Advertisement

ಬಿಸಿಲಿನ ಪರಿಣಾಮ ಕಚೇರಿ ಸಮಯ ಬದಲು

05:50 AM Mar 28, 2019 | Vishnu Das |

ಬೆಂಗಳೂರು : ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸರಕಾರಿ ಕಚೇರಿ ಅವಧಿಯನ್ನು ಬದಲಾಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಎ. 1ರಿಂದ ಮೇ 31ರ ವರೆಗೆ ಸರಕಾರಿ ಕಚೇರಿಗಳನ್ನು ಬೆಳಗಿನ 8 ರಿಂದ ಮಧ್ಯಾಹ್ನ 1.30ರ ವರೆಗೆ ತೆರೆಯಲು ಆದೇಶಿಸಲಾಗಿದೆ.

ಕಲಬುರಗಿ ವಿಭಾಗದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿದಿನ ಬಿಸಿಲಿನ ತಾಪ ಕನಿಷ್ಠ 40 ಡಿ.ಸೆ.ನಿಂದ ಗರಿಷ್ಠ 45 ಡಿ.ಸೆ.ವರೆಗೆ ಇರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next