Advertisement

ಪಣಜಿ : ಹಳಿ ತಪ್ಪಿದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು

02:43 PM Jun 26, 2021 | Team Udayavani |

ಪಣಜಿ: ಮಡಗಾಂವ ರಾಜಧಾನಿ ಸೂಪರ್  ಫಾಸ್ಟ್ ಎಕ್ಸಪ್ರೆಸ್ ರೈಲಿನ ಎಂಜಿನ್ ಮುಂದಿನ ಚಕ್ರ ಹಳಿ ತಪ್ಪಿದ ಘಟನೆ ರತ್ನಾಗಿರಿ-ಉಕ್ಷಿ ಬಳಿ ಶನಿವಾರ ಬೆಳಿಗ್ಗೆ 4.15 ರ ಸುಮಾರಿಗೆ ನಡೆದಿದೆ.

Advertisement

ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಬೆಳಿಗ್ಗೆ 8.15 ರ ವರೆಗೆ ರೈಲು ಸಂಚಾರ ಪುನರಾರಂಭಗೊಂಡಿದೆ ಎಂದು ಕೊಂಕಣ ರೈಲ್ವೆ ಜನಸಂಪರ್ಕ ಅಧಿಕಾರಿ ಬಬನ್ ಘಾಟೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next