Advertisement

ಐಸಿಸಿಯಿಂದ ಸೂಪರ್‌ ಲೀಗ್‌ ಟೂರ್ನಿ

03:20 AM Jul 28, 2020 | Hari Prasad |

ದುಬಾೖ: ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ ಕೂಟಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಈಗಲೇ ಸಿದ್ಧತೆ ಶುರು ಮಾಡಿಕೊಂಡಿದೆ.

Advertisement

ಅದು ವಿಶ್ವಕಪ್‌ ಅರ್ಹತಾ ಕೂಟವಾದ ‘ಸೂಪರ್‌ ಲೀಗ್‌’ಗೆ ಚಾಲನೆ ನೀಡಿದೆ. ಜು. 30ರಂದು ಇಂಗ್ಲೆಂಡ್‌-ಐರ್ಲೆಂಡ್‌ ಪರಸ್ಪರ ಎದುರಾಗುವುದರ ಮೂಲಕ ಲೀಗ್‌ ಶುರುವಾಗಲಿದೆ.

ಲೀಗ್‌ನ ಉಳಿದ ವೇಳಾಪಟ್ಟಿ ಮುಂದೆ ಬಿಡುಗಡೆಯಾಗಲಿದೆ.

12 ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳು ಮತ್ತು ಸಹ ಸದಸ್ಯರಾಷ್ಟ್ರ ನೆದರ್ಲೆಂಡ್‌ ಸೂಪರ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿವೆ.

ಆತಿಥೇಯ ರಾಷ್ಟ್ರ ಭಾರತ ಮತ್ತು ಲೀಗ್‌ನಲ್ಲಿ ಅಗ್ರಸ್ಥಾನ ಪಡೆದ ಇತರ 7 ತಂಡಗಳು 2023ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿವೆ.

Advertisement

ಅರ್ಹತೆ ಪಡೆಯಲು ವಿಫ‌ಲವಾದ ಬಾಕಿ 5 ತಂಡಗಳು ಮತ್ತು ಇತರ 5 ಸಹ ಸದಸ್ಯ ರಾಷ್ಟ್ರಗಳು 2023ರಂದು ಇನ್ನೊಂದು ಸುತ್ತಿನ ಅರ್ಹತಾ ಕೂಟದಲ್ಲಿ ಭಾಗವಹಿಸಲಿವೆ.

ಅಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ವಿಶ್ವಕಪ್‌ ಮುಖ್ಯ ಸುತ್ತಿಗೆ ಆಯ್ಕೆಯಾಗಲಿವೆ. ಅಲ್ಲಿಗೆ ಮುಖ್ಯ ಸುತ್ತಿನಲ್ಲಿ ಆಡುವ ತಂಡಗಳ ಸಂಖ್ಯೆ 10ಕ್ಕೆ ಏರಲಿದೆ.

ಅಂಕ ಹಂಚಿಕೆ ಹೇಗೆ?
ಪ್ರತೀ ತಂಡಗಳು ಸ್ವದೇಶದಲ್ಲಿ 4, ವಿದೇಶದಲ್ಲಿ 4 ಸರಣಿಗಳನ್ನು ಆಡಲಿವೆ. ಪ್ರತೀ ತಂಡವೂ ಒಂದು ಗೆಲುವಿಗೆ 10 ಅಂಕ ಪಡೆಯಲಿದೆ. ಪಂದ್ಯ ಟೈ/ರದ್ದು/ಫ‌ಲಿತಾಂಶ ಲಭಿಸದ ಸಂದರ್ಭಗಳಲ್ಲಿ ಎರಡೂ ತಂಡಗಳಿಗೆ ತಲಾ 5 ಅಂಕ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next