Advertisement
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ 20 ಓವರ್‌ಗಳಲ್ಲಿ 8 ವಿಕೆಟಿಗೆ 175 ರನ್ ಗಳಿಸಿ ಸವಾಲೊಡ್ಡಿತು. ಇದನ್ನು ಸರಾಗವಾಗಿ ಬೆನ್ನತ್ತಿದ ಹೈದರಾಬಾದ್ ಕೇವಲ 17.5 ಓವರ್‌ಗಳಲ್ಲಿ 3 ವಿಕೆಟ್ 176 ರನ್ ಗಳಿಸಿತು.
Related Articles
Advertisement
ಆಗ ನಾಯಕ ಶ್ರೇಯಸ್ ಅಯ್ಯರ್-ನಿತೀಶ್ ರಾಣಾ ಜೋಡಿ ಕ್ರೀಸ್‌ನಲ್ಲಿತ್ತು. ಇಬ್ಬರೂ ತೀವ್ರ ಎಚ್ಚರಿಕೆಯ ಆಟವಾಡುತ್ತ ಇನ್ನಿಂಗ್ಸ್ ಬೆಳೆಸತೊಡಗಿದರು. 10 ಓವರ್ ಮುಕ್ತಾಯಕ್ಕೆ ಇನ್ನೇನು ಒಂದು ಎಸೆತ ಇದೆ ಎನ್ನುವಾಗ ಉಮ್ರಾನ್ ಮಲಿಕ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 28 ರನ್ ಮಾಡಿದ ಶ್ರೇಯಸ್ ಐಯ್ಯರ್ ಬೌಲ್ಡ್ ಆದರು. 25 ಎಸೆತ ಎದುರಿಸಿದ ಕೆಕೆಆರ್ ಕಪ್ತಾನ 3 ಬೌಂಡರಿ ಹೊಡೆದಿದ್ದರು. ಅರ್ಧ ಹಾದಿ ಪೂರ್ತಿಗೊಳ್ಳುವಾಗ ಕೋಲ್ಕತಾ 4 ವಿಕೆಟಿಗೆ 70 ರನ್ ಮಾಡಿತ್ತು.
ಈ ಹಂತದಲ್ಲಿ ನಿತೀಶ್ ರಾಣಾ ತಮ್ಮ ಬ್ಯಾಟಿಂಗ್ ಪ್ರತಾಪ ತೋರಲಾರಂಭಿಸಿದರು. 19ನೇ ಇನಿಂಗ್ಸ್ ಬಳಿಕ ರಾಣಾ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿದರು. ರಾಣಾಗೆ ಶೆಲ್ಡನ್ ಜಾಕ್ಸನ್ (7) ಅವರಿಂದ ಬೆಂಬಲ ಲಭಿಸಲಿಲ್ಲ. ಡೆತ್ ಓವರ್‌ಗಳಲ್ಲಿ ಆ್ಯಂಡ್ರೆ ರಸೆಲ್ ಕೂಡಿಕೊಂಡರು. 16ನೇ ಓವರ್ ಎಸೆದ ಉಮ್ರಾನ್ ಮಲಿಕ್ ಕೇವಲ 2 ರನ್ ನೀಡಿ ರಸೆಲ್ ಅವರನ್ನು ಕಟ್ಟಿಹಾಕಿದ್ದೊಂದು ವಿಶೇಷ.
ಅಂತಿಮ ಓವರ್ ಎಸೆಯಲು ಬಂದ ನಟರಾಜನ್ ಇಲ್ಲಿಯೂ ದೊಡ್ಡ ಯಶಸ್ಸು ಸಂಪಾದಿಸಿದರು. ನಿತೀಶ್ ರಾಣಾ ಆಟಕ್ಕೆ ತೆರೆ ಎಳೆದರು. ರಾಣಾ ಗಳಿಕೆ 36 ಎಸೆತಗಳಿಂದ 54 ರನ್ (6 ಬೌಂಡರಿ, 2 ಸಿಕ್ಸರ್). ಪ್ಯಾಟ್ ಕಮಿನ್ಸ್ ಗಳಿಕೆ ಕೇವಲ 3 ರನ್. ಆದರೆ ರಸೆಲ್ ತಮ್ಮ ಛಾತಿಗೆ ತಕ್ಕ ಪ್ರದರ್ಶನ ನೀಡಿ 49 ರನ್ ಬಾರಿಸಿ ಅಜೇಯರಾಗಿ ಉಳಿದರು. 25 ಎಸೆತ ಎದುರಿಸಿದ ರಸೆಲ್ 4 ಸಿಕ್ಸರ್, 4 ಫೋರ್ ಬಾರಿಸಿದರು. ಹೈದರಾಬಾದ್ ಪರ ಟಿ.ನಟರಾಜನ್ 3, ಉಮ್ರಾನ್ ಮಲಿಕ್ 2 ವಿಕೆಟ್ ಉಡಾಯಿಸಿದರು.
ಫಿಂಚ್, ಅಮಾನ್ ಆಟ: ಕೆಕೆಆರ್ ಪರ ಏರಾನ್ ಫಿಂಚ್ ಮತ್ತು ಅಮಾನ್ ಖಾನ್ ಪದಾರ್ಪಣೆಗೈದರು. ಜತೆಗೆ ಶೆಲ್ಡನ್ ಜಾಕ್ಸನ್ ಕೂಡ ಅವಕಾಶ ಪಡೆದರು. ಇವರಿಗಾಗಿ ಜಾಗ ಬಿಟ್ಟವರು ಅಜಿಂಕ್ಯ ರಹಾನೆ, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ರಾಸಿಖ್ ಸಲಾಂ. ಇದು ಏರಾನ್ ಫಿಂಚ್ ಪಾಲ್ಗೊಳ್ಳುತ್ತಿರುವ 9ನೇ ಐಪಿಎಲ್ ತಂಡವೆಂಬುದೊಂದು ದಾಖಲೆ. ಹೈದರಾಬಾದ್ ತಂಡದಲ್ಲಿ ಗಾಯಾಳು ವಾಷಿಂಗ್ಟನ್ ಸುಂದರ್ ಬದಲು ಕರ್ನಾಟಕದ ಜಗದೀಶ್ ಸುಚಿತ್ ಕಾಣಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್: ಕೋಲ್ಕತ 20 ಓವರ್, 175/8 (ನಿತೀಶ್ ರಾಣಾ 54, ಆಂಡ್ರೆ ರಸೆಲ್ 49, ಟಿ.ನಟರಾಜನ್ 37ಕ್ಕೆ 3, ಉಮ್ರಾನ್ ಮಲಿಕ್ 27ಕ್ಕೆ 2). ಹೈದರಾಬಾದ್ 17.5 ಓವರ್, 176/3 (ರಾಹುಲ್ ತ್ರಿಪಾಠಿ 71, ಐಡೆನ್ 68, ಆಂಡ್ರೆ ರಸೆಲ್ 20ಕ್ಕೆ 2).