Advertisement
ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ಬ್ರಾಂಡ್‌ಗೆ ತನ್ನದೇ ಆದ ಸ್ಥಾನವಿದೆ. ಉತ್ತಮ ಫೀಚರ್‌ಗಳುಳ್ಳ, ಅತ್ಯುನ್ನತ ಪ್ರೊಸೆಸರ್ ಹಾಕಿರುವ ಪ್ರೀಮಿಯಂ ವಿಭಾಗದ ಫೋನ್ ಗಳನ್ನು ಕೊಳ್ಳಬೇಕಾದರೆ 70 ಸಾವಿರದಿಂದ 1 ಲಕ್ಷ ರೂ. ಕೊಡಬೇಕು ಎಂಬ ಮಾತುಗಳನ್ನು ಸುಳ್ಳು ಮಾಡಿದ ಬ್ರಾಂಡ್ ಇದು. 2014 ರಲ್ಲಿ ಈ ಬ್ರಾಂಡ್ ಹೊರ ತಂದ ಒನ್ ಪ್ಲಸ್ ಒನ್, ಮೊಬೈಲ್ ಫೋನ್, ಕ್ರಾಂತಿಯನ್ನೇ ಉಂಟು ಮಾಡಿತು. ದೊಡ್ಡ ಬ್ರಾಂಡ್ ಕಂಪನಿಗಳು ಕನಿಷ್ಠ 50 ರಿಂದ 70 ಸಾವಿರಕ್ಕೆ ಮಾರುವ ಫೋನನ್ನು 19999 ರೂ.ಗೆ ನೀಡುವ ಮೂಲಕ ಅಚ್ಚರಿ ಮೂಡಿಸಿತು. ಒನ್ ಪ್ಲಸ್ ಬ್ರಾಂಡ್‌ನ ಪಿತಾಮಹ ಕಂಪೆನಿ, ಚೀನಾದ ಬಿಬಿಕೆ. ವಿವೋ ಮತ್ತು ಒಪ್ಪೋ, ರಿಯಲ್‌ಮಿ ಮತ್ತು ಒನ್‌ಪ್ಲಸ್ ಇಷ್ಟೂ ಕೂಡ ಒಂದೇ ಕುಟುಂಬಕ್ಕೆ ಸೇರಿದವು! ಈ ಪೈಕಿ ವಿವೋ ಒಪ್ಪೋ ಆಫ್ಲೈನ್ (ಅಂಗಡಿ ಮಾರಾಟ)ಕ್ಕೆ ಒತ್ತು ನೀಡಿದರೆ, ಒನ್‌ಪ್ಲಸ್ ಮತ್ತು ರಿಯಲ್‌ಮಿ ಆನ್‌ಲೈನ್ ಮಾರಾಟದ ಬ್ರಾಂಡ್‌ಗಳಾಗಿವೆ.
Related Articles
Advertisement
3.5 ಆಡಿಯೋ ಜಾಕ್ ಇಲ್ಲ: ಒನ್ ಪ್ಲಸ್ ಟಿಯಲ್ಲಿ ಸಾಂಪ್ರದಾಯಿಕವಾಗಿ ನಾವೆಲ್ಲ ಹಾಡು ಕೇಳಲು ಇಯರ್‌ಫೋನ್ ಅನ್ನು ಫೋನ್‌ಗೆ ಸಿಕ್ಕಿಸುವ 3.5ಎಂಎಂ ಆಡಿಯೋ ಜಾಕ್ ಇಲ್ಲ. ಯುಎಸ್‌ಬಿ ಟೈಪ್ ಸಿ ಕೇಬಲ್ ಇರುವ ಇಯರ್‌ಫೋನ್‌ಗಳನ್ನು ಬಳಸಬೇಕು. ಆದರೆ ಅದೃಷ್ಟವಶಾತ್, ಒನ್ ಪ್ಲಸ್ ಈ ಫೋನ್ ಜೊತೆಗೇನೇ, ಟೈಪ್ ಸಿಯಿಂದ 3.5ಎಂಎಂ ಆಡಿಯೋ ಜಾಕ್‌ಗೆ ಪರಿವರ್ತಿತವಾಗುವ ಅಡಾಪ್ಟರ್ ನೀಡಿದೆ. ಇದಕ್ಕೆ ನಿಮ್ಮ ಹಳೆಯ 3.5 ಎಂಎಂ ಇಯರ್ ಫೋನ್ ಹಾಕಿ ಹಾಡು ಕೇಳಬಹುದು.
ಸ್ಕ್ರೀನ್ ಅನ್ ಲಾಕ್: ಒನ್ ಪ್ಲಸ್ 6ನಲ್ಲಿ ಫೋನ್ ರಕ್ಷಣೆಗೆ ಬೆರಳಚ್ಚು ಸ್ಕ್ಯಾನರ್ ಫೋನ್‌ನ ಹಿಂಬದಿಯಲ್ಲಿತ್ತು. 6 ಟಿಯಲ್ಲಿ ಪರದೆಯ ಮೇಲೆ (ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್) ಬೆರಳಚ್ಚು ಸ್ಕ್ಯಾನರ್ ಇದೆ.
