Advertisement

ಕೆಮಿಸ್ತ್ರೀ: ಟಿ-ಷರ್ಟ್‌ ಮೇಲೆ ಸೂಪರ್ ಸೈನ್ಸ್

12:30 AM Feb 27, 2019 | |

ಶಾಲಾ ದಿನಗಳಲ್ಲಿ ಕಲಿತ ವೈಜ್ಞಾನಿಕ ಸಂಶೋಧನೆಗಳ ಮಾಹಿತಿ, ಈಕ್ವೇಷನ್‌, ಥಿಯರಂ, ಪಿರಿಯಾಡಿಕ್‌ ಟೇಬಲ್‌ಗ‌ಳು ಈಗ ಫ್ಯಾಷನೆಬಲ್‌ ಪ್ರಿಂಟ್‌ ಹೆಸರಿನಲ್ಲಿ ಟಿ-ಷರ್ಟ್‌ಗಳ ಮೇಲೆ ಮೂಡಿವೆ. ಈ ವಿಜ್ಞಾನ ದಿನದಂದು ನೀವೂ ಅಂಥ ಟಿ-ಷರ್ಟ್‌ ಧರಿಸಿ. 

Advertisement

ಫೆಬ್ರವರಿ 28ರ ವಿಶೇಷ ಏನಂತ ಎಲ್ಲರಿಗೂ ಗೊತ್ತೇ ಇದೆ. ಅವತ್ತು ರಾಷ್ಟ್ರೀಯ ವಿಜ್ಞಾನ ದಿನ. 1928ರ ಫೆಬ್ರವರಿ 28ರಂದು ಹೆಮ್ಮೆಉ ವಿಜ್ಞಾನಿ ಸರ್‌ ಸಿ. ವಿ. ರಾಮನ್‌ ಅವರು “ರಾಮನ್‌ ಎಫೆಕr…’ ಅನ್ನು ಕಂಡು ಹಿಡಿದರು. ಈ ಸಂಶೋಧನೆಗಾಗಿ 1930ರಲ್ಲಿ ಅವರಿಗೆ ನೊಬೆಲ್‌ ಪ್ರಶಸ್ತಿ ದೊರೆಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊದಲ ನೊಬೆಲ್‌ ಪುರಸ್ಕಾರ. “ರಾಮನ್‌ ಎಫೆಕ್ಟ್ ‘ ಅನ್ನು ಕಂಡುಹಿಡಿದ ಈ ದಿನವನ್ನು 1987ರಿಂದ “ರಾಷ್ಟ್ರೀಯ ವಿಜ್ಞಾನ’ ದಿನವನ್ನಾಗಿ ಆಚರಿಸಲಾಗುತ್ತಿದೆ. ಜನರಲ್ಲಿ ವಿಜ್ಞಾನದ ಮಹತ್ವ ಕುರಿತು ಜಾಗೃತಿ ಮೂಡಿಸುವುದು ಈ ಆಚರಣೆಯ ಉದ್ದೇಶ.

ಟಿ-ಶರ್ಟ್‌ ಮೇಲೆ ವಿಜ್ಞಾನ
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಫ್ಯಾಷನ್‌ ಲೋಕದಲ್ಲೂ ವಿಜ್ಞಾನ ದಿನದ ಆಚರಣೆ ಜೋರಾಗಿಯೇ ಇದೆ. ವಿಜ್ಞಾನಕ್ಕೆ ಸಂಬಂಧಪಟ್ಟ ನುಡಿಮುತ್ತುಗಳು, ವಿಜ್ಞಾನಿಗಳ ಹೇಳಿಕೆಗಳು, ಈಕ್ವೇಶನ್‌ (ಸಮೀಕರಣ), ಡಿರೈವೇಶನ್‌ (ವುತ್ಪತ್ತಿ), ಥಿಯರಮ್‌ (ಪ್ರಮೇಯ), ಪಿರಿಯಾಡಿಕ್‌ ಟೇಬಲ್‌ (ಆವರ್ತಕ ಕೋಷ್ಟಕ), ವೈಜ್ಞಾನಿಕ ಉಪಕರಣಗಳ ಚಿತ್ರ, ವಿಜ್ಞಾನಿಗಳ ಭಾವಚಿತ್ರಗಳನ್ನು ಹೊಂದಿದ, ಜಾಕೆಟ್‌ ಮತ್ತು ಟಿ-ಶರ್ಟ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ನಿಮ್ಮ ಆಯ್ಕೆಯ ಬಣ್ಣದ ಪ್ಲೆ„ನ್‌ ಟಿ-ಶರ್ಟ್‌ ಮೇಲೆ, ನಿಮಗೆ ಬೇಕಾದ ಚಿತ್ರ ಅಥವಾ ಬರಹವನ್ನು ಪ್ರಿಂಟ್‌ ಮಾಡಿಸಬಹುದು. ಈ ರೀತಿ ಮಾಡಿ ಕೊಡುವ ಅಂಗಡಿಗಳಿದ್ದು, ಆನ್‌ಲೈನ್‌ ಮೂಲಕವೂ ಕಸ್ಟಮೈ ಟಿ-ಶರ್ಟ್‌ ಖರೀದಿಸಬಹುದು. 
 
