Advertisement

ಟಾಮ್‌ ಮೂಡಿ ಟೀಮ್‌ ಇಂಡಿಯಾ ಕೋಚ್‌?

11:11 PM Oct 09, 2021 | Team Udayavani |

ಹೊಸದಿಲ್ಲಿ: ಟಿ20 ವಿಶ್ವಕಪ್‌ ಬಳಿಕ ರವಿಶಾಸ್ತ್ರಿ ಅವರಿಂದ ತೆರವುಗೊಳ್ಳಲಿರುವ ಟೀಮ್‌ ಇಂಡಿಯಾ ಕೋಚ್‌ ಹುದ್ದೆಗೆ ಆಸ್ಟ್ರೇಲಿಯದ ಮಾಜಿ ಆಟಗಾರ ಟಾಮ್‌ ಮೂಡಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

Advertisement

ಈ ಹಿಂದೆ ಅನೀಲ್‌ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್‌ ಅವರ ಹೆಸರು ಕೇಳಿಬರುತ್ತಿದ್ದರೂ ಬಿಸಿಸಿಐ ಮಾತ್ರ ವಿದೇಶಿ ಕೋಚ್‌ ಬಗ್ಗೆ ಒಲವು ತೋರುತ್ತಿರುವುದು ಸುದ್ದಿಯಾಗಿತ್ತು. ಈ ಹುದ್ದೆಗೀಗ ಟಾಮ್‌ ಮೂಡಿ ಹೆಸರು ಕೇಳಿಬರತೊಡಗಿದೆ.

ಆದರೆ ಈ ಬಗ್ಗೆ ಬಿಸಿಸಿಐ ಆಗಲಿ, ಟಾಮ್‌ ಮೂಡಿ ಅವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಟಾಮ್‌ ಮೂಡಿ ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡದ ಕೋಚ್‌ ಆಗಿದ್ದಾರೆ. ತಂಡ ಪಾತಾಳ ತಲುಪಿದೆ. ಹೀಗಾಗಿ ಮೂಡಿ ಮೇಲೆ ಬಿಸಿಸಿಐ ಆಸಕ್ತಿ ತೋರೀತೇ ಎಂಬ ಪ್ರಶ್ನೆಯೂ ಇಲ್ಲಿ ಕಾಡುತ್ತಿದೆ.

ಇದನ್ನೂ ಓದಿ:ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!

Advertisement

Udayavani is now on Telegram. Click here to join our channel and stay updated with the latest news.

Next