Advertisement
2018ಕ್ಕೆ ಹೋಲಿಸಿದರೆ ಈ ಬಾರಿ ಬೇಸಿಗೆಯಲ್ಲಿ ಸೂರ್ಯನ ತಾಪ ಇನ್ನಷ್ಟು ಏರುವುದು ಖಚಿತ ಎಂಬುದಾಗಿ ಹವಾಮಾನ ಅಂದಾಜು ಮಾಡುವ ವಿವಿಧ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಅಂದಾಜಿನ ಪ್ರಕಾರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಗರಿಷ್ಠ ಉಷ್ಣಾಂಶ ಸರಾಸರಿ 36 ರಿಂದ 39 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ಇರಲಿದೆ. ಕನಿಷ್ಠ ಉಷ್ಣಾಂಶ 18ರಿಂದ 24 ಡಿಗ್ರಿ ಸೆಲ್ಸಿಯಸ್ನವರೆಗೆಇರಲಿದೆ.
ಮಾರ್ಚ್ 28ರ ನಂತರ ಮೋಡ ಕವಿದ ವಾತಾವರಣವಿದ್ದರೂ ಬಿಸಿಲು ಮಾತ್ರ ಎಂದಿನಂತೆ ಇರಲಿದೆ. ಏಪ್ರಿಲ್‌ನಲ್ಲೂ
ಬಿಸಿಲಿನ ತಾಪ ಮತ್ತಷ್ಟು ಏರಲಿದೆ. ಸದ್ಯ 35 ಡಿಗ್ರಿ ಸೆಲ್ಸಿಯಸ್‌ನಿಂದ 37ರ ವರೆಗೆ ತಾಪಮಾನ ಇದೆ. ತಾಪಮಾನದಲ್ಲಿ ಇಳಿಕೆಗಿಂತ ಏರಿಕೆಯೇ ಕಾಣುತ್ತಿದೆ. ಕಳೆದ ವರ್ಷ ಇದೇ ವೇಳೆ ತಾಪಮಾನ 35-36 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು. ಈ ಬಾರಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ನಾಗಕರಿಕರು ಹೆಚ್ಚು ತಾಪಮಾನ ಅನುಭವಿಸಬೇಕಿದೆ. ತಾಪಮಾನ ಹೆಚ್ಚಳಕ್ಕೆ ಕೇವಲ ಸೂರ್ಯ ಮಾತ್ರ ಕಾರಣನಲ್ಲ. ನಗರ ಪ್ರದೇಶದಲ್ಲಿನ ಮರಗಳ ಕಡಿತ, ವಾಹನಗಳ ಹೆಚ್ಚಳ ಸಹ ಕಾರಣವಾಗಿದೆ. ಸೂರ್ಯನ ಕಿರಣಗಳು ಮರ, ಗಿಡಗಳ ಮೇಲೆ ಬೀಳುತ್ತಿದ್ದುದರಿಂದ ತಾಪಮಾನ ಹೆಚ್ಚಾಗುತ್ತಿರಲಿಲ್ಲ. ಆದರೆ, ಮರಗಳ ನಾಶ ಮತ್ತು ಕಟ್ಟಡಗಳ ಹೆಚ್ಚಳದಿಂದಾಗಿ ತಾಪಮಾನ ಸೂರ್ಯನ ಶಾಖಕ್ಕಿಂತ ಹೆಚ್ಚಾಗುತ್ತದೆ.
Related Articles
Advertisement
ವಿಶೇಷ ವರದಿ