Advertisement
ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನ ಗತಿಯ ಆರಂಭದ ಬಳಿಕ ಬಿರುಸಿನ ಆಟಕ್ಕಿಳಿದು 3 ವಿಕೆಟಿಗೆ 201 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ಕೊನೆಯ ಎಸೆತದ ವರೆಗೂ ಹೋರಾಟ ನಡೆಸಿತು.7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲು ಅನುಭವಿಸಿತು. ಕೊನೆಯಲ್ಲಿ ಅಶ್ವಿನ್ ಮತ್ತು ಪೊವೆಲ್ ಹೋರಾಡಿದರೂ ಗೆಲುವು ಸಾಧ್ಯವಾಗಲಿಲ್ಲ.
Related Articles
ನಿತೀಶ್ ಕುಮಾರ್ ರೆಡ್ಡಿ, ಟ್ರ್ಯಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವಿತ್ತರು.ಟಾಸ್ ಗೆದ್ದ ಹೈದರಾಬಾದ್ ಬ್ಯಾಟಿಂಗ್ ಆಯ್ದುಕೊಂಡಾಗ ದೊಡ್ಡ ಮೊತ್ತದ ನಿರೀಕ್ಷೆ ಮೂಡಿತ್ತು. ಆದರೆ ರಾಜಸ್ಥಾನ್ ತಂಡದ ಕರಾರುವಾಕ್ ಬೌಲಿಂಗ್ ದಾಳಿಗೆ ಹೈದರಾಬಾದ್ ಕುಂಟುತ್ತ ಸಾಗಿತು. ಬಿಗ್ ಹಿಟ್ಟರ್ ಟ್ರ್ಯಾವಿಸ್ ಹೆಡ್ ಕ್ರೀಸ್‌ನಲ್ಲಿದ್ದೂ ಈ ಸೀಸನ್‌ನ ಪವರ್ ಪ್ಲೇಯಲ್ಲಿ ಎಸ್‌ಆರ್‌ಎಚ್ ತನ್ನ ಕನಿಷ್ಠ ರನ್ ದಾಖಲಿಸಿತು (2ಕ್ಕೆ 37). ಸಂದೀಪ್ ಶರ್ಮ ತಮ್ಮ ಪವರ್ ಪ್ಲೇ ವಿಕೆಟ್ ಗಳಿಕೆಯನ್ನು 60ಕ್ಕೆ ಏರಿಸಿಕೊಂಡರು. ಈ ಯಾದಿಯಲ್ಲಿ ಅವರಿಗೆ 2ನೇ ಸ್ಥಾನ. 68 ವಿಕೆಟ್ ಉರುಳಿಸಿದ ಭುವನೇಶ್ವರ್ ಕುಮಾರ್ ಅಗ್ರಸ್ಥಾನದಲ್ಲಿದ್ದಾರೆ.
Advertisement
ಅಭಿಷೇಕ್ ಶರ್ಮ (12) ಮತ್ತು ಅನ್ಮ್ಮೊ ಲ್‌ಪ್ರೀತ್ ಸಿಂಗ್ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದ ಹೈದರಾಬಾದ್ ಒತ್ತಡಕ್ಕೆ ಸಿಲುಕಿತು.ಒಂದು ಹಂತದಲ್ಲಿ ಎಸೆತಕ್ಕೊಂದರಂತೆ 25 ರನ್ ಮಾಡಿದ್ದ ಹೆಡ್, 9ನೇ ಓವರ್ ಬಳಿಕ ಸಿಡಿಯಲಾರಂಭಿಸಿದರು. ಚಹಲ್ ಪಾಲಾದ ಈ ಓವರ್‌ನಲ್ಲಿ ಸತತ 2 ಸಿಕ್ಸರ್, ಒಂದು ಬೌಂಡರಿ ಬಾರಿಸಿದರು. 10 ಓವರ್ ಅಂತ್ಯಕ್ಕೆ ಸ್ಕೋರ್ 75ಕ್ಕೆ ಏರಿತು. ಹೆಡ್ ಮತ್ತು ನಿತೀಶ್ ರೆಡ್ಡಿ ಸೇರಿಕೊಂಡು ಹೈದರಾಬಾದ್ ಇನ್ನಿಂಗ್ಸ್ ಬೆಳೆಸತೊಡಗಿದರು. ಬಳಿಕ ಹೆನ್ರಿಸ್ ಕ್ಲಾಸೆನ್ ಸಿಡಿದು ನಿಂತರು. ಕೊನೆಯ 10 ಓವರ್‌ಗಳಲ್ಲಿ ಹೈದರಾಬಾದ್ ಒಂದೇ ವಿಕೆಟಿಗೆ 125 ರನ್ ಬಾರಿಸುವ ಮೂಲಕ ತಿರುಗಿ ಬಿತ್ತು. ಹೆಡ್-ರೆಡ್ಡಿ 3ನೇ ವಿಕೆಟಿಗೆ 96 ರನ್, ರೆಡ್ಡಿ-ಕ್ಲಾಸೆನ್ ಮುರಿಯದ 4ನೇ ವಿಕೆಟಿಗೆ 66 ರನ್ ಪೇರಿಸಿದರು. ನಿತೀಶ್ ರೆಡ್ಡಿ 42 ಎಸೆತಗಳಿಂದ ಅಜೇಯ 76 ರನ್ ಬಾರಿಸಿದರು. ಸಿಡಿಸಿದ್ದು 3 ಬೌಂಡರಿ ಮತ್ತು 8 ಸಿಕ್ಸರ್. ಇದರೊಂದಿಗೆ ರೆಡ್ಡಿ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಬರಿಷ್ಠ 8 ಸಿಕ್ಸರ್ ಬಾರಿಸಿದ 5ನೇ ಆಟಗಾರನೆನಿಸಿದರು. ವಾರ್ನರ್, ಮನೀಷ್ ಪಾಂಡೆ, ಹೆಡ್ ಮತ್ತು ಕ್ಲಾಸೆನ್ ಉಳಿದವರು. ಹೆಡ್ 44 ಎಸೆತ ಎದುರಿಸಿ 58 ರನ್ ಬಾರಿಸಿದರು (6 ಫೋರ್, 3 ಸಿಕ್ಸರ್). ಕ್ಲಾಸೆನ್ 19 ಎಸೆತಗಳಿಂದ ಅಜೇಯ 42 ರನ್ ಮಾಡಿದರು (3 ಬೌಂಡರಿ, 3 ಸಿಕ್ಸರ್).