ಟ್ರೆಂಡ್‌ ಸೃಷ್ಟಿಸಿ
ಈ ವಿಜ್ಞಾನ ದಿನದಂದು, ಗೆಳೆಯರೆಲ್ಲ ಒಂದೇ ಬರಹ ಅಥವಾ ಚಿತ್ರವಿರುವ ಉಡುಪು ಧರಿಸಿ ಕಾಲೇಜು/ ಕಚೇರಿಯಲ್ಲಿ ಟ್ರೆಂಡ್‌ ಸೃಷ್ಟಿಸಬಹುದು. ಸ್ಟಾರ್‌ಟ್ರೆಕ್‌, ದ ಬಿಗ್‌ ಬ್ಯಾಂಗ್‌ ಥಿಯರಿ, ದ ಜೆಟ್ಸ್, ಡೆಕ್‌ಸ್ಟರ್ಸ್‌ ಲ್ಯಾಬ್‌, ಪವರ್‌ಪಫ್ ಗರ್ಲ್ಸ್‌, ಸ್ಮಾಲ್‌ ವಂಡರ್‌, ಥರ್ಡ್‌ ರಾಕ್‌ ಫ್ರಮ್‌ ದ ಸನ್‌… ಹೀಗೆ ವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ಟಿವಿ ಕಾರ್ಯಕ್ರಮಗಳು, ಕಾರ್ಟೂನ್‌ಗಳು, ಕಾಮಿಕ್‌ ಬುಕ್‌ ಪಾತ್ರಗಳ ಚಿತ್ರಗಳಿರುವ ಟಿ-ಶರ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. 

ವಿದ್ಯಾರ್ಥಿಗಳ ಫೇವರಿಟ್‌
ಎಂಜಿನಿಯರಿಂಗ್‌, ವೈದ್ಯಕೀಯ, ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಸೇರಿದಂತೆ ವಿಜ್ಞಾನದ ವಿದ್ಯಾರ್ಥಿಗಳ ಫೇವರಿಟ್‌ ಫ್ಯಾಷನ್‌ ಇದಾಗಿದೆ. ವಿಜ್ಞಾನಕ್ಕೆ ಸಂಬಂಧಿಸಿದ ಸಿನಿಮಾ, ಪುಸ್ತಕ, ಕಾರ್ಟೂನ್‌ಗಳ ಅಭಿಮಾನಿಗಳೂ ಇಂಥ ಉಡುಪುಗಳನ್ನು ಕೊಳ್ಳಲು ಮುಂದಾಗುತ್ತಿ¨ªಾರೆ. ಟಿವಿ ಕಾರ್ಯಕ್ರಮಗಳ ಜನಪ್ರಿಯತೆಯೇ ಇದಕ್ಕೆ ಕಾರಣ ಎನ್ನಬಹುದು. ಟಿವಿ ಕಾರ್ಯಕ್ರಮ, ವ್ಯಂಗ್ಯ ಚಿತ್ರ ಮತ್ತು ಕಾಮಿಕ್‌ ಬುಕ್‌ ಪಾತ್ರಗಳನ್ನು ಇಷ್ಟ ಪಡುವ ಸೆಲೆಬ್ರಿಟಿಗಳು ಕೂಡಾ ವಿಜ್ಞಾನದ ಟಿ-ಶರ್ಟ್‌ಗಳನ್ನು ತೊಟ್ಟು ಪೋಸ್‌ ಕೊಟ್ಟಿದ್ದಾರೆ. 

ಹ್ಯಾಷ್‌ಟ್ಯಾಗ್‌ ಸೈನ್ಸ್‌ ಡೇ! 
ಈಗ ಬಹುತೇಕ ಎಲ್ಲ ಆಚರಣೆಗಳೂ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡುತ್ತಿವೆ. ವಿಶೇಷ ದಿನಗಳಂದು ವಿಶಿಷ್ಟ ದಿರಿಸು ತೊಟ್ಟು, ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುವುದು ಈಗ ಕಾಮನ್‌. ಬಟ್ಟೆಯ ಬ್ರ್ಯಾಂಡ್‌ ಅನ್ನು ಹ್ಯಾಷ್‌ ಟ್ಯಾಗ್‌ ಜೊತೆ ಪೋಸ್ಟ್ ಮಾಡುವ ಗ್ರಾಹಕರಿಗೆ ರಿಯಾಯಿತಿ, ಉಡುಗೊರೆ ಕೊಡುವ ಬ್ರ್ಯಾಂಡ್‌ಗಳೂ ಇವೆ. ನಿಮ್ಮ ಬಳಿಯೂ ವಿಜ್ಞಾನಕ್ಕೆ ಸಂಬಂಧಪಟ್ಟ ವಿನ್ಯಾಸದ ಟಿ-ಶರ್ಟ್‌ ಅಥವಾ ಉಡುಪುಗಳು ಇದ್ದರೆ, ಅದನ್ನು ಧರಿಸಿ ಹೆಮ್ಮೆಯಿಂದ “ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಆಚರಿಸಿ. ಹಾಂ, ಸೆಲ್ಫಿ ಕ್ಲಿಕ್ಕಿಸಿ, ಅಪ್‌ಲೋಡ್‌ ಮಾಡಲು ಮರೆಯಬೇಡಿ. 

Advertisement

ಅದಿತಿ ಮಾನಸ

Advertisement

Udayavani is now on Telegram. Click here to join our channel and stay updated with the latest news.

Next