Advertisement

Super Smash Match; ನಿಕ್ ಕೆಲ್ಲಿ-ಟ್ರಾಯ್ ಜಾನ್ಸನ್ ಅತ್ಯುದ್ಭುತ ಕ್ಯಾಚ್: ವಿಡಿಯೋ ನೋಡಿ

08:56 AM Jan 14, 2024 | Team Udayavani |

ವೆಲ್ಲಿಂಗ್ಟನ್: ಇಲ್ಲಿನ ಸೂಪರ್ ಸ್ಮ್ಯಾಶ್ ಲೀಗ್ ನ ಪಂದ್ಯದಲ್ಲಿ ವೆಲ್ಲಿಂಗ್ಟನ್ ನಾಯಕ ನಿಕ್ ಕೆಲ್ಲಿ ಮತ್ತು ಟ್ರಾಯ್ ಜಾನ್ಸನ್ ಅವರು ಅತ್ಯದ್ಭುತ ರೀತಿಯ ಕ್ಯಾಚ್ ಪಡೆದು ಮಿಂಚಿದ್ದಾರೆ. ಅವರ ಕ್ಯಾಚ್ ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ನ್ಯೂಜಿಲ್ಯಾಂಡ್ ಮತ್ತು ಸೆಂಟ್ರಲ್ ಡಿಸ್ಟ್ರಿಕ್ಟ್‌ ಆರಂಭಿಕ ಆಟಗಾರ ವಿಲ್ ಯಂಗ್ ಲಾಂಗ್ ಆನ್ ಕಡೆಗೆ ಲಾಫ್ಟೆಡ್ ಶಾಟ್ ಹೊಡೆದರು. ಮಿಡ್-ಆನ್‌ ನಲ್ಲಿದ್ದ ನಿಕ್ ಕೆಲ್ಲಿ ಚೆಂಡನ್ನು ಹಿಡಿಯಲು ಹಿಮ್ಮುಖವಾಗಿ ಓಡಿದರು. ಮುಂದಕ್ಕೆ ಡೈವ್ ಹೊಡೆದು ಬಾಲ್ ಹಿಡಿದ ಅವರು ಬೌಂಡರಿ ಹಗ್ಗವನ್ನು ಸ್ಪರ್ಶಿಸಲು ಮುಂದಾದಾಗ, ಲಾಂಗ್-ಆಫ್‌ನಿಂದ ಬೌಂಡರಿಯತ್ತ ಸಾಗುತ್ತಿದ್ದ ಜಾನ್ಸನ್ ಕಡೆಗೆ ಚೆಂಡನ್ನು ಹಿಂದಕ್ಕೆ ಎಸೆದರು.

ಕೆಲ್ಲಿ ಎಸೆತ ಚೆಂಡನ್ನು ಹಿಡಿಯುವಲ್ಲಿ ಜಾನ್ಸನ್ ಯಾವುದೇ ತಪ್ಪು ಮಾಡಲಿಲ್ಲ. 6ನೇ ಓವರ್ ನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕ್ಯಾಚ್ ಇದುವರೆಗಿನ ಬೆಸ್ಟ್ ಕ್ಯಾಚ್, ಕ್ಯಾಚ್ ಆಫ್ ದಿ ಡಿಕೇಡ್ ಮುಂತಾದ ರೀತಿಯಲ್ಲಿ ಅಭಿಮಾನಿಗಳು ಹೊಗಳುತ್ತಿದ್ದಾರೆ.

Advertisement

ಪಂದ್ಯದಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಸ್ ತಂಡವು ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ವೆಲ್ಲಿಂಗ್ಟನ್  ತಂಡವು ಎಂಟು ವಿಕೆಟ್ ನಷ್ಟಕ್ಕೆ 147 ರನ್ ಗಳ ಸಾಧಾರಣ ಮೊತ್ತವನ್ನು ದಾಖಲಿಸಿತು, ಮುಹಮ್ಮದ್ ಅಬ್ಬಾಸ್ ಅವರ 35 ಮತ್ತು ಲೋಗನ್ ವ್ಯಾನ್ ಬೀಕ್ ಅವರು ಅಜೇಯ 41 ರನ್ ಪೇರಿಸಿದರು.

ಪ್ರತ್ಯುತ್ತರವಾಗಿ, ಜಾಕ್ ಬೊಯೆಲ್ ಅವರ ಅರ್ಧಶತಕ, ಬ್ರೇಸ್‌ವೆಲ್ ಅವರ ಅಜೇಯ 30 ಮತ್ತು ಟಾಮ್ ಬ್ರೂಸ್ ಅವರ 26 ರನ್ ಗಳ ಅಮೋಘ ಆಟವು ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಸುಲಭ ಗೆಲುವಿಗೆ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next