Advertisement

Jr NTR – ಪ್ರಶಾಂತ್‌ ನೀಲ್‌ ಚಿತ್ರದಲ್ಲಿ ಬಾಬಿ ಡಿಯೋಲ್‌ ವಿಲನ್?‌ ನಾಯಕಿಯಾಗಿ ಈ ನಟಿ?

06:02 PM Jun 22, 2024 | Team Udayavani |

ಹೈದರಾಬಾದ್:‌ ʼಸಲಾರ್‌ʼ ಸರಣಿ ಬಳಿಕ ನಿರ್ದೇಶಕ ಪ್ರಶಾಂತ್‌ ನೀಲ್ ಜೂ.ಎನ್‌ ಟಿಆರ್‌ ಜೊತೆ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಅನೌನ್ಸ್‌ ಆಗಿರುವ ಈ ಸಿನಿಮಾದ ಬಗ್ಗೆ ಪ್ಯಾನ್‌ ಇಂಡಿಯಾದಲ್ಲಿ ಕುತೂಹಲ ಹೆಚ್ಚಾಗಿದೆ.

Advertisement

‘ಆರ್ ಆರ್‌ ಆರ್ʼ ಜೂ.ಎನ್‌ಟಿಆರ್‌ ʼದೇವರʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿರುವ ಜೂ.ಎನ್‌ಟಿಆರ್‌ ಇದಾದ ಬಳಿಕ ಪ್ರಶಾಂತ್‌ ನೀಲ್‌ ಅವರೊಂದಿಗೆ ಸಿನಿಮಾವನ್ನು ಮಾಡಲಿದ್ದಾರೆ.

ʼಎನ್‌ ಟಿಆರ್‌ 31ʼ ಎನ್ನುವ ಟೈಟಲ್‌ ತಾತ್ಕಾಲಿಕವಾಗಿ ಇಡಲಾಗಿದೆ. ಈ ಸಿನಿಮಾಕ್ಕೆ ʼಡ್ರ್ಯಾಗನ್‌ʼ ಎನ್ನುವ ಪವರ್‌ ಫುಲ್‌ ಟೈಟಲ್‌ ಇಡಲಾಗಿದೆ ಎನ್ನಲಾಗಿದೆ. ಆದರೆ ಇದು ಅಧಿಕೃತವಾಗಿ ಅನೌನ್ಸ್‌ ಆಗಿಲ್ಲ.

ಇದೀಗ ಸಿನಿಮಾದ ಬಗ್ಗೆ ಟಾಲಿವುಡ್‌ ನಲ್ಲಿ ಲೇಟೆಸ್ಟ್‌ ಅಪ್ಡೇಟ್ಸ್‌ ಹರಿದಾಡುತ್ತಿದೆ.  ಈಗಾಗಲೇ ʼಅನಿಮಲ್‌ʼ ನಲ್ಲಿ ನೆಗೆಟಿವ್‌ ಶೇಡ್‌ ನಲ್ಲಿ ಮಿಂಚಿ, ʼಕಂಗುವʼ ಸೇರಿದಂತೆ ದಕ್ಷಿಣದ ಕೆಲ ಸಿನಿಮಾಗಳಲ್ಲಿ ಖಡಕ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿರುವ ಬಾಬಿ ಡಿಯೋಲ್‌  ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾದಲ್ಲಿ ವಿಲನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಳ್ಳಲಿದ್ದಾರೆ  ಎನ್ನುವ ಸುದ್ದಿಯೊಂದು ಹರಿದಾಡಿದೆ.

ಮುಂದಿನ ದಿನಗಳಲ್ಲಿ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.

Advertisement

ಸದ್ಯ ಪ್ರಶಾಂತ್‌ ನೀಲ್‌ ʼಸಲಾರ್-2‌ʼ ಕೆಲಸದಲ್ಲಿ ಬ್ಯುಸಿಯಾಗಲಿದ್ದು,ಜೂ.ಎನ್‌ ಟಿಆರ್‌ ʼದೇವರ-1ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next