ಶಾರ್ಜಾ: ಕಳೆದೆರಡು ಬಾರಿಯ ಚಾಂಪಿಯನ್ ಸೂಪರ್‌ನೋವಾಸ್ ಅಂತಿಮ ಲೀಗ್ ಪಂದ್ಯದಲ್ಲಿ ಟ್ರೈಲ್‌ಬ್ಲೇಜರ್ ವಿರುದ್ಧ 2 ರನ್ ರೋಚಕ ಜಯದೊಂದಿಗೆ ವನಿತಾ ಟಿ20 ಚಾಲೆಂಜರ್ ಸರಣಿಯ ಫೈನಲ್ ಪ್ರವೇಶಿಸಿದೆ. ಸೋಮವಾರದ ಪ್ರಶಸ್ತಿ ಸಮರಲ್ಲಿ ಈ ಎರಡು ತಂಡಗಳೇ ಮತ್ತೆ ಮುಖಾಮುಖಿ ಆಗಲಿವೆ. ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡ ರನ್‌ರೇಟ್ ಕೊರತೆಯಿಂದ ಕೂಟದಿಂದ ನಿರ್ಗಮಿಸಿದೆ.
ಚಾಮರಿ ಅತಪಟ್ಟು ಮತ್ತು ಪ್ರಿಯಾ ಪೂನಿಯಾ ಅವರ ಉತ್ತಮ ಆರಂಭಿಕ ಜತೆಯಾಟದಿಂದ ಸೂಪರ್ ನೋವಾಸ್ 6 ವಿಕೆಟಿಗೆ 146 ರನ್ ಗಳಿಸಿದರೆ, ಟ್ರೈಲ್‌ಬ್ಲೇಜರ್ ದಿಟ್ಟ ಚೇಸಿಂಗ್ ನಡೆಸಿಯೂ 5ಕ್ಕೆ 144 ರನ್ ಗಳಿಸಿ ಶರಣಾಯಿತು.
ಇದನ್ನೂ ಓದಿ:ಕೊಹ್ಲಿಯನ್ನು RCB ನಾಯಕ ಸ್ಥಾನದಿಂದ ಕೆಳಗಿಳಿಸುವುದು ಪರಿಹಾರವಲ್ಲ: ಸೆಹ್ವಾಗ್ ಹೇಳಿದ್ದೇನು ?
ಚಾಮರಿ ಅತಪಟ್ಟು ಅರ್ಧ ಶತಕದ ಮೂಲಕ ಗಮನ ಸೆಳೆದರು. 48 ಎಸೆತ ಎದುರಿಸಿದ ಲಂಕಾ ಆಟಗಾರ್ತಿ 4 ಸಿಕ್ಸರ್, 5 ಬೌಂಡರಿ ನೆರವಿನಿಂದ 67 ರನ್ ಸಿಡಿಸಿದರು. ಟ್ರೈಲ್‌ಬ್ಲೇಜರ್ ಪರ ದೀಪ್ತಿ ಶರ್ಮ ಅಜೇಯ 43, ಮಂಧನಾ 33ರನ್ ಹೊಡೆದರು.
ಕೊನೆಯಲ್ಲಿ ಹರ್ಲೀನ್ ಡಿಯೋಲ್ 15 ಎಸೆತಗಳಿಂದ 27 ರನ್ ಬಾರಿಸಿದರೂ ಕೊನೆಯ ಓವರ್ ನಲ್ಲಿ ಔಟಾದರು. ಮಂಧನಾ ಪಡೆ ಎರಡು ರನ್ ಅಂತರದ ಸೋಲನುಭವಿಸಿತು.