Advertisement

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌ ʼಬಾರ್ಡರ್‌ -2ʼ ರಿಲೀಸ್?‌

04:40 PM May 11, 2024 | Team Udayavani |

ಮುಂಬಯಿ: 1997 ರಲ್ಲಿ ಬಂದ ʼಬಾರ್ಡರ್‌ʼ ಬಾಲಿವುಡ್‌ ನಲ್ಲಿ ಆ ಕಾಲದಲ್ಲಿ ದೊಡ್ಡ ಹಿಟ್‌ ಆದ ಸಿನಿಮಾವಾಗಿತ್ತು. 1971 ರ ಇಂಡೋ – ಪಾಕ್‌ ಕದನದ ಕಥೆಯನ್ನು ಆಧಾರಿಸಿ ಬಂದ ಕಥೆಯನ್ನು ಸ್ಪೂರ್ತಿದಾಯಕವಾಗಿ ತೆರೆಮೇಲರ ತರಲಾಗಿತ್ತು.

Advertisement

ಈ ಸಿನಿಮಾದ ಸೀಕ್ವೆಲ್‌ ಬರುವುದಾಗಿ ಕೆಲ ಸಮಯದ ಹಿಂದೆ ಬಿಟೌನ್‌ ನಲಿ ಸುದ್ದಿಗಳು ಹರಿದಾಡಿತ್ತು. ʼಬಾರ್ಡರ್-2‌ʼ ಬರುವುದು ಅಧಿಕೃತವಾಗಿದ್ದು, ಸಿನಿಮಾಕ್ಕಾಗಿ ಈಗಿನಿಂದಲೇ ಸಾಕಷ್ಟು ತಯಾರಿಗಳು ಆರಂಭವಾಗಿವೆ.

ಅಂದು ʼಬಾರ್ಡರ್‌ʼ ನಲ್ಲಿ ಯೋಧನಾಗಿ ಕಾಣಿಸಿಕೊಂಡಿದ್ದ ಸನ್ನಿ ಡಿಯೋಲ್‌ ಈ ಬಾರಿ ಮೇಜರ್ ಕುಲದೀಪ್ ಸಿಂಗ್ ಚಂದೂರಿ ಅವರ ಪಾತ್ರವನ್ನು ಮಾಡಲಿದ್ದಾರೆ. ಈ ಸಿನಿಮಾದಲ್ಲಿ ನಟ ಆಯುಷ್ಮಾನ್ ಖುರಾನಾ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ.

ಅನುರಾಗ್ ಸಿಂಗ್ ʼಬಾರ್ಡರ್‌ -2ʼ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಭೂಷಣ್ ಕುಮಾರ್, ಜೆಪಿ ದತ್ತಾ ಮತ್ತು ನಿಧಿ ದತ್ತಾ ಸಿನಿಮಾಕ್ಕೆ ಜಂಟಿಯಾಗಿ ಬಂಡವಾಳ ಹಾಕಲಿದ್ದಾರೆ.

ʼಬಾರ್ಡರ್‌ -2ʼ ಕಳೆದ ಒಂದು ವರ್ಷದಿಂದ ಬರವಣಿಗೆಯ ಹಂತದಲ್ಲಿದೆ. ʼಬಾರ್ಡರ್‌ʼ ಬಗೆಗೆ ಜನರಿಗಿದ್ದ ನಿರೀಕ್ಷೆಗೆ ತಕ್ಕಹಾಗೆ ಸೀಕ್ವೆಲ್‌ ಇರಬೇಕೆನ್ನುವ ಕಾರಣದಿಂದ ಸ್ಕ್ರಿಪ್ಟ್‌ ಗಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿದೆ ಎಂದು ಮೂಲಗಳು ಹೇಳಿರುವುದಾಗಿ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

Advertisement

2026 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಿನಿಮಾ ರಿಲೀಸ್‌ ಗೆ ಚಿತ್ರತಂಡ ಪ್ಲ್ಯಾನ್‌ ಹಾಕಿಕೊಂಡಿರುವುದಾಗಿ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಜನವರಿ 23, 2026 ರಂದು ಸಿನಿಮಾ ರಿಲೀಸ್‌ ಮಾಡುವ ಯೋಜನೆಯಿದೆ.  ʼಬಾರ್ಡರ್ʼ ಕೇವಲ ಒಂದು ಚಿತ್ರವಲ್ಲ ಇದೊಂದು ಭಾವನೆಯಾಗಿದೆ. ಇದು ಭಾರತದ ಅತಿದೊಡ್ಡ ಯುದ್ಧದ ಚಿತ್ರವಾಗಲಿದೆ, ”ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.

ಈ ವರ್ಷದ ಅಂತ್ಯದ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next