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next