ನೀರಿನ ಹನಿಯಂಥ ಡಿಸ್‌ಪ್ಲೇ: ಇಡೀ ಪರದೆಯನ್ನಾವರಿಸುವ ನಾಚ್ ಡಿಸ್ ಪ್ಲೇ ಗಿಂತಲೂ ಮುಂದಿನ ಹಂತವಾದ ವಾಟರ್ ಡ್ರಾಪ್ ಡಿಸ್‌ಪ್ಲೇ ಇದರಲ್ಲಿದೆ. ಸೆಲ್ಫಿà ಕ್ಯಾಮರಾಕ್ಕೆ ಮಾತ್ರ ಜಾಗ ಕೊಡಲು, ನೀರಿನ ಹನಿಯ ಆಕಾರದಲ್ಲಿ ಖಾಲಿ ಬಿಡಲಾಗಿರುತ್ತದೆ. ಇದೇ ವಾಟರ್ ಡ್ರಾಪ್ ಡಿಸ್‌ಪ್ಲೇ!
ಬ್ಯಾಟರಿ ಸಾಮರ್ಥ್ಯ ಹೆಚ್ಚಳ: 6 ಮಾಡೆಲ್‌ನಲ್ಲಿ 3300 ಎಂಎಎಚ್ ಬ್ಯಾಟರಿ ಇತ್ತು. 6 ಟಿಯಲ್ಲಿ 3700 ಎಂಎಎಚ್ ಬ್ಯಾಟರಿ ಇದೆ. 6ನಲ್ಲಿ ಆರಂಭಿಕ ಶ್ರೇಣಿಗೆ 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಇತ್ತು. ಈ ಮಾಡೆಲ್‌ಗೆ 128 ಜಿಬಿ ಸ್ಟೋರೇಜ್ ಆರಂಭಿಕ. 64 ಜಿಬಿ ವರ್ಷನ್ ಮಾಡೆಲ್ ಇಲ್ಲ. 6ಗೆ ಅಂಡ್ರಾಯ್ಡ ಓರಿಯೋ ಓಎಸ್ ಇತ್ತು, ಬಳಿಕ ಇತ್ತೀಚೆಗೆ ಅಂಡ್ರಾಯ್ಡ 9ಪೈ ಅಪ್‌ಡೇಟ್ ನೀಡಲಾಗಿತ್ತು. 6ಟಿ ಮೂಲದಿಂದಲೇ 9ಪೈ ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ.
ಇನ್ನುಳಿದಂತೆ ಒನ್ ಪ್ಲಸ್ 6ನಲ್ಲಿ ಏನಿತ್ತೋ ಅವೆಲ್ಲ 6ಟಿಯಲ್ಲೂ ಇವೆ. ಅವೆಂದರೆ: ಸ್ನಾಪ್‌ಡ್ರಾಗನ್ 845 ಎಂಟು ಕೋರ್‌ಗಳ (2.8ಗಿ.ಹ) ಪ್ರೊಸೆಸರ್. 20+16 ಮೆಗಾಪಿಕ್ಸಲ್ ಹಿಂಬದಿ ಮತ್ತು 16 ಮೆ.ಪಿ. ಸೆಲ್ಫಿà ಕ್ಯಾಮರಾ ಹೊಂದಿದೆ. ಕ್ಯಾಮರಾವನ್ನು ಇನ್ನಷ್ಟು ಉತ್ತಮಪಡಿಸಿ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ಬರುವಂತೆ ವಿನ್ಯಾಸ ಮಾಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಿಂಬದಿ ವಿನ್ಯಾಸ ಬೆರಳಚ್ಚು ಸ್ಕ್ಯಾನರ್ ತೆಗೆದಿರುವುದನ್ನು ಬಿಟ್ಟರೆ ಇನ್ನುಳಿದಂತೆ ಅದೇ ರೀತಿ ಇದೆ. 6.41 ಇಂಚಿನ, ಫುಲ್‌ಎಚ್‌ಡಿಪ್ಲಸ್ ಆಪ್ಟಿಕ್ ಅಮೋಲೆಡ್ ಪರದೆ. ಶೇ.86ರಷ್ಟು ಜಾಗ ಪರದೆಯೇ ಇದ್ದು, ಇನ್ನು ಶೇ. 14ರಷ್ಟು ಮಾತ್ರ ಬೆಜೆಲ್ಸ್ ಇದೆ. (ಅಂದರೆ ಪರದೆಯ ಅಕ್ಕಪಕ್ಕ, ಮೇಲೆ ಕೆಳಗಿನ ಅಂಚುಗಳು).
6 ಜಿಬಿ ರ್ಯಾಮ್ 128 ಜಿಬಿ ಆಂತರಿಕ ಸಂಗ್ರಹವಿರುವುದು ಆರಂಭಿಕ ಮಾಡೆಲ್ ಆಗಿದ್ದು, ಇದರ ದರ 37,999 ರೂ. ಇದೆ. 8 ಜಿಬಿ ರ್ಯಾಮ್ 128 ಜಿಬಿ ಸಂಗ್ರಹದ ಮಾಡೆಲ್‌ಗೆ 41999 ರೂ. ದರವಿದೆ. 8 ಜಿಬಿ ರ್ಯಾಮ್, 256 ಆಂತರಿಕ ಸಂಗ್ರಹದ ಮಾಡೆಲ್‌ಗೆ 45,999 ರೂ. ದರವಿದೆ. ಭಾರತದಲ್ಲಿ ಅಮೆಜಾನ್.ಇನ್ ನಲ್ಲಿ ಮತ್ತು ಒನ್‌ಪ್ಲಸ್ ಸ್ಟೋರ್‌ನಲ್ಲಿ ಮಾತ್ರ ಲಭ್ಯ.
– ಕೆ.ಎಸ್. ಬನಶಂಕರ ಆರಾಧ್ಯ