Advertisement

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌ ʼಬಾರ್ಡರ್‌ -2ʼ ಅನೌನ್ಸ್

04:08 PM Jun 13, 2024 | Team Udayavani |

ಮುಂಬಯಿ: ನಟ ಸನ್ನಿ ಡಿಯೋಲ್‌ ʼಗದರ್-2‌ʼ ಸೀಕ್ವೆಲ್‌ ಬಳಿಕ ಮತ್ತೊಂದು ಬಹು ನಿರೀಕ್ಷಿತ ಸೀಕ್ವೆಲ್‌ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿದ್ದಾರೆ. ಆ ಮೂಲಕ ಮತ್ತೊಂದು ಮೆಗಾ ಹಿಟ್‌ ನತ್ತ ಮುಖ ಮಾಡಿದ್ದಾರೆ.

Advertisement

1997 ರಲ್ಲಿ ಬಂದ ʼಬಾರ್ಡರ್‌ʼ ಸನ್ನಿ ಡಿಯೋಲ್‌ ಅವರ ವೃತ್ತಿ ಜೀವನದಲ್ಲಿ ವಿಶೇಷ ಸಿನಿಮಾ. ದೇಶ ಪ್ರೇಮವನ್ನು ಸಾರಿದ ʼಬಾರ್ಡರ್‌ʼ ಸಿನಿಮಾದ ಸೀಕ್ವೆಲ್‌ ಬರಲಿದೆ ಎನ್ನುವ ಸುದ್ದಿಯೊಂದು ಬಿಟೌನ್‌ ವಲಯದಲ್ಲಿ ಕಳೆದ ಕೆಲ ಸಮಯದಿಂದ ಹರಿದಾಡುತ್ತಿತ್ತು. ಇದಕ್ಕಾಗಿ ನಿರ್ಮಾಪಕರು ತೆರೆಮೆರೆಯಲ್ಲಿ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿತ್ತು.

ಇದೀಗ ʼಬಾರ್ಡರ್-2‌ʼ ಸಿನಿಮಾ ಬರುವುದು ಅಧಿಕೃತವಾಗಿದ್ದು, ಸ್ವತಃ ಸನ್ನಿ ಡಿಯೋಲ್‌ ವಿಡಿಯೋವೊಂದನ್ನು ಹಂಚಿಕೊಂಡು ಹೇಳಿದ್ದಾರೆ.

1971 ರ ಇಂಡೋ – ಪಾಕ್‌ ಕದನದ ಕಥೆಯನ್ನು ಆಧಾರಿಸಿ 1997 ರಲ್ಲಿ ತೆರೆಗೆ ಬಂದ ʼಬಾರ್ಡರ್‌ʼ ಸಿನಮಾ ಬಾಲಿವುಡ್‌ ನಲ್ಲಿ ದೊಡ್ಡ ಹಿಟ್‌ ಆಗಿತ್ತು. ಜೆಪಿ ದತ್ತಾ ಮತ್ತು ನಿಧಿ ದತ್ತಾ ಅವರು ನಿರ್ಮಾಣ ಮಾಡಿದ್ದರು.

ಒಬ್ಬ ಯೋಧ ತನ್ನ 27 ವರ್ಷ ಹಿಂದಿನ ಮಾತನ್ನು ಪೂರ್ತಿಗೊಳಿಸಲು ಮತ್ತೆ ಬರುತ್ತಿದ್ದಾನೆ ಎನ್ನುವ ಕ್ಯಾಪ್ಷನ್‌ ನೀಡಿ ಸನ್ನಿ ಡಿಯೋಲ್‌ ʼಬಾರ್ಡರ್‌ -2ʼ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಭಾರತದ ಅತಿ ದೊಡ್ಡ ಯುದ್ಧದ ಚಿತ್ರವಾಗಿರಲಿದೆ ಎಂದು ಬರೆದುಕೊಂಡಿದ್ದಾರೆ.

Advertisement

ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಇರಲಿದ್ದಾರೆ ಎನ್ನಲಾಗಿತ್ತು. ಆದರೆ ಅನೌನ್ಸ್‌ ಮೆಂಟ್‌ ವಿಡಿಯೋದಲ್ಲಿ ಅವರ ಹೆಸರು ಎಲ್ಲೂ ಕೂಡ ಉಲ್ಲೇಖವಾಗಿಲ್ಲ. ಮುಂದಿನ ದಿನಗಳಲ್ಲಿ ಅವರ ಪಾತ್ರದ ಬಗ್ಗೆ ಪ್ರತ್ಯೇಕವಾಗಿ ಅನೌನ್ಸ್‌ ಮೆಂಟ್‌ ಆಗಲಿದೆ ಎನ್ನಲಾಗಿದೆ.

ಚಿತ್ರವನ್ನು ಟಿ-ಸೀರೀಸ್ ಮತ್ತು ಜೆಪಿ ಫಿಲ್ಮ್ಸ್ ನಿರ್ಮಾಣ ಮಾಡಲಿದ್ದು, ಅನುರಾಗ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಮೂಲಗಳ ಪ್ರಕಾರ ಈ ವರ್ಷದ ಅಕ್ಟೋಬರ್‌ ನಿಂದ ʼಬಾರ್ಡರ್-2‌ʼ ಸೆಟ್ಟೇರಲಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next