Advertisement

Rashmika Mandanna: ಸಲ್ಮಾನ್‌ ಬಳಿಕ ಮತ್ತೊಬ್ಬ ಬಿಟೌನ್ ಸ್ಟಾರ್‌ ಜೊತೆ ರಶ್ಮಿಕಾ ಸಿನಿಮಾ

01:57 PM Jun 26, 2024 | Team Udayavani |

ಮುಂಬಯಿ: ʼಕಿರಿಕ್‌ ಪಾರ್ಟಿʼ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಸೌತ್‌ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗುವುದರ ಜೊತೆಗೆ ಬಾಲಿವುಡ್‌ ನಲ್ಲೂ ಬ್ಯುಸಿ ನಟಿಯಾಗುವತ್ತ ಹೆಜ್ಜೆ ಹಾಕುತ್ತಿದ್ದಾರೆ.

Advertisement

ರಣ್ಬೀರ್‌ ಕಪೂರ್‌ ಅವರ ʼಅನಿಮಲ್‌ʼ ಬಳಿಕ ಇತ್ತೀಗಷ್ಟೇ ಸಲ್ಮಾನ್‌ ಖಾನ್‌(Salman Khan) ಅವರ ʼಸಿಕಂದರ್‌ʼ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ರಶ್ಮಿಕಾ ಇದೀಗ ಮತ್ತೊಂದು ಹಿಂದಿ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್‌ ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿರುವ ದಿನೇಶ್ ವಿಜನ್ ಅವರ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕಕೊಳ್ಳಲಿದ್ದಾರೆ. ಈಗಾಗಲೇ ಬಿಟೌನ್‌ ನಲ್ಲಿ ʼಸ್ತ್ರೀʼ, ʼಭೇಡಿಯಾʼ ʼಮುಂಜ್ಯʼ ಸಿನಿಮಾಗಳಿಗೆ ಬಂಡವಾಳ ಹಾಕಿ ಗೆದ್ದಿರುವ ದಿನೇಶ್‌ ವಿಜನ್‌ ʼಮುಂಜ್ಯʼ ನಿರ್ದೇಶಕ ಆದಿತ್ಯ ಸತ್ಪೋದರ್ ಅವರೊಂದಿಗೆ ಮತ್ತೆ ಕೈಜೋಡಿಸಲಿದ್ದಾರೆ.

ಇದನ್ನೂ ಓದಿ: ಸ್ಥಳ ಮಹಜರು ವೇಳೆ ಪವಿತ್ರಾಗೆ ಲಿಪ್‌ ಸ್ಟಿಕ್‌ ಹಚ್ಚಲು ಅವಕಾಶ: ಮಹಿಳಾ PSIಗೆ ನೋಟಿಸ್

ಈ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ(Ayushmann Khurrana) ಮತ್ತು ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಹಾರಾರ್‌ ಕಾಮಿಡಿ ಚಿತ್ರವಾಗಿರಲಿದ್ದು ಇದಕ್ಕೆ ʼವ್ಯಾಂಪೈರ್ಸ್‌ ಆಫ್ ವಿಜಯ್ ನಗರ್‌ʼ(Vampires of Vijay Nagar) ಎಂದು ಟೈಟಲ್‌ ಇಡಲಾಗಿದೆ.

Advertisement

ಆಯುಷ್ಮಾನ್‌ ಈ ಹಿಂದೆ ದಿನೇಶ್‌ ನಿರ್ಮಾಣದ ʼಬಾಲಾʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರ ಈ ವರ್ಷದ ನವೆಂಬರ್‌ ತಿಂಗಳಿನಲ್ಲಿ  ಸೆಟ್‌ ಏರಲಿದೆ ಎನ್ನಲಾಗುತ್ತಿದೆ.

ರಶ್ಮಿಕಾ ಹಾಗೂ ಆಯುಷ್ಮಾನ್‌ ಇದೇ ಮೊದಲ ಬಾರಿ ಜೊತೆಯಾಗಿ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಸಲ್ಮಾನ್‌ ಖಾನ್‌ ಅವರ ʼಸಿಕಂದರ್‌ʼ ಮುಗಿಸಿದ ಬಳಿಕ ʼವ್ಯಾಂಪೈರ್ಸ್‌ ಆಫ್ ವಿಜಯ್ ನಗರ್‌ʼ ಅಖಾಡಕ್ಕೆ ಕಾಲಿಡಲಿದ್ದಾರೆ.  ಇತ್ತ ಆಯುಷ್ಮಾನ್‌ ʼಬಾರ್ಡರ್-2‌ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next